ವಾಣಿಜ್ಯೋದ್ಯಮಿಯಾಗಲು ಪ್ರೇರಣೆ ಈ ಸಮೋಸಾ ಮಾರಾಟಗಾರ ಹಾಗು ಮ್ಯಾನೇಜರ್ ನಡುವಿನ ಸಂಭಾಷಣೆ

0
750

ದೆಹಲಿಯಲ್ಲಿ ಒಬ್ಬ ಸಮೋಸಾ ಮಾರಾಟಗಾರನಿದ್ದ. ಆತನ ಅಂಗಡಿಯು ಒಂದು ದೊಡ್ಡ ಕಂಪನಿಯ ಮುಂದೆ ಇತ್ತು. ಅವನ ಸಮೋಸ ಬಹಳ ರುಚಿಕರವಾಗಿತ್ತು ಆದ್ದರಿಂದ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಊಟದ ಸಮಯದಲ್ಲಿ ಸಮೋಸಾ ತಿನ್ನಲು ಬರುತ್ತಿದ್ದರು.

ಒಂದು ದಿನ ಮ್ಯಾನೇಜರ್ ಒಬ್ಬನು ಸಮೋಸಾ ಅಂಗಡಿಗೆ ಬಂದನು. ಅವನು ಸಮೋಸಾ ತಿನ್ನುವ ಸಂದರ್ಭದಲ್ಲಿ ಒಂದು ಪ್ರಶ್ನೆ ಕೇಳುತ್ತಾನೆ: ‘ನೀವು ಚೆನ್ನಾಗಿ ನಿಮ್ಮ ಅಂಗಡಿ ನಿಭಾಯಿಸುತ್ತಿದ್ದೀರಾ ಮತ್ತು ಉತ್ತಮ ನಿರ್ವಹಣೆ. ನೀವು ಕೇವಲ ಸಮೋಸಾಗಳ ಮಾರಾಟ ಮಾಡುವುದರಿಂದ ನಿಮ್ಮ ಪ್ರತಿಭೆ ಮತ್ತು ಸಮಯ ವ್ಯರ್ಥವಾಗುವುದಿಲ್ಲವೇ ?’ ಒಮ್ಮೆ ಯೋಚಿಸಿ
ನೀವು ಯಾವುದಾದರೂ ದೊಡ್ಡ ಕಂಪನಿಯಲ್ಲಿ ನನ್ನಂತೆ ಕೆಲಸ ಮಾಡಿದ್ದರೆ, ನೀವು ನನ್ನ ಹಾಗೆ ಮ್ಯಾನೇಜರ್ ಆಗ ಬಹುದಿತ್ತು ಅಲ್ಲವೇ? ‘

ಅದಕ್ಕೆ ಉತ್ತರವಾಗಿ ಸಮೋಸಾ ಮಾರುವವನು ನಗುತ್ತಾ
‘ಸರ್, ನನ್ನ ಕೆಲಸ ನಿಮ್ಮ ಕೆಲಸಕಿಂತ ಉತ್ತಮ ಎಂದು ಭಾವಿಸಿರುವೆ,ಏಕೆ ಗೊತ್ತಾ? 10 ವರ್ಷಗಳ ಹಿಂದೆ ನಾನು ಬುಟ್ಟಿಯಲ್ಲಿ ಸಮೋಸಾ ಮಾರಾಟ ಮಾಡುತ್ತಿದ್ದೆ . ಅದೇ ಸಮಯದಲ್ಲಿ ನೀವು ಈ ಕೆಲಸಕ್ಕೆ ಸೇರಿದಿರಿ. ಆ ಸಮಯದಲ್ಲಿ ನಾನು ಒಂದು ತಿಂಗಳಲ್ಲಿ 1,000 ರೂ ಗಳಿಸುತ್ತಿದ್ದೆ, ನಿಮ್ಮ ಸಂಬಳ 10,000 ರೂ ಆಗಿತ್ತು. 10 ವರ್ಷಗಳಲ್ಲಿ ನಾನು ಬಹಳಷ್ಟು ಪ್ರಗತಿ ಹೊಂದಿದ್ದೇನೆ ,

ನಾನು ನನ್ನದೇ ಮಾಲೀಕತ್ವದ ಅಂಗಡಿ ತೆರೆದಿರುವೆ ಮತ್ತು ಈ ಪ್ರದೇಶದಲ್ಲಿ ಪ್ರಸಿದ್ಧ ಸಮೋಸಾ ಮಾರಾಟಗಾರನಾಗಿರುವೆ.

ನಾನು ನಿಮ್ಮಷ್ಟೇ ಹಣ ಸಂಪಾದನೆ ಮಾಡುತ್ತಿರುವೆ 1 ಲಕ್ಷ ಕೆಲವು ಬಾರಿ ಅದಕ್ಕಿಂತ ಹೆಚ್ಚು .

ನನ್ನ ಕೆಲಸ ನಿಮ್ಮ ಕೆಲಸಕ್ಕಿಂತ ಉತ್ತಮ ಎಂದು ಹೇಳಬಹುದು ಏಕೆಂದರೆ ನನ್ನ ಮಕ್ಕಳು ಭವಿಷ್ಯ ಉಜ್ವಲವಾಗಿದೆ .ನಾನು ಕಡಿಮೆ ಆದಾಯದಲ್ಲಿ ನನ್ನ ವೃತ್ತಿಜೀವನವನ್ನು ಆರಂಭಿಸಿದರು ನನ್ನ ಮಗ ಅದೇ ಕಷ್ಟದಿಂದ ಬಳಲುವ ಅವಶ್ಯಕತೆ ಇಲ್ಲ . ಒಂದು ದಿನ ನನ್ನ ಮಗ ನನ್ನ ಉದ್ದಿಮೆಯನ್ನು ತೆಗೆದುಕೊಳ್ಳುತ್ತಾನೆ. ಆತ ಸಂಪೂರ್ಣವಾಗಿ ೦ ಯಿಂದ ವ್ಯಾಪಾರ ಪ್ರಾರಂಭಿಸಬೇಕಾಗಿಲ್ಲ ಆದರೆ ನಿಮ್ಮ ವಿಷಯದಲ್ಲಿ ನಿಮ್ಮ ಕಂಪನಿಯ ಮಾಲೀಕರ ಮಗನಿಗೆ ಈ ಎಲ್ಲ ಸೌಲಭ್ಯಗಳು ದೊರಕುತ್ತವೆ .

ನಿಮ್ಮ ಮಗ ಅಥವಾ ಮಗಳಿಗೆ ನಿಮ್ಮದೇ ಪೋಸ್ಟ್ ನೀಡಲು ಸಾಧ್ಯವಿಲ್ಲ. ಅವರು ಮತ್ತೆ ಶೂನ್ಯದಿಂದ ಪ್ರಾರಂಭಿಸಬೇಕು. ನೀವು 10 ವರ್ಷಗಳ ಹಿಂದೆ ಅನುಭವಿಸಿದ ಕಷ್ಟವನ್ನು ನಿಮ್ಮ ಮಕ್ಕಳು ಅನುಭವಿಸುತ್ತಾರೆ. ನನ್ನ ಮಗ ಈಗ ನನ್ನ ಉದ್ಯಮವನ್ನು ವಿಸ್ತರಣೆಗೊಳಿಸುತ್ತಾನೆ ಮತ್ತು ನಿಮ್ಮ ಮಗು ಮ್ಯಾನೇಜರ್ ಆಗಿರುತ್ತಾನೆ . ನನ್ನ ಮಗ ಉನ್ನತ ಮಟ್ಟದಲ್ಲಿ ಇರುತ್ತಾನೆ. ಈಗ ಪ್ರತಿಭೆ ಮತ್ತು ಸಮಯ ವ್ಯರ್ಥ ಮಾಡುತ್ತಿರುವುದು ಯಾರು ಹೇಳಿ ?? ‘
ಮ್ಯಾನೇಜರ್ ಎರಡು ಸಮೋಸಾದ 50 ರೂ ನೀಡಿ ಏನು ಮಾತಾಡದೆ ಹೊರಟು ಹೋದರು.

ಇದು ಒಂದು ಉತ್ತಮ ಪಾಠವಲ್ಲವೇ ವಾಣಿಜ್ಯೋದ್ಯಮಿ ಆಗಲು.