ರುಚಿಕರವಾದ ಮತ್ತು ದಿಢೀರನೆ ತಯಾರಿಸಬಹುದಾದ ರವಾ ಮಸಾಲಾ ದೋಸೆ ಮಾಡುವ ಸಿಂಪಲ್ ವಿಧಾನ..!!

0
1600

ಬೇಕಾಗುವ ಸಾಮಗ್ರಿಗಳು

 • ಸಣ್ಣರವೆ
 • ಮೈದಾ
 • ಹಸಿರು ಮೆಣಸಿನಕಾಯಿಯ
 • ಕರಿಬೇವಿನ ಎಲೆಗಳು
 • ಕೊತ್ತಂಬರಿಸೊಪ್ಪು
 • ಜೀರಿಗೆ 1 ಟೀಚಮಚ
 • ಮಜ್ಜಿಗೆ 1 ಚಮಚ
 • ಉಪ್ಪು ರುಚಿಗೆ ತಕ್ಕಷ್ಟು
 • ಈರುಳ್ಳಿ
 • ಶುಂಠಿ
 • ಕಾಯಿತುರಿ

ಮಾಡುವ ವಿಧಾನ

 1. ಮೊದಲು ಸಣ್ಣರವೆಯನ್ನು ತೊಳೆದು ನೀರನ್ನು ಬಸಿದಿಟ್ಟುಕೊಳ್ಳಬೇಕು. ತುಸು ಹೊತ್ತಿನಲ್ಲಿಯೇ ಅದು ತುಂಬಾ ಮೃದುವಾಗುತ್ತದೆ.
 2. ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಹಸಿಮೆಣಸು, ಶುಂಠಿ ಹಾಗೂ ಈರುಳ್ಳಿಯ (ಸಣ್ಣದಾಗಿ ಹೆಚ್ಚಿಕೊಳ್ಳಿ) ಜೊತೆಗೆ ಕಾಯಿತುರಿಯನ್ನು ಸೇರಿಸಿ ಸ್ವಲ್ಪ ನೀರನ್ನು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಬೇಕು.
 3. ರುಬ್ಬಿದ ಮಿಶ್ರಣವನ್ನು ರವೆಯೊಂದಿಗೆ ಸೇರಿಸಿ ಉಪ್ಪನ್ನು ಹಾಕಿ ಒಮ್ಮೆ ಮಿಕ್ಸರ್‌ಗೆ ಹಾಕಿ ರುಬ್ಬಬೇಕು.
 4. ಬೇಕಿದ್ದರೆ ಸ್ವಲ್ಪ ಮಜ್ಜಿಗೆ ಸೇರಿಸಿ ದೋಸೆಹಿಟ್ಟಿನ ಹದಕ್ಕೆ ತರಬೇಕು.
 5. ಬಾಣಲೆಯನ್ನು ಕಾಯಲಿಟ್ಟು ದೋಸೆಹಿಟ್ಟನ್ನು ತೆಳ್ಳಗೆ ಹೊಯ್ಯಬೇಕು. ಬಾಯಲ್ಲಿ ನೀರೂರಿಸುವ ರವೆ ದೋಸೆ ಚಟ್ನಿ ಜೊತೆ ಸವಿಯಲು ಬಲು ರುಚಿ.