ಇಲೆಕ್ಟ್ರಾನಿಕ್ ವಸ್ತುಗಳ ಮೇಲೆ ಇರುವ ಈ ಚಿಹ್ನೆಗಳ ಅರ್ಥ ನಿಮಗೆ ಗೊತ್ತಿದ್ಯಾ??

0
2176

ಐಫೋನ್  ನ  ಹಿಂದಿರುವ  ಚಿಹ್ನೆಗಳ  ಅರ್ಥ  ನಿಮಗೆ  ಗೊತ್ತೆ ? ಐಫೋನ್  ನ  ಹಿಂದೆ  ಕೆಳಭಾಗದಲ್ಲಿ  ಇರುವ   ಚಿಹ್ನೆಯ  ಅರ್ಥಗಳು  ಹೀಗಿವೆ.

ಮೊದಲನೇ (FC) ಚಿಹ್ನೆ .

ಈ  ಚಿಹ್ನೆ , ಆಪಲ್  ಐಫೋನ್  ಒಂದು  FCC(ಫೆಡರಲ್  ಕಮ್ಯುನಿಕೇಷನ್  ಕಮಿಷನ್ )ರ  ನೋಂದಾಯಿತ  ಉತ್ಪನ್ನ  ಎಂದು  ಸೂಚಿಸುತ್ತದೆ .

ಎರಡನೇ  (No-garbage) ಚಿಹ್ನೆ .

ಇದು  ಬಹಳ  ಸರಳವಾದುದು . ಇದು , ಐಫೋನ್  ಒಂದು  ವಿದ್ಯುನ್ಮಾನ  ಸಾಧನ . ಆದ್ಧರಿಂದ  ಇದನ್ನು  ಎಲ್ಲೆಂದರಲ್ಲಿ   ಎಸೆಯುವಂತಿಲ್ಲ  ಎಂಬುವುದನ್ನು  ಸೂಚಿಸುತ್ತದೆ  .


ಮೂರನೆಯದು  CE ಮತ್ತು  0682 ಚಿಹ್ನೆ .

CE ಎಂಬುದು  ಒಂದು  ಯೂರೋಪಿನ  ನಿಯಂತ್ರಣ  ಪ್ರಾಧಿಕಾರದ  ಚಿಹ್ನೆ . ಇದರ  ಅನುಸಾರ ಐಫೋನ್  ಮಾರಾಟಕ್ಕೆ  ಯೋಗ್ಯವಾಗಿದೆ  ಎಂದು  ಸೂಚಿಸುತ್ತದೆ .

ನಾಲ್ಕನೆಯದು  ಆಶ್ಚರ್ಯ  ಸೂಚಕ  ಚಿಹ್ನೆ (!).

ಇದು , ವಿಭಾಗ  ಎರಡರ  ನಿಷ್ತಂತು (ವಯರ್ಲೆಸ್) ಸಾಧನವನ್ನು  ಸೂಚಿಸುತ್ತದೆ  . ಇದು  ಹೊರದೇಶದ  ಗ್ರಾಹಕರಿಗೆ  ಉಪಯುಕ್ತ . ಅಂದರೆ  ಈ  ಫೋನ್  ಉಪಯೋಗಿಸಲು  ಪ್ರಯತ್ನಿಸುವ  ಎಲ್ಲ  ಆವರ್ತನಗಳು (ಫ್ರೀಕ್ವೆನ್ಸಿ) ಎಲ್ಲ  ಕಡೆ  ಸಿಗುವುದಿಲ್ಲ ಎಂದರ್ಥ .