ಬೀದಿಯಲ್ಲಿ ಪಾನಿಪುರಿ ಮಾರುತ್ತಿದ್ದ ಯುವಕ ಈಗ ಐಪಿಎಲ್-ನ ಹರಾಜಿನಲ್ಲಿ ಕೋಟ್ಯಾಧಿಪತಿ ಆದ ಕಥೆ ಎಲ್ಲರಿಗೂ ಪ್ರೇರಣಿಯ!!

0
561

ಸಾಧನೆ ಸಾಕ್ಷಿಯಾದ ಒಬ್ಬ ಬಡ ಪಾನಿಪುರಿ ವ್ಯಾಪಾರಿಯ ಕೋಟ್ಯಾಂತರ ಬೆಲೆಗೆ ಐಪಿಎಲ್‌ನಲ್ಲಿ ಹರಾಜಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾನೆ. ಇವನ ಸಾಧನೆಯ ಹಿಂದೆ ಪರ್ವತದಂತ ದೊಡ್ಡ ಕತೆ ಇದೆ. ಮೊದಲ ಭಾರಿಗೆ ದ್ವಿಶತಕದ ಮೂಲಕ ತಮ್ಮ ಭವಿಷ್ಯವನ್ನೇ ಬದಲಾಯಿಸಿಕೊಂಡಿರುವ ಯಶಸ್ವಿ ಜೈಸ್ವಾಲ್‌ಗೆ ಇದೀಗ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 13ನೇ ಆವೃತ್ತಿ ಸಲುವಾಗಿ ಗುರುವಾರ (ಡಿ.19) ನಡೆದ ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಬಂಪರ್‌ ಬೆಲೆ ಲಭ್ಯವಾಗಿದೆ. ಕನಸಿನ ಮೂಟೆ ಹೊತ್ತು ಉತ್ತರ ಪ್ರದೇಶದಿಂದ ಮುಂಬೈಗೆ ಬಂದಿದ್ದ ಯುವ ಕ್ರಿಕೆಟಿಗನಿಗೆ ರಾಜಸ್ಥಾನ್‌ ರಾಯಲ್ಸ್‌ ತಂಡ ಹರಾಜಿನಲ್ಲಿ ಬರೋಬ್ಬರಿ 2.40 ಕೋಟಿ ರೂ. ನೀಡಿ ತನ್ನದಾಗಿಸಿಕೊಂಡಿದೆ.

Also read: ಕ್ಯಾನ್ಸರ್ ರೋಗದಿಂದ ಕೂದಲು ಕಳೆದುಕೊಂಡ ರೋಗಿಗಳಿಗೆ ನೆರವಾಗಲು ತಮ್ಮ ತಲೆಕೂದಲನ್ನು ದಾನ ಮಾಡಿ ಮಾದರಿಯಾದ ಮಹಿಳೆ ಪೊಲೀಸ್.

ಹೌದು 17ರ ಹರೆಯದವರಾಗಿರುವ ಜೈಸ್ವಾಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ 2.40 ಕೋಟಿ ರೂ.ಗೆ ಖರೀದಿಸಿದೆ. ಮುಂಬೈ ಪರ ಒಳ್ಳೆಯ ಪ್ರದರ್ಶನ ನೀಡಿ, ಐಪಿಎಲ್‌ನಲ್ಲಿ ಉತ್ತಮ ಮೊತ್ತಕ್ಕೆ ಸೇಲಾಗಿರುವ ಯುವ ಆಟಗಾರನ ಬದುಕಿನ ಹಿಂದೆ ಕೆಲ ಕುತೂಹಲಕಾರಿ ಕತೆಗಳಿವೆ. ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯ ಜಾರ್ಖಂಡ್‌ ವಿರುದ್ಧದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌, 154 ಎಸೆತಗಳಲ್ಲಿ 17 ಫೋರ್‌ ಮತ್ತು 12 ಭರ್ಜರಿಯ ಸಿಕ್ಸರ್‌ಗಳನ್ನು ಒಳಗೊಂಡ 203 ರನ್‌ಗಳನ್ನು ಚೆಚ್ಚಿ, ಭಾರತೀಯ ಕ್ರಿಕೆಟ್‌ನ ದಿಗ್ಗಜ ಬ್ಯಾಟ್ಸ್‌ಮನ್‌ಗಳಾದ ಸಚಿನ್‌ ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್‌ ಹಾಗೂ ರೋಹಿತ್‌ ಶರ್ಮಾಗೆ ಸಡ್ಡು ಹೊಡೆದು ಅತಿ ಕಿರಿಯ ವಯಸ್ಸಿಗೆ ಲಿಸ್ಟ್‌ ‘ಎ’ ಕ್ರಿಕೆಟ್‌ ಮಾದರಿಯಲ್ಲಿ ದ್ವಿಶತಕ ಸಿಡಿಸಿದ ಭಾರತೀಯ ಎಂಬ ದಾಖಲೆ ಬರೆದಿದ್ದರು.

Also read: ಭಾರತೀಯ ವಾಯುಪಡೆಯಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ಮಗನ ನೆನಪಿಗಾಗಿ 350 ಸ್ಲಂ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ದಂಪತಿಗಳು.!

ಹೌದು, ಜೈಸ್ವಾಲ್ ಕೂಡ ಸಚಿನ್ ತೆಂಡುಲ್ಕರ್ ಅವರಂತೆ ದೊಡ್ಡ ಸ್ಟಾರ್ ಕ್ರಿಕೆಟಿಗ ಆಗಬೇಕೆಂದು ಬಯಸಿದ್ದ. ಆದರೆ ಅದಕ್ಕಾಗಿ ತರಬೇತಿ ಪಡೆಯುವಷ್ಟು ಸಿರಿವಂತ ಕುಟುಂಬದಲ್ಲಿ ಆತ ಹುಟ್ಟಿರಲಿಲ್ಲ. ಉತ್ತರ ಪ್ರದೇಶದ ಭಾದೋಹಿ ಮೂಲದವರಾದ ಜೈಸ್ವಾಲ್ ಕುಟುಂಬ ಸಣ್ಣ ಅಂಗಡಿಯಿಂದ ಸಿಗುವ ಆದಾಯದಿಂದಲೇ ಜೀವನ ನಡೆಸುತ್ತಿದ್ದರು. ಇದರ ನಡುವೆ ಮಗನ ಕ್ರಿಕೆಟ್ ಹುಚ್ಚು ವಿಪರೀತವಾಗಿತ್ತು. ಆದರೆ ಮಗನ ಕನಸಿಗೆ ಕೊಳ್ಳಿ ಹಿಡಲು ತಂದೆ ತಯಾರಿರಲಿಲ್ಲ. ಹೀಗಾಗಿ ಮುಂಬೈನಲ್ಲಿ ವಾಸಿಸುವ ಸಂಬಂಧಿಕರೊಬ್ಬರ ಹತ್ತಿರ ಜೈಸ್ವಾಲ್ ತಂದೆ ಅಲ್ಲಿಯೇ ಮಗನಿಗೆ ಒಂದು ವ್ಯವಸ್ಥೆ ಮಾಡಿಕೊಡುವಂತೆ ಕೇಳಿಕೊಂಡರು. ಅದರಂತೆ ಕನಸಿನ ಗಂಟುಮೂಟೆಯೊಂದಿಗೆ ಯಶಸ್ವಿ ಜೈಸ್ವಾಲ್ ಪಯಣ ಮುಂಬೈಯತ್ತ ಸಾಗಿತು. ಆದರೆ ಸಂಬಂಧಿಯ ಮನೆಯಲ್ಲಿ ಮಲಗಲು ಜಾಗವಿರಲಿಲ್ಲ. ಹೀಗಾಗಿ ಕಲ್ಬಾದೇವಿ ಪ್ರದೇಶದಲ್ಲಿ ಇರುವ ಡೈರಿಯಲ್ಲಿ ಮಲಗಲು ಸ್ಥಳ ಮಾಡಿಕೊಟ್ಟರು.

Also read: ವಯಸ್ಸಲ್ಲಿ ಸುಧಾ ಮೂರ್ತಿಯವರಿಗಿಂತ ದೊಡ್ಡವರಾಗಿದ್ದರೂ ವ್ಯಕ್ತಿತ್ವಕ್ಕೆ ಬೆಲೆ ಕೊಟ್ಟು ಅವರ ಕಾಲಿಗೆ ನಮಸ್ಕರಿಸಿದ ಅಮಿತಾಬ್ ಬಚ್ಚನ್!!

ಅದೇ ಡೈರಿಯಲ್ಲಿ ಕೆಲಸ ಮಾಡಿ ಅಲ್ಲೇ ಮಲಗುತ್ತಿದ್ದ, ಒಂದು ದಿನ ಆಟವಾಡಿ ಧಣಿದಿದ್ದ ಜೈಸ್ವಾಲ್ ನಿದ್ದೆಗೆ ಜಾರಿದ್ದರು. ಇದರಿಂದ ಸಿಟ್ಟಾದ ಡೈರಿ ಮಾಲೀಕ ಜೈಸ್ವಾಲ್ ಬ್ಯಾಗ್​ಗಳನ್ನು ಹೊರ ಹಾಕಿ ಜಾಗ ಖಾಲಿ ಮಾಡುವಂತೆ ತಿಳಿಸಿದ್ದರು. ಅಲ್ಲಿಂದ ಸೀದಾ ಮುಸ್ಲಿಂ ಯುನೈಟೆಡ್ ಕ್ಲಬ್‌ನಲ್ಲಿ ಗ್ರೌಂಡ್ಸ್‌ ಮನ್‌ ಕೆಲಸ ಮಾಡುತ್ತಿದ್ದ ವ್ಯಕ್ತಿ ಜೈಸ್ವಾಲ್​ಗೆ ಇರಲು ವ್ಯವಸ್ಥೆ ಮಾಡಿಕೊಟ್ಟರು. ಸುಮಾರು ಮೂರು ವರ್ಷಗಳ ಕಾಲ ಅಲ್ಲಿಯೇ ಕೆಲಸ ಮಾಡುತ್ತಾ ಕ್ರಿಕೆಟ್ ಆಡುತ್ತಿದ್ದರು. ಕಷ್ಟದ ಜೀವನದೊಂದಿಗೆ ಕ್ರಿಕೆಟ್ ಕನಸು ಕೂಡ ಬೆಳೆಯುತ್ತಾ ಹೋಯಿತು. ಟೀಂ ಇಂಡಿಯಾವನ್ನು ಪ್ರತಿನಿಧಿಸುವ ಛಲ ರೂಪುಗೊಂಡಿತು.

ಪಾನೀಪೂರಿ ಮಾರಾಟ

Also read: ಹೃದಯ ಚಿಕಿತ್ಸೆಗಾಗಿ ಬಂದು ಆಟೋದಲ್ಲೇ 10 ಲಕ್ಷ ಹಣ ಮರೆತು ಹೋದ ವಿದೇಶಿ ಪ್ರಜೆ; ಹಣವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ.!

ಬಡತನವಿದ್ದಿದ್ದರಿಂದ ಕ್ರಿಕೆಟ್ ಪ್ರಾಕ್ಟೀಸ್ ಮುಗಿದ ಬಳಿಕ ಯಶಸ್ವಿ ಜೈಸ್ವಾಲ್ ಮುಂಬೈಯ ದಾರಿಗಳಲ್ಲಿ ಪಾನೀಪೂರಿ ಮಾರುತ್ತಿದ್ದರು. ಆಗೆಲ್ಲ ಜೈಸ್ವಾಲ್ ಕಷ್ಟದ ದಿನಗಳನ್ನು ಕಂಡಿದ್ದರು. ಆದರೆ ಮುಂಬೈ ಕ್ರಿಕೆಟ್ ಕ್ಲಬ್‌ನ ಸ್ಥಾಪಕ ಮತ್ತು ಕೋಚ್ ಜ್ವಾಲ ಸಿಂಗ್‌ಗೆ ಈ ಚುರುಕು ಹುಡುಗ, ನಾಳೆ ಪ್ರತಿಭಾನ್ವಿತ ಕ್ರಿಕೆಟಿಗ ಅನ್ನಿಸಿಕೊಳ್ಳುತ್ತಾನೆ ಅನ್ನಿಸಿತು. ಸಿಂಗ್ ಆತನನ್ನು ಕ್ರಿಕೆಟ್ ಮೈದಾನಕ್ಕೆ ಎಳೆತಂದರು, ತರಬೇತಿ ನೀಡಿದರು. ಅಲ್ಲಿಂದ ಜೈಸ್ವಾಲ್ ಕ್ರಿಕೆಟ್ ರಂಗದಲ್ಲಿ ಬೆಳೆಯಲಾರಂಭಿಸಿದ. ನಿನ್ನೆ ನಡೆದ ಹರಾಜಿನಲ್ಲಿ 20 ಲಕ್ಷ ಮೂಲ ಬೆಲೆ ಪಡೆದಿದ್ದ ಜೈಸ್ವಾಲ್‌ಗೆ ಆರಂಭದಲ್ಲಿ ಯಾರೂ ಕೂಡ ಬಿಡ್‌ ಸಲ್ಲಿಸಲಿಲ್ಲ. ಆದರೆ, ಮುಂಬೈ ತಂಡ ಬಿಡ್‌ ಆರಂಭಿಸಿದ ಬಳಿಕ ಪೈಪೋಟಿ ಶುರುವಾಗಿ ಅಂತಿಮವಾಗಿ ರಾಜಸ್ಥಾನ್‌ ರಾಯಲ್ಸ್‌ ತಂಡ 2.40 ಕೋಟಿ ನೀಡಿ ಖರೀಧಿಸಿದೆ. ