2018 ರ ಐಪಿಎಲ್ ಹರಾಜಿನಲ್ಲಿ ದಾಖಲೆ ಬೆಲೆಗೆ ಬಿಕರಿಯಾದ ಕರ್ನಾಟಕ ಆಟಗಾರರು…!!

0
591

ಇಂದು ಇಂಡಿಯನ್ ಪ್ರೀಮಿಯರ್ ಲೀಗ್ ನ (IPL) ಬಿಡ್ಡಿಂಗ್ ಅಥವಾ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ. ಇದರಲ್ಲಿ ಕೆಲವು ಆಟಗಾರರು ದಾಖಲೆಯ ಬೆಲೆಗೆ ಬಿಕರಿಯಾದರೆ, ಇನ್ನು ಕೆಲವರನ್ನು ಯಾವುದೇ ತಂಡ ಕೊಳ್ಳಲು ಮುಂದಾಗಲಿಲ್ಲ. ಇನ್ನು ಕರ್ನಾಟಕದ ಆಟಗಾರನ್ನು ಕೊಳ್ಳಲು, ಫ್ರಾಂಚಾಯಿಸಿಗಳು ನಾ ಮುಂದೆ ತಾ ಮುಂದೆ ಎಂದು ಮುಗಿಬಿದಿದ್ದಾರೆ.

ಕರ್ನಾಟಕ ಆಟಗಾರ ಕೆ.ಎಲ್.ರಾಹುಲ್ 11 ಕೋಟಿ ರುಪಾಯಿಗೆ ಮೊತ್ತಕ್ಕೆ ಐಪಿಎಲ್ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಬಿಕರಿಯಾಗಿದ್ದಾನೆ. ಅವರ ಮೂಲ ಬೆಲೆ 2 ಕೋಟಿ ಇತ್ತು, ಆದರೆ ಎಲ್ಲ ತಂಡಗಳು ಈ ಆಟಗಾರನನ್ನು ತಮ್ಮ ತಂಡದಲ್ಲಿ ಇರಿಸಿಕೊಳ್ಳಲು ಮುಂದಾಗಿದ್ದಾರೆ.

ಕರ್ನಾಟಕದ ಆಟಗಾರ ಮನೀಶ್ ಪಾಂಡೆ ಈ ಬಾರಿಯ ಐಪಿಎಲ್ ಹರಾಜಿನಲ್ಲಿ SRH ತಂಡಕ್ಕೆ ಬಿಕಾರಿಯಾಗಿದ್ದರೆ. ಅವರ ಮೂಲಬೆಲೆ 1 ಕೋಟಿ ಇತ್ತು. ಆದರೆ, ಇವರನ್ನು ಯಾವ ತಂಡವು ಬಿಡಲು ತಯಾರಿರಲಿಲ್ಲ, ಕೊನೆಗೆ 11 ಕೋಟಿ ರೂಪಾಯಿ ದಾಖಲೆ ಬೆಲೆಗೆ SRH ತಂಡ ಇವರನ್ನು ಖರೀದಿಸಿತು.

ಇನ್ನು ನಮ್ಮ ಬೆಂಗಳೂರು ಫ್ರಾಂಚಾಯಿಸಿ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ನ್ಯೂಜಿಲ್ಯಾಂಡ್ ತಂಡದ ಸ್ಪೋಟಕ ಬ್ಯಾಟ್ಸ್-ಮೆನ್ ಬ್ರೇನ್ಡನ್ ಮೆಕ್ಕಲಂ(Brendan McCullum) ಅವರನ್ನು ಖರೀದಿಸಿದ್ದಾರೆ. ಅವರ ಬೇಸ್ ಪ್ರೈಸ್ ಅಥವಾ ಮೂಲ ಬೆಲೆ 2 ಕೋಟಿ ಇತ್ತು, RCB ತಂಡ 3.6 ಕೋಟಿ ರೂಪಾಯಿ ಬೆಲೆಗೆ ಅವರನ್ನು ಖರೀದಿಸಿದೆ.