ಈ ಬಾರಿಯ ಐಪಿಎಲ್ ಬಿಡ್ಡಿಂಗ್ ನಲ್ಲಿ ನಮ್ಮ RCB ತಂಡ ಯಾವ ಆಟಗಾರರನ್ನು ಖರೀದಿಸಿದೆ ಗೊತ್ತಾ?

0
1127

ಬೆಂಗಳೂರು ಫ್ರಾಂಚಾಯಿಸಿ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಇಂಗ್ಲೆಂಡ್ ತಂಡದ ಆಲ್ರೌಂಡರ್ ಆಟಗಾರ ಕ್ರಿಸ್ ವೋಕ್ಸ್(Chris Woakes) ಅವರನ್ನು ಖರೀದಿಸಿದೆ. ಅವರ ಬೇಸ್ ಪ್ರೈಸ್ ಅಥವಾ ಮೂಲ ಬೆಲೆ 2 ಕೋಟಿ ಇತ್ತು, RCB ತಂಡ 7.4 ಕೋಟಿ ರೂಪಾಯಿ ಬೆಲೆಗೆ ಅವರನ್ನು ಖರೀದಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ನ್ಯೂಜಿಲ್ಯಾಂಡ್ ತಂಡದ ಸ್ಪೋಟಕ ಬ್ಯಾಟ್ಸ್-ಮೆನ್ ಬ್ರೇನ್ಡನ್ ಮೆಕ್ಕಲಂ(Brendon McCullum) ಅವರನ್ನು ಖರೀದಿಸಿದ್ದಾರೆ. ಅವರ ಬೇಸ್ ಪ್ರೈಸ್ ಅಥವಾ ಮೂಲ ಬೆಲೆ 2 ಕೋಟಿ ಇತ್ತು, RCB ತಂಡ 3.6 ಕೋಟಿ ರೂಪಾಯಿ ಬೆಲೆಗೆ ಅವರನ್ನು ಖರೀದಿಸಿದೆ.

ಅಲ್ಲದೆ RCB ತಂಡ ಇನ್ನೊಬ್ಬ ಇಂಗ್ಲೆಂಡ್ ತಂಡದ ಆಲ್ರೌಂಡರ್ ಆಟಗಾರ ಮೊಯಿನ್ ಅಲಿ(Moeen Ali) ಅವರನ್ನು 1.7 ಕೋಟಿಗೆ ಖರೀದಿಸಿದೆ, ಅವರ ಮೂಲ ಬೆಲೆ 1.5 ಇತ್ತು. ಇನ್ನು ವೇಗದ ಬೌಲರ್ ಉಮೇಶ್ ಯಾದವ್ ಅವರನ್ನು 4.2 ಕೋಟಿ ರುಪಾಯಿಗೆ ಖರೀದಿಸಿದೆ. ಅವರ ಮೂಲ ಬೆಲೆ 1 ಕೋಟಿ ರೂಪಯಿಯಾಗಿತ್ತು.

ಇನ್ನು ಯಶಸ್ವಿ ಸ್ಪಿನ್ನರ್ ಯಝುವೇಂದ್ರ ಚಾಹಲ್ ಅವರನ್ನು 6 ಕೋಟಿ ರುಪಾಯಿಗೆ ಖರೀದಿಸಿದೆ. ಅವರ ಮೂಲ ಬೆಲೆ 2 ಕೋಟಿ ಇತ್ತು.