ಒಡೆದ ಹಾಲನ್ನು ಚೆಲ್ಲುವ ಬದಲು ರುಚಿ ರುಚಿಯಾದ ರಸಗುಲ್ಲ ಮಾಡಿ ಸವಿದು ನೋಡಿ..!!

0
830

ರಸಗುಲ್ಲ ನೆನಪಿಗೆ ಬಂದರೆ ಬಾಯಿಯಲ್ಲಿ ಜುಳು ಜುಳು ನೀರು ಬರುತ್ತೆ. ಹಾಗೆಯೇ ಎಲ್ಲರ ಮನಸ್ಸೂ ಚಂಚಲಗೊಳ್ಳುತ್ತೆ ಇಂತಹ ರಸಗುಲ್ಲ ಹಿಂದೆ 2 ವರ್ಷಗಳ ರೋಚಕ ಕತೆಯಿದೆ.

Also read: ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಸಿಹಿಯಲ್ಲಿ ಒಂದಾದ ಜಿಲೇಬಿಯನ್ನು ಮನೆಯಲ್ಲೇ ಸಿಂಪಲ್ ಆಗಿ ಮಾಡುವ ವಿಧಾನ..!!

2015ರಲ್ಲಿ ಒಡಿಶಾ ಸರಕಾರ ರಸಗುಲ್ಲವನ್ನು ಸಾಂಪ್ರದಾಯಿಕ ಸಿಹಿಯೆಂದು ಘೋಷಿಸಲು ಮುಂದಾಯಿತು. ಅದರ ವಿರುದ್ಧ ಪಶ್ಚಿಮ ಬಂಗಾಲ ಸರಕಾರ ಆಕ್ಷೇಪ ಮಾಡಿ, ತಗಾದೆ ತೆಗೆಯಿತು. ಆದರೆ ಹಠಬಿಡದ ಒಡಿಶಾ, ರಸಗುಲ್ಲ ಮೂಲವನ್ನು ಕೆದಕಲು ಹಲವು ಸಮಿತಿಗಳನ್ನು ರಚಿಸಿತು. ಜು. 30ರಂದು “ರಸಗುಲ್ಲ ದಿನ’ ಎಂದು ಆಚರಿಸುವುದಾಗಿಯೂ ಘೋಷಿಸಿತು. ಈಗ ಅವೆಲ್ಲದಕ್ಕೂ ಬ್ರೇಕ್‌ ಬಿದ್ದಿದೆ. ರಸಗುಲ್ಲ ಪಶ್ಚಿಮ ಬಂಗಾಲದ ಸಾಂಪ್ರ ದಾಯಿಕ ತಿನಿಸು ಎಂದು ಚೆನ್ನೈಯಲ್ಲಿರುವ ಜಿಯೋಗ್ರಾಫಿಕಲ್‌ ಇಂಡಿಕೇಷನ್‌ ಸಂಸ್ಥೆ ತಿಳಿಸಿದೆ. ಇಷ್ಟೊಂದು ಹೆಸರುವಾಸಿಯಾಗಿರುವ ರಸಗುಲ್ಲವನ್ನು ನಿಮ್ಮ ಮನೆಯಲ್ಲಿ ಸುಲಭವಾಗಿ ಮಾಡಿಕೊಳ್ಳುವ ವಿಧಾನ ಇಲ್ಲಿದೆ ನೋಡಿ.

ಬೇಕಾದ ಪದಾರ್ಥಗಳು;

Also read: ನಿಮ್ಮ ಡಯೆಟ್, ಕೊಲೆಸ್ಟ್ರಾಲ್ ಭಯವಿಲ್ಲದೆ ಈ ಸಲದ ಗಣೇಶ್’ ನ ಹಬ್ಬಕೆ ಓಟ್ಸ್ ಲಾಡು ಮಾಡಿ ಸವಿಯರಿ!!

