12ನೇ ಆವೃತ್ತಿ IPL ವೇಳಾಪಟ್ಟಿ ಪ್ರಕಟ; 2019 ರ ಐಪಿಎಲ್ ಹಬ್ಬಕೆ ತಿಂಗಳಷ್ಟೇ ಬಾಕಿ, ನಿಮ್ಮ ನೆಚ್ಚಿನ ಪದ್ಯ ಯಾವದಿನ ಇದೆ ನೋಡಿ..

0
919

ಮಾರ್ಚ್​​ 23 ರಿಂದ ಶುರುವಾಗಲಿದೆ IPL ಹಬ್ಬ

ದೇಶವೇ ಮೆಚ್ಚುವ ಕ್ರೀಡೆ ಕ್ರಿಕೆಟ್ ಆಗಿದೆ. ಅದರಲ್ಲಿ IPL ಎಂದರೆ ಮುಗಿತು ಜನರಿಗೆ ಒಂದು ತಿಂಗಳು ಹಬ್ಬದ ವಾತಾವರಣ ಯಾರ ಕೈಯಲ್ಲಿ ನೋಡಿದರು ಮೊಬೈಲ್, ಯಾರ ಮನೆಯಲ್ಲಿ ನೋಡಿದರು ಟಿವಿಯಲ್ಲಿ ಬರಿ ಐಪಿಎಲ್ ಸದ್ದು ಮನೆಯ ಗಂಡಸರಂತು ಬೆಟ್ಟಿಂಗ್ ವಿಚಾರವಾಗಿ ಬ್ಯುಸಿ, ಹೆಂಗಸರಂತೂ ಈ ಐಪಿಎಲ್ ಯಾವಾಗೆ ಮುಗಿಯುತ್ತೆ, ಅಂತ ಗೊಣಗುವುದು ಕೇಳಿಬರುತ್ತೆ. ಅದೆಲ್ಲವನ್ನು ಮಿರಿ ಈ ಐಪಿಎಲ್ ಎಂದರೆ ಯುವಕರಿಗೆ ರಾತ್ರಿಹಗಲು ಎನ್ನದೆ ತಮ್ಮ ಮೆಚ್ಚಿನ ಟೀಮ್- ಗೆ ಬೆಂಬಲಿಸುವುದರಲ್ಲಿ ಎಲ್ಲವನ್ನು ಮರೆತಿರುತ್ತಾರೆ. ಏನೇ ಆದರು ಎಲ್ಲಿ ನೋಡಿದರು ಕ್ರಿಕೆಟ್ ಆಟಗಾರರದೆ ಮಾತು. ಇವೆಲ್ಲವುಗಳ ನಡುವೆ 2019ರ ಐಪಿಎಲ್ ಹಬ್ಬದ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಹೌದು 2019ರಲ್ಲಿ ನಡೆಯುವ 12ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್​​​ ಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಬಿಡುಗಡೆ ಮಾಡಿದೆ. ಈ ಹಿಂದೆ ಹೇಳಿದಂತೆ ಮಾರ್ಚ್ 23 ರಂದು ಐಪಿಎಲ್​​ಗೆ ಭರ್ಜರಿ ಚಾಲನೆ ದೊರಕಲಿದ್ದು, ಎಪ್ರಿಲ್ 5ರ ವರೆಗಿನ 17 ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದೆ. ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಸೆಣೆಸಾಟ ನಡೆಸಲಿವೆ.

ಲೋಕಸಭಾ ಚುನಾವಣೆಯಿಂದಾಗಿ 12ನೇ ಆವೃತ್ತಿ ಐಪಿಎಲ್ ವೇಳಾಪಟ್ಟಿ ಪ್ರಕಟಿಸಲು ಮೀನಾಮೇಷ ಎಣಿಸುತ್ತಿದ್ದ ಬಿಸಿಸಿಐ ಕೊನೆಗೂ ವೇಳಾಪಟ್ಟಿ ಪ್ರಕಟಿಸಿದೆ. ಆದರೆ ಆರಂಭಿಕ 2 ವಾರಗಳ ವೇಳಾಪಟ್ಟಿಯನ್ನ ಮಾತ್ರ ಪ್ರಕಟಿಸಿದ್ದು, ಉಳಿದ ಪಂದ್ಯಗಳ ವೇಳಾಪಟ್ಟಿಯನ್ನ ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾದ ಬಳಿಕ ಬಿಸಿಸಿಐ ಪ್ರಕಟಿಸಲಿದೆ.
ಮೊದಲ ಎರಡು ವಾರಗಳಲ್ಲಿ ಒಟ್ಟು 17 ಪಂದ್ಯಗಳು ನಡೆಯಲಿದೆ. ಎಲ್ಲಾ 8 ತಂಡಗಳ ತವರಿನಲ್ಲಿ ಹಾಗೂ ಹೊರಗಡೆ ಪಂದ್ಯವನ್ನು ಆಯೋಜಿಸಲಾಗಿದೆ. ಉದ್ಘಾಟನಾ ಪಂದ್ಯ ಚೆನ್ನೈನಲ್ಲಿ ಆಯೋಜಿಸಲಾಗಿದೆ. ಮಾರ್ಚ್ 28 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಣದಲ್ಲಿ 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಮೊದಲ ಪಂದ್ಯ ನಡೆಯಲಿದೆ. ತವರಿನ RCB ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಹೋರಾಟ ನಡಸಲಿದೆ. ಆರಂಭಿಕ ವೇಳಾಪಟ್ಟಿಯ ಅಂತಿಮ ಪಂದ್ಯ ಕೂಡ ಬೆಂಗಳೂರಿನಲ್ಲಿ ನಡೆಯಲಿದೆ. ಎಪ್ರಿಲ್ 5 ರಂದು RCB ತಂಡ ಕೋಲ್ಕತ್ತಾ ನೈಟ್ ರೈಡಸ್ಸ್ ವಿರುದ್ದ ಹೋರಾಟ ನಡೆಸಲಿದೆ.

2019 ರ ಐಪಿಎಲ್ ವೇಳಾಪಟ್ಟಿ:

Also read: ಇದನ್ನು ಓದಿ ದ್ರಾವಿಡ್ ಕ್ರಿಕೆಟ್-ನಲ್ಲಿ ಅದ್ಭುತ ಸಾಧನೆ ಮಾಡಿದ್ದರೂ ಒಂದು ಚೂರು ಅಹಂಕಾರ ಪಡೋದಿಲ್ಲ ಅಂತ ನಿಮಗೇ ಅರಿವಾಗುತ್ತೆ..