ಭಯಾನಕ ಡ್ರಗ್ಸ್ ಧಂದೆ ಬೆಂಗಳೂರಿಗೂ ಕಾಲಿಟ್ಟಿದೆ, NCB ಅಧಿಕಾರಿಗಳ ದಾಳಿಯಲ್ಲಿ 50 ಕಿಲೋ ಮಾರಕ ಡ್ರಗ್ ಕೆಟಾಮಿನ್ ಪತ್ತೆ!!

0
288

ಬೆಂಗಳೂರಿನಲ್ಲಿ ಡ್ರಗ್ಸ್ ಮತ್ತು ಮಾದಕ ವಸ್ತುಗಳ ಬಳಕೆ ಹೆಚ್ಚಾಗಿದ್ದು, ಇದನ್ನು ಹತ್ತಿಕ್ಕಲು ನಾನಾ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲೇ ಬೆಂಗಳೂರಿನ ಮನೆಯೊಂದರಲ್ಲೇ ಡ್ರಗ್ಸ್ ತಯಾರಿಸುವ ಲ್ಯಾಬ್ ಪತ್ತೆಯಾಗಿದೆ. ಇದರಲ್ಲಿ 50 ಕಿಲೋ ಕೆಟಾಮಿನ್ ಪತ್ತೆಯಾಗಿದ್ದು ಇಬ್ಬರನ್ನು ವಶಪಡಿಸಿಕೊಳ್ಳಲಾಗಿದ್ದು ಎನ್​ಸಿಬಿ ಆಧಿಕಾರಿಗಳು ಆರೋಪಿಗಳಿಂದ 50 ಕೆಜಿ ಕೆಟಾಮೀನ್ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ಶಿವರಾಜ್, ಕಣ್ಣನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

@thenewsminute.com

Also read: ಅನೇಕ JD(s) ಬೆಂಬಲಿಗರೂ ಮತ್ತು ಕಾರ್ಯಕರ್ತರು BJPಗೆ ಮತ ನೀಡಿದ್ದಾರೆ : ಸಮ್ಮಿಶ್ರ ಸರ್ಕಾರದ ಉನ್ನತ ಶಿಕ್ಷಣ ಮಂತ್ರಿ ಜಿ.ಟಿ.ದೇವೇಗೌಡ!! ಇದು ಸಮ್ಮಿಶ್ರ ಸರ್ಕಾರ ಬೀಳುವ ಮುನ್ಸೂಚನೆಯೇ??

ಹೌದು ಇಷ್ಟು ದಿನ ಬೆಂಗಳೂರಿನಲ್ಲಿ ಡ್ರಗ್ಸ್​​ ಮಾರಾಟ ಮಾಡುವ ಆರೋಪಿಗಳನ್ನು ಪೊಲೀಸರು ಹಿಡಿಯುತ್ತಿದ್ದರು. ಈಗ ಡ್ರಗ್ಸ್ ಉತ್ಪಾದಿಸುವ ಲ್ಯಾಬ್​ವೊಂದನ್ನು ಪತ್ತೆ ಮಾಡುವಲ್ಲಿ ಎನ್​​ಸಿಬಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ನಗರದ ಮೂವಿಲ್ಯಾಂಡ್​​ ಸಿನಿಮಾ ಮಂದಿರದ ಸಮೀಪದ ಕಟ್ಟಡವೊಂದರ ಮೇಲೆ ಖಚಿತ ಮಾಹಿತಿ ಮೇರೆಗೆ ಎನ್​​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲವೊಂದು ಪತ್ತೆಯಾಗಿದೆ.

ಹೆಚ್ಚಿನ ತನಿಖೆಯ ಆಧಾರದ ಮೇಲೆ, ಹೈದರಾಬಾದ್-ನಲ್ಲಿ ಅದೇ ಗುಂಪಿನಿಂದ ನಡೆಸಲ್ಪಡುತ್ತಿರುವ ಇದೇ ರೀತಿಯ ತಯಾರಕ ಘಟಕವನ್ನು NCB ಪತ್ತೆ ಮಾಡಿದೆ. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಬಂಧಿಸಲಾದ ಇಬ್ಬರು ಆರೋಪಿಗಳು ಆಗ್ನೇಯ ಏಷ್ಯಾದ ದೇಶಗಳು ಮತ್ತು ಆಸ್ಟ್ರೇಲಿಯಾಗಳೊಂದಿಗೆ ಸಂಪರ್ಕ ಹೊಂದಿದ್ದು ಚೆನ್ನೈ ಮೂಲದ ಮಾದಕವಸ್ತು ಕಳ್ಳಸಾಗಣೆ ಜಾಲದಲ್ಲಿ ಈ ಜೋಡಿಯು ಸೇರಿದೆ. ಅವುಗಳನ್ನು ನಾರ್ಕೊಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್ ಅಡಿಯಲ್ಲಿ ಬುಕ್ ಮಾಡಲಾಗಿದೆ.

@thenewsminute.com

Also read: ಆಟೋ ಡ್ರೈವರ್ ಮನೆ ಮೇಲೆ ಐಟಿ ದಾಳಿ; ಆಟೋ ಚಾಲಕ ಸುಬ್ರಮಣಿ ಬಳಿ ಇರುವ ಕೋಟ್ಯಾಂತರ ಆಸ್ತಿ ವಿದೇಶಿ ಮಹಿಳೆ ನೀಡಿರುವ ಉಡುಗೊರೆ ಅಂತೆ..

ಈ ದಾಳಿಯಲ್ಲಿ ತನಿಖಾಧಿಕಾರಿಗಳು ಒವೆನ್ ಬಾಕ್ಸ್ ಮತ್ತು ಒಂದು ನಗದು ಎಣಿಕೆಯ ಯಂತ್ರವನ್ನು ಪಡಿಸಿಕೊಂಡಿದ್ದಾರೆ. ಆರೋಪಿ ತನ್ನ ಮನೆಯಲ್ಲಿ ಡ್ರಗ್ಸ್ ಉತ್ಪಾದಿಸುವ ಲ್ಯಾಬ್ ಅನ್ನೇ ಸ್ಥಾಪಿಸಿರುವ ವಿಚಾರ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ವಿವಿಧ ಡ್ರಗ್ಸ್​​ಗಳನ್ನ ಈತ ಮನೆಯಲ್ಲೇ ತಯಾರು ಮಾಡುತ್ತಿರುತ್ತಾನೆ. ಕೆಂಗೇರಿಯಲ್ಲದೆ ಹೈದರಾಬಾದ್​ನಲ್ಲೂ ಡ್ರಗ್ಸ್ ತಯಾರು ಮಾಡುತ್ತಿದ್ದ ಆರೋಪಿಗಳು ಆಸ್ಟ್ರೇಲಿಯಾ, ಆಫ್ರಿಕಾ ದೇಶಗಳಿಗೆ ಸರಬರಾಜು ಮಾಡುತ್ತಿರುತ್ತಾರೆ.

@thenewsminute.com

Also read: ದಶಕಗಳ ಕಾಲ ಸರಿಸಾಟಿಯಿಲ್ಲದೆ ನಾಟಕರಂಗದಲ್ಲಿ ಮೆರೆದ ಮಹಾನ್ ನಾಟಕಗಾರ, ಅಭಿನಯ ಚತುರ ಮಾಸ್ಟರ್ ಹಿರಣ್ಣಯ್ಯ ನಮ್ಮನ್ನಗಲಿದ್ದಾರೆ!!

ಇಲ್ಲಿದ ತಯಾರಾದ ಡ್ರಗ್ಸ್-ನ್ನು ಆರೋಪಿಗಳನ್ನು ಚೆನ್ನೈಗೆ ಸಾಗಿಸುತ್ತಿದ್ದರೆನ್ನಲಾಗಿದೆ. ತನಿಖೆ ವೇಳೆ ಇನ್ನೊಬ್ಬ ಆರೋಪಿ ಕೆಂಗೇರಿಯ ಶಿವರಾಜ್ ಮನೆಯಲ್ಲಿ ಕೆಟಾಮೀನ್ ಡ್ರಗ್ಸ್ ಪತ್ತೆ‌ಯಾಗಿದೆ. ಟ್ರಾವೆಲ್ ಬ್ಯಾಗ್​ನಲ್ಲಿ ಕೆಜಿ ಗಟ್ಟಲೆ ಡ್ರಗ್ಸ್ ಕಂಡು ಬಂದಿದೆ. ಮನೆಯಲ್ಲಿ ಪತ್ತೆಯಾದ ಡ್ರಗ್ಸ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಡ್ರಗ್ಸ್-ನ್ನು ಅಕ್ಕಿ ಮತ್ತು ಪಾಲಿ ಗೋಣಿ ಚೀಲದಲ್ಲಿ ಇಟ್ಟುಕೊಂಡು ಟ್ರಾಲಿ ಬ್ಯಾಗಿನೊಳಗೆ ಇರಿಸಲಾಗಿತ್ತು, ಈ ವೇಳೆ NCC ತಂಡವನ್ನು ನೋಡಿದ ಮಾರಾಟಗಾರರ ಮತ್ತು ತಯಾರಕ ಓಡಿಹೋಗಲು ಪ್ರಯತ್ನಿಸಿದ್ದಾರೆ. ಖರೀದಿದಾರರು ಚೆನ್ನೈನಿಂದ ಬಂದವರಾಗಿದ್ದು ಕೆಎ -3 ಎಂಡಿ 7250 ಎನ್ನುವ ವಾಹನದಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.