ಕನ್ನಡಿಗ ಕಂಡು ಹಿಡಿದ ಕ್ಯಾನ್ಸರ್ ನಿಯಂತ್ರಣ ಸಾಧನಕ್ಕೆ ಅಂತರಾಷ್ಟ್ರೀಯ ಅನುಮೋದನೆ; ಜನವರಿ ವೇಳೆಗೆ ಆಸ್ಪತ್ರೆಗಳಲ್ಲಿ ಲಭ್ಯ.!

0
1178

ಕ್ಯಾನ್ಸರ್ ಖಾಯಿಲೆ ಮನುಷ್ಯನ ಜೀವನವನ್ನು ಅಂತ್ಯಗೊಳಿಸುತ್ತೆ, ಎನ್ನುವುದು ಗೊತ್ತಿರುವ ವಿಚಾರ ಏಕೆಂದರೆ ಇಲ್ಲಿಯವರೆಗೋ ಕ್ಯಾನ್ಸರ್ ಚಿಕಿತ್ಸೆಗೆ ಸರಿಯಾದ ಮದ್ದು ಕಂಡು ಹಿಡಿಯುವಲ್ಲಿ ಸಾಧ್ಯವಾಗದೆ ಪ್ರತಿನಿತ್ಯವೂ ಸಾವಿರಾರು ರೋಗಿಗಳು ಸಾವಿನಲ್ಲಿ ಅಂತ್ಯವಾಗುತ್ತಿದ್ದಾರೆ. ಇದಕ್ಕಾಗಿ ಕನ್ನಡಿಗನೊಬ್ಬ ಅಭಿವೃದ್ಧಿಪಡಿಸಿದ ಕ್ಯಾನ್ಸರ್ ನಿಯಂತ್ರಣ ಸಾಧನ(ಸೈಟೊಟ್ರಾನ್ ಡಿವೈಎಸ್​​) ಅನುಮೋದಿಸಿದೆ. ಈ ಮೂಲಕ ಯುಎಸ್​​ ಎಫ್​​​ಡಿಎ ಸಂಸ್ಥೆ, ಕ್ಯಾನ್ಸರ್​​ ಚಿಕಿತ್ಸೆ ಸಂಬಂಧ ವೈದ್ಯಕೀಯ ಆವಿಷ್ಕಾರ ಮಾಡಿದ ಕನ್ನಡಿಗರ ಪ್ರತಿಭೆ ಗುರುತಿಸಿದೆ.


Also read: ಕಟ್ಟಡವೊಂದರ ಮಹಡಿಯಿಂದ ಸುರಿಯಿತು ಹಣದ ಮಳೆ; -2 ಸಾವಿರ, 500 ಮುಖಬೆಲೆಯ ನೋಟುಗಳನ್ನು ನೋಡಿ ಮುಗಿಬಿದ್ದು ಆರಿಸಿಕೊಂಡ ಜನ.!

ಹೌದು ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಷ್ಟ್ರೇಶನ್ (ಎಫ್​​ಡಿಎ) ಸಂಸ್ಥೆಯೂ ಬೆಂಗಳೂರು ಮೂಲದ ವಿಜ್ಞಾನಿಯೋರ್ವ ಅಭಿವೃದ್ಧಿಪಡಿಸಿದ ಕ್ಯಾನ್ಸರ್ ನಿಯಂತ್ರಣ ಸಾಧನ ಸೈಟೊಟ್ರಾನ್ ಸೈಟೊಟ್ರಾನ್ ಸಾಧನವೂ ದೇಹದ ಅಂಗಾಂಶಗಳ ಅನಿಯಂತ್ರಿತ ಬೆಳವಣಿಗೆ ತಡೆಯುತ್ತದೆ. ಈ ಕ್ಯಾನ್ಸರ್​​ ಕೋಶಗಳು ಹರಡದಂತೆ ನಿಯಂತ್ರಿಸುತ್ತದೆ. ಇದರ ಜತೆಗೆ ಕ್ಯಾನ್ಸರ್ ಪ್ರೋಟೀನ್‌ಗಳ ನಿಯಂತ್ರಿಸಿ ಕೊಬ್ಬಿನ ಜೀವಕೋಶಗಳಾಗಿ ಬದಲಾಯಿಸುತ್ತದೆ. ಮುಂದಿನ ವರ್ಷ ಜನವರಿ ವೇಳೆ ಈ ಸಾಧನವೂ ಆಸ್ಪತ್ರೆಗಳಲ್ಲಿ ಕ್ಯಾನ್ಸರ್​​​ ರೋಗಿಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ ಎನ್ನುತ್ತಾರೆ.


Also read: ಇನ್ಮುಂದೆ ಕಾರ್ಖಾನೆಗಳಲ್ಲಿ ಮಹಿಳೆಯರಿಗೂ ನೈಟ್ ಶಿಫ್ಟ್; ಸಂಜೆ 7ರಿಂದ ಬೆಳಗ್ಗೆ 6ರ ಅವಧಿಯಲ್ಲಿ ಕೆಲಸಕ್ಕೆ ಅವಕಾಶ ನೀಡಿದ ರಾಜ್ಯ ಸರ್ಕಾರ.!

ಇನ್ನೊವೇಟಿವ್ ಟೆಕ್ನಾಲಜಿ ಕಂಪನಿಯಾದ ಆರ್ಗನೈಸೇಶನ್ ಡಿ ಸ್ಕಲೀನ್‌ನ ಅಧ್ಯಕ್ಷ ರಾಜಾ ವಿಜಯ್ ಕುಮಾರ್. ರಾಜಾ ವಿಜಯ್​​ ಕುಮಾರ್​​ರನ್ನು ಬಯೋಫಿಸಿಕ್ಸ್, ನ್ಯಾನೊತಂತ್ರಜ್ಞಾನ ಮತ್ತು ಸುಸ್ಥಿರ ಇಂಧನ ಕ್ಷೇತ್ರದ ಸಂಶೋಧಕರು ಎಂದು ಕರೆಯುತ್ತಾರೆ. ನಿಯೋಪ್ಲಾಸ್ಟಿಕ್ ಕಾಯಿಲೆಯಂತ ಪ್ರೋಟೀನ್-ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗೆ ಈ ಸಾಧನೆಯೂ ಸಹಾಯ ಮಾಡುತ್ತದೆ. ಮ್ಯಾಗ್ನೆಟಿಕ್ ರೆಸೋನೆನ್ಸ್ ಬಳಸುವ ಮೂಲಕ ಈ ಸಾಧನ ತಯಾರಿಸಲಾಗಿದೆ. ಯಾವುದೇ ಕೋಶವಾಗಲಿ ನಮ್ಮ ದೇಹದಲ್ಲಿ ಕೇವಲ 50 ಸಲ ಮಾತ್ರವೇ ಕೆಲಸ ಮಾಡುತ್ತದೆ. ಆದರೆ, ಸೈಟೊಟ್ರಾನ್ ಸಾಧನವೂ 50ಕ್ಕಿಂತಲೂ ಹೆಚ್ಚಿನ ಸಲ ಕೆಲಸ ಮಾಡುವಂತೆ ಸಹಕಾರಿಯಾಗುತ್ತದೆ ಎಂದು ನ್ಯೂಸ್​​-18ಗೆ ಡಾ. ಕುಮಾರ್​​ ಹೇಳುತ್ತಾರೆ.


Also read: ಇಬ್ಬರು ಹೆಣ್ಣು ಮಕ್ಕಳನ್ನು ಅಕ್ರಮ ಬಂಧನದಲ್ಲಿಟ್ಟುಕೊಂಡ ಆರೋಪ, ನಿತ್ಯಾನಂದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ದಂಪತಿಗಳು.!

ಈ ಆವಿಸ್ಕಾರ ಮಾಡಲು ಸುಮಾರು 30 ವರ್ಷಗಳು ತೆಗೆದುಕೊಂಡಿದ್ಧಾರೆ. ರೋಟೆಶನಲ್ ಕ್ಕ್ವಾಂಟಮ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಎನ್ನುವ ಈ ಸಾಧನವು ವೇಗದ ರೇಡಿಯೊ ಸ್ಫೋಟಗಳು (ಎಫ್‌ಆರ್‌ಬಿ) ಬಳಸುತ್ತದೆ. ಹಾಗೆಯೇ ಶಕ್ತಿಯುತವಾದ ಸಣ್ಣ ರೇಡಿಯೊ ಸ್ಫೋಟಗಳನ್ನು ಬಳಸುತ್ತದೆ. ಸೆಲ್ಯುಲಾರ್ ಮಾರ್ಗಗಳು ಮತ್ತು ಕೆಲ ವಿಭಿನ್ನ ಮಾಡ್ಯುಲೇಟೆಡ್ ವೇಗದ ರೇಡಿಯೊ ಸ್ಫೋಟಗಳ ಕುರಿತಾದ ಸಂಶೋಧನೆ ಇದಾಗಿದೆ ಎಂದರು ಡಾ. ಕುಮಾರ್​​. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ಈಗ ಭಾರೀ ಕಷ್ಟ. ಇಂದಿನ ಕಾಲದಲ್ಲಿ ಯಾರ ಅಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ. ಆದರೆ, ಬೆಂಗಳೂರು ಮೂಲದ ರಾಜು ಎಂಬುವರು ಈ ಆವಿಷ್ಕಾರ ಮಾಡಿದ್ದು, ಯುಎಸ್​​​ ಎಫ್​​ಡಿಎ ಸಂಸ್ಥೆ ಅನಮೋದನೆ ನೀಡಿದೆ. ಇದು ಬಳಕೆಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಆಗಿದೆ ಎಂದು ಹೇಳಿದೆ. ಹಾಗಾಗಿ ಮುಂದಿನ ಜನವರಿ ವೇಳೆಗೆ ಈ ಸಾಧನವೂ ಆಸ್ಪತ್ರೆಯಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.