ದೇಶದ ಗುಪ್ತಚರ ಸಂಸ್ಥೆಯಲ್ಲಿ ಕೆಲಸ ಮಾಡುವ ಕನಸು ನಿಮ್ಮದೇ? ಹಾಗಿದ್ದಲ್ಲಿ ಇಲ್ಲೊಂದು ಸಿಹಿಸುದ್ದಿ..

0
666

ದೇಶದ ಗೃಹ ಸಚಿವಾಲಯದ ಅಧೀನದಲ್ಲಿರುವ ಇಂಟಲಿಜೆನ್ಸ್‌ ಬ್ಯುರೊದಲ್ಲಿ ಆಫೀಸರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಒಟ್ಟು 1,430 ಹುದ್ದೆಗಳಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಖಾಲಿ ಹುದ್ದೆಗಳ ಸಂಖ್ಯೆ: 1,430

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್‌ 2, 2017

-ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕ (ರಾಜ್ಯದ ಅಭ್ಯರ್ಥಿಗಳು ಬೆಂಗಳೂರಿನಲ್ಲೇ ಪರೀಕ್ಷೆ ಬರೆಯಬಹುದು.)

ವಿವರಗಳಿಗೆ: www.mha.nic.in

ಹುದ್ದೆಗಳ ವಿವರ:
ಒಟ್ಟು ಹುದ್ದೆಗಳಲ್ಲಿ 130 ಹುದ್ದೆಗಳನ್ನು ಎಕ್ಸ್‌ ಸವೀರ್‍ಸ್‌ಮನ್‌ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಇನ್ನುಳಿದಂತೆ ಎಸ್‌ಸಿ ಅಭ್ಯರ್ಥಿಗಳಿಗೆ 109, ಎಸ್‌ಟಿ ಅಭ್ಯರ್ಥಿಗಳಿಗೆ 56 ಮತ್ತು ಒಬಿಸಿ ವರ್ಗದವರಿಗೆ 184 ಹುದ್ದೆಗಳನ್ನು ಮೀಸಲಿಡಲಾಗಿದೆ.

ಅರ್ಹತೆಗಳೇನು?
ದೇಶದ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅಭ್ಯರ್ಥಿಗಳ ವಯಸ್ಸು
18 ರಿಂದ 27 ವರ್ಷದೊಳಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 30 ವರ್ಷಗಳಿಗೆ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಾಗಿದ್ದಲ್ಲಿ 32 ವರ್ಷಗಳಿಗೆ ನಿಗದಿಪಡಿಸಲಾಗಿದೆ.

ಪರೀಕ್ಷಾ ಶುಲ್ಕ:
ಸಾಮಾನ್ಯ ಮತ್ತು ಒಬಿಸಿ ಪುರುಷ ಅಭ್ಯರ್ಥಿಗಳು ಮಾತ್ರ ಪರೀಕ್ಷಾ ಶುಲ್ಕವಾಗಿ 100 ರೂ. ಪಾವತಿಸಬೇಕು. ಉಳಿದ ಎಲ್ಲಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ನೀಡಲಾಗಿದೆ. ಶುಲ್ಕವನ್ನು ಆನ್‌ಲೈನ್‌ ಮತ್ತು ಆಫ್‌ ಲೈನ್‌ನಲ್ಲಿ ಪಾವತಿಸಲು ಅವಕಾಶ ನೀಡಲಾಗಿದೆ.

ಪರೀಕ್ಷೆ ಹೇಗಿರುತ್ತದೆ?

  • ಎರಡು ಹಂತದ ಪರೀಕ್ಷೆ (ಟೈರ್‌ -1 ಮತ್ತು ಟೈರ್‌-2)ನಡೆಯಲಿದೆ .
  • ಮೊದಲ ಹಂತದ ಪರೀಕ್ಷೆಯು 100 ಅಂಕಗಳಿಗೆ ನಡೆಯಲಿದ್ದು, ಜನರಲ್‌ ಅವೇರ್ನೆಸ್‌, ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌, ಲಾಜಿಕಲ್‌/ಅನಾಲಿಟಿಕಲ್‌ ಎಬಿಲಿಟಿ ಮತ್ತು ಇಂಗ್ಲಿಷ್‌ ಲಾಂಗ್ವೇಜ್‌ಗೆ ಸಂಬಂಧಪಟ್ಟಂತೆ ತಲಾ 25 ಅಂಕಗಳ ತಲಾ 25 ಪ್ರಶ್ನೆಗಳಿರಲಿವೆ.
  • ಟೈರ್‌-2 ಪರೀಕ್ಷೆಯು ವಿವರಣಾತ್ಮಕ ಮಾದರಿಯಲ್ಲಿ ನಡೆಯಲಿದೆ. ಎಸ್ಸೆ ಮತ್ತು ಇಂಗ್ಲಿಷ್‌ ಕಾಂಪ್ರಹೆನ್ಷನ್‌ಗೆ ಸಂಬಂಧಪಟ್ಟಂತೆ 100 ಅಂಕಗಳ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕಾಗುತ್ತದೆ.
  • ಎರಡೂ ಪತ್ರಿಕೆಗಳಿಗೆ ತಲಾ ಒಂದು ಗಂಟೆ ಉತ್ತರಿಸಲು ಸಮಯ ನೀಡಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರ ಸಂದರ್ಶನ ನಡೆಸಲಾಗುತ್ತದೆ.
  • ಟೈರ್‌-1 ಪರೀಕ್ಷೆಯಲ್ಲಿ ನೆಗೆಟಿವ್‌ ಮಾರ್ಕ್ಸ್‌ ಇರಲಿದ್ದು, ಉತ್ತರ ಗುರುತಿಸಿರದೇ ಇದ್ದಲ್ಲಿ ಅಂಕಗಳನ್ನು ಕಳೆಯಲಾಗುವುದಿಲ್ಲ. ಈ ಪರೀಕ್ಷೆಯಲ್ಲಿ ಒಂದಿಷ್ಟು ಅರ್ಹತೆ ಪಡೆದವರನ್ನು ಮಾತ್ರ ಟೈರ್‌-2 ಪರೀಕ್ಷೆಗೆ ಪರಿಗಣಿಸಲಾಗುತ್ತದೆ.
  • ಟೈರ್‌-1 ಮತ್ತು ಟೈರ್‌-2 ಎರಡೂ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ಸಂದರ್ಶನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.