ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಕಂಡ ದೆವ್ವದ ಕಥೆ

0
1770

ಪುಟ್ಟ ಸಿಕ್ಕಾಪಟ್ಟೆ ಇಂಗ್ಲಿಶ್ ಮಾತಾಡೋ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಓದ್ತಾನೆ. ಮನೆಯಿಂದ ಸ್ಕೂಲ್, ಸ್ಕೂಲ್ ಇಂದ ಮನೆಗೆ ವ್ಯಾನ್ನಲ್ಲೇ ಓಡಾಟ. ಬೆಳಿಗ್ಗೆ ಸ್ಕೂಲ್ಗೆ ಅಂತ ಹೋದವನು ಜ್ವರ ಅಂತ ವಾಪಸ್ ಬಂದ್ಬಿಟ್ಟ.

ಅಮ್ಮ ಡಾಕ್ಟರ್ ಹತ್ರ ಕರ್ಕೊಂಡ್ ಹೋದ್ರೆ ಡಾಕ್ಟರ್ ಹೇಳಿದ್ರಂತೆ… ತುಂಬಾ ಹೆದರಿದ್ದಾನೆ.. ಅದಕ್ಕೆ ಜ್ವರ ಅಂತ…

ತಕ್ಷಣ ಪುಟ್ಟ ನಾನ್ ಸ್ಕೂಲ್ಗೆ ಹೋಗಲ್ಲ ಅಲ್ಲಿ ದೆವ್ವ ಇದೆ ಅಂತ ಅಳೊಕೆ ಶುರು. ಅದೇನು ದೆವ್ವ ನೋಡೋಣ ಅಂತ ಪುಟ್ಟನ ಅಪ್ಪ ಸ್ಕೂಲ್ ಕಡೆ ಹೋದ್ರೆ.. ಒಂದಲ್ಲ ಎರಡಲ್ಲ ನೂರಾರು ದೆವ್ವಗಳಂತೆ. ಅಪ್ಪಂಗೆ ಗಾಬರಿ.

ಅಲ್ಲೇ ಪಕ್ಕ ಇದ್ದ watchman ಹೇಳಿದ್ರಂತೆ… ಅದೆಂತದ್ದೋ haloween ಅಂತೆ ಸರ್ ಎಲ್ಲಾ ರಕ್ತ ಬಳಕೊಂಡ್ ದೆವ್ವ, ಬೂತದ ತರ ಬಂದವ್ರೆ.

ಎಲ್ಲೋ ಪರದೇಶದಲ್ಲಿ ಏನೋ ಮಾಡ್ತಾರೆ ಅಂತ ಕಣ್ಣು ಮುಚ್ಚಿ ನಮ್ಮ ಜನ ಅದನ್ನ ಇಲ್ಲೂ ಆಚರಣೆ ಮಾಡ್ತಾರೆ. ಎಷ್ಟು ಇಂಟರ್ನ್ಯಾಷನಲ್ ಸ್ಕೂಲ್ಗಳಲ್ಲಿ ಮಕ್ಕಳನ್ನು ಸೇರಿಸಿಕೊಂಡು ಜನ್ಮಾಷ್ಟಮಿ.. ಗಣೇಶ ಹಬ್ಬ ..ಕನ್ನಡ ರಾಜ್ಯೋತ್ಸವ ಅಂತ ನಮ್ಮ ಹಬ್ಬಗಳನ್ನ ಆಚರಿಸುತ್ತಾರೆ ?

— ಗಣೇಶ್

Source whatsapp