 • ಒಂದು ಲೀಟರ್ ಹಾಲು
 • ಎರಡು ಚಮಚ ನಿಂಬೆಹಣ್ಣಿನ ರಸ
 • ಅರ್ಧ ಚಮಚ ಸಣ್ಣ ರವೆ
 • ಮತ್ತು ಅರ್ಧ ಕೆ.ಜಿ ಸಕ್ಕರೆ

ಮಾಡುವ ವಿಧಾನ:

Also read: ಆರೋಗ್ಯಯುಕ್ತ ಸ್ಟ್ರಾಬೆರ್ರಿ, ಪೈನಾಪಲ್ ಕೇಸರಿಬಾತ್ ತಯಾರಿಸುವ ವಿಧಾನ..!!

 • ಮೊದಲು ಹಾಲನ್ನು ಕಾಯಿಸಿಕೊಳ್ಳಬೇಕು. ಕಾದಿರುವ ಹಾಲಿಗೆ ನಿಂಬೆರಸ ಹಿಂಡಿ ಅರ್ಧ ನಿಮಿಷ ಕುದಿಸಿ ಕೆಳಗಿಳಿಸಿ
 • ಒಡೆದ ಹಾಲಿದ್ದರೆ- ತೆಳು ಬಟ್ಟೆಯಲ್ಲಿ ಒಡೆದ ಹಾಲನ್ನು ಶೋಧಿಸಿ ಗಟ್ಟಿ ಭಾಗವನ್ನು ಬಟ್ಟೆಯಲ್ಲಿಯೇ ಸುತ್ತಿ 2 ಗಂಟೆ ನಂತರ ಗಂಟು ಬಿಚ್ಚಿ ಒಂದು ತಟ್ಟೆಯಲ್ಲಿ ಈ ಮಿಶ್ರಣವನ್ನು 10 ನಿಮಿಷ ಚೆನ್ನಾಗಿ ನಾದಬೇಕು.
 • ಉಂಡೆಗಳನ್ನು ಮಾಡಲು ಸುಲಭವಾಗಲೆಂದು ಸ್ವಲ್ಪ ಸಣ್ಣ ರವೆ ಬೆರೆಸಬಹುದು. ಈ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಂಡು ಒಂದು ತಟ್ಟೆಯಲ್ಲಿಡಬೇಕು.
 • ಈಗ ಸಕ್ಕರೆ ನೀರನ್ನು ಒಲೆಯ ಮೇಲಿಟ್ಟು ಕುದಿಸಿದ ನಂತರ ಅದರಲ್ಲಿ ಕಾಲು ಭಾಗವನ್ನು ಇನ್ನೊಂದು ಪಾತ್ರೆಗೆ ಹಾಕಿ. ಒಲೆಯ ಮೇಲೆ ಇರುವ ಪಾಕಕ್ಕೆ ಉಂಡೆ ಮಾಡಿದ ಮಿಶ್ರಣ ಹಾಕಿ. ಸ್ವಲ್ಪ ದೊಡ್ಡ ಉರಿಯಲ್ಲಿ ಕುದಿಸಿ. ಆದರೆ ತಳ ಸೀಯದಂತೆ ನೋಡಿಕೊಳ್ಳಿ.
 • ತೆಗೆದಿಟ್ಟುಕೊಂಡಿರುವ ಪಾಕವನ್ನು ಆಗಾಗ್ಗೆ ಉಂಡೆಗಳ ಮೇಲೆ ಚುಮುಕಿಸುತ್ತಿರಬೇಕು.
 • ಉಂಡೆ ಸಕ್ಕರೆ ಪಾಕದಲ್ಲೇ ಅರ್ಧ ಗಂಟೆ ಬೇಯಬೇಕು. ಬೆಂದ ನಂತರ ಉಂಡೆಗಳು ಉಬ್ಬುತ್ತದೆ. ನಂತರ ಪಾಕದ ಸಮೇತ ಹಾಗೇ ಇಳಿಸಿ.
  ಈಗ ರುಚಿಭರಿತ ರಸಗುಲ್ಲ ತಿನ್ನಲು ರೆಡಿ. ಇದನ್ನು ಒಂದು ದಿನದ ನಂತರ ಬಿಟ್ಟು ತಿಂದರೆ ಇನ್ನೂ ರುಚಿ ಹೆಚ್ಚು.