ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಹಾವಳಿ, ವಿದೇಶಗಳಿಂದ ಬರುವ ಚಾಕೋಲೇಟ್ ಡಬ್ಬದಲ್ಲಿ ಡ್ರಗ್ಸ್ ಕಂಡ ಪೊಲೀಸರಿಗೇ ಆಶ್ಚರ್ಯ!!!

0
221

ಬೆಂಗಳೂರಿನಲ್ಲಿ ಮಾದಕ ವಸ್ತುಗಳಾದ ಗಾಂಜಾ, ಡ್ರಗ್ಸ್, ಟ್ಯಾಬ್ಲೆಟ್ ಗಳ ಹಾವಳಿ ಹೆಚ್ಚಾಗುತ್ತಿದ್ದು, ಹಾಲಿನ ಡಬ್ಬದಲ್ಲಿ ಡ್ರಗ್ಸ್, ಚಾಕೋಲೇಟ್, ಜೆಲ್ಲಿಯಲ್ಲೂ ಡ್ರಗ್ಸ್ ಮಾರಾಟ ಮಾಡುತ್ತಿರುವುದು ಕಂಡು ಜನರು ಬೆಚ್ಚಿ ಬಿದಿದ್ದಾರೆ. ಏಕೆಂದರೆ ಚಿನ್ನಕ್ಕಿಂತಲೂ ದುಬಾರಿ ಮೌಲ್ಯದ ಹೈಡ್ರೋಗಾಂಜಾವನ್ನು ಕೆನಡಾದಿಂದ ಮಕ್ಕಳ ಹಾಲಿನ ಪೌಡರ್ ಡಬ್ಬದಲ್ಲಿಟ್ಟು ಕೊರಿಯರ್ ಮೂಲಕ ಸಾಗಾಣಿಕೆ ಮಾಡುತ್ತಿದ್ದಾರೆ, ಇಂತಹ ವಸ್ತುಗಳನ್ನು ಅಮೆಜಾನ್ ಸೇರಿದಂತೆ ಹಲವು ಕೋರಿಯರ್ ಕಂಪೆನಿಗಳು ತಲುಪಿಸುತ್ತಿವೆ.

Also read: ರಾಜ್ಯದಲ್ಲಿ ರಂಗೇರಿದ ಉಪಚುನಾವಣಾ ಅಖಾಡ; ಎಲ್ಲ ಪಕ್ಷಗಳಿಗೆ ಸಂಕಷ್ಟ ತಂದ ಹನಿಟ್ರ್ಯಾಪ್​ ಪ್ರಕರಣ, ವಿಡಿಯೋ ಡಿಲೀಟ್​ ಮಾಡಿಸಲು ಸಿಸಿಬಿ ಕಚೇರಿ ಸುತ್ತುತ್ತಿರುವ ಶಾಸಕರು.!

ಹೌದು ಕೆನಡಾದಿಂದ ಗಾಂಜಾ ಬೆರೆಸಿದ ಚಾಕೊಲೇಟ್‌, ಮಾದಕ ವಸ್ತು ಒಳಗೊಂಡ ಸಿಗರೇಟ್‌ಗಳನ್ನು ಅಕ್ರಮವಾಗಿ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಅಂತಾರಾಷ್ಟ್ರೀಯ ಜಾಲವನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಬಯಲಿಗೆ ಎಳೆದಿದೆ. ಈ ಜಾಲದಲ್ಲಿ ಸಕ್ರಿಯಗೊಂಡು ಕಾಲೇಜು ವಿದ್ಯಾರ್ಥಿಗಳು, ಖಾಸಗಿ ಕಂಪನಿ ಉದ್ಯೋಗಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕೊಲ್ಕತ್ತಾ ಮೂಲದ ಅತೀಫ್ಸ ಲೀಂ (26), ರೋಹಿತ್‌ ದಾಸ್‌ (26) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ಒಂದುಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ ಮಾಡಿಕೊಂಡಿದ್ದಾರೆ.

ಮಕ್ಕಳ ಹಾಲಿನ ಪೌಡರ್‌ ಡಬ್ಬಗಳಲ್ಲಿ ಹೈಡ್ರೋಗಾಂಜಾ?

Also read: SSLC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಮಾ.27ರಿಂದ ಏ.9ರವರೆಗೆ ನಡೆಯಲಿವೆ ಪರೀಕ್ಷೆಗಳು.!

ಹೈಡ್ರೋ ಗಾಂಜಾ, ಆಶಿಷ್‌ ಆಯಿಲ್‌ ಇರುವಂತಹ ಇ-ಸಿಗರೇಟ್‌ ಗಳನ್ನು ಕೆನಡಾ ಕಂಪನಿಯೊಂದು ತಯಾರಿಸುತ್ತದೆ. ಈ ದಂಧೆ ನಡೆಸುವ ವ್ಯಕ್ತಿ ಅತೀಫ್ ಸಲೀಂಗೆ ಡಾರ್ಕ್‌ವೆಬ್‌ ಆನ್‌ಲೈನ್‌ ತಾಣದಲ್ಲಿ ಪರಿಚಿತನಾಗಿದ್ದ. ಬಳಿಕ ಅತೀಫ್, ವಿಕ್ಕರ್‌ ಮೀ ಆ್ಯಪ್‌ ಮೂಲಕ ನಿರಂತರ ಸಂಪರ್ಕ ಇಟ್ಟುಕೊಂಡಿದ್ದ. ಕೆನಡಾದಿಂದ ದಂಧೆಕೋರ, ಮಕ್ಕಳ ಹಾಲಿನ ಪೌಡರ್‌ ಡಬ್ಬಗಳಲ್ಲಿ ಹೈಡ್ರೋಗಾಂಜಾ, ಸೇರಿ ಇನ್ನಿತರೆ ಮಾದಕ ವಸ್ತುಗಳನ್ನು ಇಟ್ಟುಕೊಂಡು ವಿಮಾನದಲ್ಲಿ ಕಳುಹಿಸಿಕೊಡುತ್ತಿದ್ದ. ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಮಕ್ಕಳ ಹಾಲಿನ ಪೌಡರ್‌ ಡಬ್ಬಗಳನ್ನು ಶೋಧ ಮಾಡಿದರೂ ಗೊತ್ತಾಗದ ಹಾಗೆ ಡಬ್ಬದ ಒಳಗಡೆ ವಸ್ತುಗಳನ್ನು ತುಂಬಿರುತ್ತಿದ್ದ. ಹೀಗಾಗಿ ಕಸ್ಟಮ್ಸ್‌ ಅಧಿಕಾರಿಗಳ ಕಣ್ತಪ್ಪಿ ಮಾದಕ ವಸ್ತು ಅತೀಫ್ಗೆ ತಲುಪುತ್ತಿತ್ತು.

ಚಾಕೋಲೇಟ್, ಜೆಲ್ಲಿಯಲ್ಲೂ ಡ್ರಗ್ಸ್;

Also read: ಗೂಂಡಾಗಿರಿ ಮಾಡಿದವರ ಹುಟ್ಟಡಗಿಸುತ್ತೇವೆ; ಹೊಸಕೋಟೆ ಜನರಿಗೆ ಎಚ್ಚರಿಕೆ ನೀಡಿದ್ರಾ ಬಿಎಸ್​ವೈ??

ಕೊರಿಯರ್‌ ಮೂಲಕ ಮನೆ ಬಾಗಿಲಿಗೆ ಕೆನಡಾದಿಂದ ಬಂದ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ಕೊಲ್ಕತ್ತಾ, ಮುಂಬೈ ಸೇರಿ ಇತರೆ ನಗರಗಳ ದಂಧೆಕೋರರಿಗೆ ಇ-ಕಾಮರ್ಸ್‌ ಸಂಸ್ಥೆಯೊಂದರ ಕವರ್‌ನಲ್ಲಿರಿಸಿ ಕೊರಿಯರ್‌ ಮೂಲಕ ತಲುಪಿಸುತ್ತಿದ್ದ. ಬೆಂಗಳೂರಿನಲ್ಲಿ ಮಾರಾಟ ಮಾಡಲು ಆರಂಭಿಸಿದ ಅತೀಫ್, ಪರಿಚಿತ ಗ್ರಾಹಕರಿಗೆ ಕೊರಿಯರ್‌ ಮೂಲಕವೇ ಚಾಕೊಲೇಟ್‌ ಗಾಂಜಾ, ಇತರೆ ಮಾದಕ ವಸ್ತು ಕಳುಹಿಸಿ ಹಣ ಗಳಿಸುತ್ತಿದ್ದ. ಆರೋಪಿ ಅತೀಫ್, ಆರಂಭದಲ್ಲಿ ಕೆಲವರಿಗೆ ಚಾಕೊಲೇಟ್‌, ಜೆಲ್ಲಿಗಳನ್ನು ನೀಡಿ ಅಭ್ಯಾಸ ಮಾಡಿಸುತ್ತಿದ್ದ. ಅದನ್ನು ಸೇವಿಸಿ ಅಭ್ಯಾಸವಾದ ಬಳಿಕ ಅವರೇ ಗ್ರಾಹಕರಾಗಿ ಪರಿವರ್ತನೆಯಾಗುತ್ತಿದ್ದರು ಎಂದು ತನಿಖೆ ವೇಳೆ ಗೊತ್ತಾಗಿದೆ. ಆರೋಪಿ ಅತೀಫ್ನಿಂದ ಒಂದು ಸ್ಕೋಡಾ ಕಾರು, ಒಂದು ಲಕ್ಷ ರೂ. ನಗದು, ಬೈಕ್‌ ಸೇರಿ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.