ಉಪೇಂದ್ರ ಕಟ್ಟಿದ ಪಕ್ಷದಿಂದಾನೇ ಉಪೇಂದ್ರರನ್ನು ಹೊರಹಾಕುತ್ತಾರ? ಹೊಸ ಪಕ್ಷ ಹುಟ್ಟೋಕೂ ಮೊದಲೇ ಕೆಟ್ಟ ರಾಜಕೀಯಕ್ಕೆ ಬಲಿಯಾಗುತ್ತಾ ಉಪೇಂದ್ರರ ಕನಸು??

0
586

Kannada News | Karnataka News

ಇದೆ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ದಿಸುತ್ತಿರುವ ಅತಿ ಕುತೂಹಲ ಮೂಡಿಸಿರುವ ರಿಯಲ್ ಸ್ಟಾರ್ ಉಪೇಂದ್ರ ನೇತೃತ್ವದ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ ತನ್ನ ಚೊಚ್ಚಲ ಚುನಾವಣೆ ಎದುರಿಸುವ ಮೊದಲೇ ಪಕ್ಷದಲ್ಲಿ ಬಿರುಕು ಮೂಡಿದೆ. ಪಕ್ಷದ ಕೆಲವರ ನಿರ್ಧಾರ ಹಿಡಿಸದೆ ಉಪೇಂದ್ರ ಪಕ್ಷದಿಂದ ಹೊರಬರುತ್ತಿದ್ದಾರೆ ಎಂದು ತಿಳಿದುಬಂದಿದೆ.

ರಿಯಲ್ ಸ್ಟಾರ್ ಉಪೇಂದ್ರ ನೇತೃತ್ವದ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ ತನ್ನ ಹೊಸತನದ ಮೂಲಕ ಕರ್ನಾಟಕ ಜನರ ಮನ್ನಣೆಗೆ ಒಳಗಾಗಿತ್ತು. ಆದರೆ, ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕೆಪಿಜೆಪಿ ಸಹ ಸಂಸ್ಥಾಪಕ ಮಹೇಶ್ ಗೌಡ ಜೊತೆ ಭಿನ್ನಾಭಿಪ್ರಾಯ ಮೂಡಿದ ಕಾರಣ ಉಪೇಂದ್ರ ತಾವೇ ಕಟ್ಟಿದ ಪಕ್ಷದಿಂದ ಹೊರಬರುತ್ತಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ ಪಕ್ಷದ ಟಿಕೆಟ್ ಹಂಚಿಕೆ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಮಹೇಶ್ ಗೌಡ ಇರಿಸಿದ ಬೇಡಿಕೆಗಳಿಗೆ ಉಪೇಂದ್ರ ಒಪ್ಪದ ಕಾರಣ ಪಕ್ಷದ ನಾಯಕರ ನಡುವೆ ಬಿರುಕು ಮೂಡಿದೆ. ಒಂದು ವೇಳೆ ನನ್ನ ಬೇಡಿಕೆಗೆ ಒಪ್ಪಿಗೆ ನೀಡದೇ ಇದ್ದರೆ ಉಪೇಂದ್ರ ಅವರನ್ನು ಪಕ್ಷದಿಂದಲೇ ಉಚ್ಛಾಟಿಸುವುದಾಗಿ ಮಹೇಶ್ ಗೌಡ ಎಚ್ಚರಿಕೆ ನೀಡಿದ್ದಾರೆ.

ಕೆಪಿಜೆಪಿ ಸಹ ಸಂಸ್ಥಾಪಕ ಮಹೇಶ್ ಗೌಡ ಹೆಸರಿನಲ್ಲಿ ಕೆಪಿಜಿಪಿ ನೋಂದಣಿಯಾಗಿದೆ ಎಂದು ತಿಳಿದುಬಂದಿದೆ. ಮಹೇಶ್ ಗೌಡ ಯಾವ ಬೇಡಿಕೆಗಳನ್ನು ಇರಿಸಿದ್ದಾರೆ ಎಂದು ಇನ್ನು ತಿಳಿದು ಬಂದಿಲ್ಲ. ಇನ್ನು ಉಪೇಂದ್ರ ಯಾವ ಕಾರಣಕ್ಕೆ ಒಪ್ಪಿಗೆ ನೀಡಿಲ್ಲ ಎಂಬ ವಿಷಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಇನ್ನು ಈ ಬಗ್ಗೆ ಮಾತನಾಡಿದ ಉಪೇಂದ್ರ ಈ ವಿಚಾರವನ್ನು ಚರ್ಚಿಸಲು ಇಂದು ಸಭೆ ಕರೆದಿರುವುದಾಗಿ ತಿಳಿಸಿದ್ದಾರೆ.

Also Read: ಸೂಪರ್ ಸ್ಟಾರ್ ಉಪೇಂದ್ರರವರ ಪ್ರಜಾಕೀಯ ಪಕ್ಷದ ಮೊದಲ ಪ್ರಣಾಳಿಕೆಯನ್ನು ನೋಡಿ ದಂಗಾದ ಮೂರೂ ಪಕ್ಷಗಳು, ಹಾಗಾದರೆ ಆ ಪ್ರಣಾಳಿಕೆಯಲ್ಲಿ ಏನಿದೆ?