IPL ಇತಿಹಾಸದಲ್ಲಿಯೇ ಅತಿ ಹೆಚ್ಚು ರನ್ ಗಳಿಸಿದ ಮತ್ತು ವಿಕೆಟ್ ಕಬಳಿಸಿದ ಆಟಗಾರರನ್ನು ಬಿಡ್ಡಿಂಗ್ ನಲ್ಲಿ ಯಾರು ಕೇಳುವವರಿಲ್ಲ..!!

0
682

ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಕೆಲವು ಆಶ್ಚರ್ಯಕರ ಸಂಗತಿಗಳು ನಡೆದಿವೆ. ಅದೇನೆಂದರೆ ವರ್ಷಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಆಳಿದ, ತಮ್ಮ ಅತ್ಯುತ್ತಮ ಆಟ ಪ್ರದರ್ಶನದಿಂದ ಪ್ರೇಕ್ಷಕರ ಮನ ಗೆದಿದ್ದ ಆಟಗಾರರನ್ನು ಯಾವ ಒಬ್ಬ ತಂಡವು ಖರೀದಿಸಲು ಮುಂದೆ ಬಂದಿಲ್ಲ. ಯಾರು ಆ ಆಟಗಾರರು ನೀವೇ ನೋಡಿ.

ಮೊದಲನೆಯದಾಗಿ ನಮ್ಮ ಬೆಂಗಳೂರಿನ ತಂಡವಾದ RCB ಯ ಸ್ಪೋಟಕ ಬ್ಯಾಟ್ಸ್-ಮೆನ್ ಕ್ರೈಸ್ ಗೇಲ್. ಹೌದು ವೆಸ್ಟ್-ಇಂಡೀಸ್ ನ ಈ ಆಟಗಾರ ತಮ್ಮ ಸ್ಪೋಟಕ ಹೊಡೆತಗಳಿಂದ ಎದುರಾಳಿ ತಂಡದ ಬೌಲರ್ ಗಳಲ್ಲಿ ನಡುಕ ಹುಟ್ಟಿಸುತ್ತಿದ್ದ, ಆದರೆ ಈ ಬರಿ ಅವರನ್ನು ಯಾರು ಖರೀದಿಸಿಲ್ಲ.

ಇನ್ನು ಶ್ರೀಲಂಕಾದ ಖ್ಯಾತ ವೇಗದ ಬೌಲರ್ ತಮ್ಮ ಯೋರ್ಕ್ ಬೌಲಿಂಗ್ ನಿಂದಲೇ ಬ್ಯಾಟ್ಸ್-ಮೆನ್ ಗಳನ್ನು ಕಾಡುತ್ತಿದ್ದ ಲಸಿತ್ ಮಾಲಿಂಗ ಅವರನ್ನು ಸಹ ಯಾವ ತಂಡವು ಖರೀದಿಸಿಲ್ಲ. ಇನ್ನು ಒಂದು ಕುತೂಹಲದ ವಿಷಯವೇನೆಂದರೆ ಕ್ರೈಸ್ ಗೇಲ್ IPL ನಲ್ಲಿ ಅತಿ ಹೆಚ್ಚು ರನ್ ಮತ್ತು ಸಿಕ್ಸರ್ ಗಳನ್ನು ಬಾರಿಸಿದ್ದಾರೆ ಮತ್ತು ಲಸಿತ್ ಮಾಲಿಂಗ ಅತಿ ಹೆಚ್ಚು ವಿಕೆಟ್ಗಳನ್ನು ಕಬಳಿಸಿದ್ದಾರೆ.

ಇನ್ನು ಇವರ ಜೊತೆ, ಇಂಗ್ಲೆಂಡ್ ತಂಡದ ಆಟಗಾರ ಜೋ ರೂಟ್, ಟೀಂ ಇಂಡಿಯಾದ ಮುರಳಿ ವಿಜಯ್, ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ, ನ್ಯೂಜಿಲೆಂಡ್ ತಂಡದ ಮಾರ್ಟಿನ್ ಗುಪ್ಟಿಲ್, ಜೋಮ್ಸ್ ಫ್ಲುಕ್ನೇರ್, ವಿಕೆಟ್‌‌ ಕೀಪರ್‌‌ ಪಾರ್ಥಿವ್ ಪಟೇಲ್, ಜಾನಿ ಬೇರ್ಸ್ಟೋವ್, ನಮನ್ ಓಜಾ, ಸಾಮ್ ಬಿಲ್ಲಿಂಗ್ಸ್, ಮಿಚೆಲ್ ಚಾನ್ಸನ್, ಜೋಸ್ ಹ್ಯಾಜಲ್‌ವುಡ್‌‌, ವೇಗಿ ಇಶಾಂತ್ ಶರ್ಮಾ, ಮಿಚೆಲ್ ಮೇಘ್ಲಗನ್, ಶ್ರೀಲಂಕಾ ತಂಡದ ಲಸಿತ್‌ ಮಾಲಿಂಗ್‌‌, ಥಿಮ್‌ ಸೌತಿ, ನಮನ್‌ ಓಜಾ ಮೊದಲ ಸುತ್ತಿನಲ್ಲಿ ಮಾರಾಟವಾಗದೆ ಉಳಿದುಕೊಂಡ ಪ್ರಮುಖ ಆಟಗಾರರಾಗಿದ್ದಾರೆ.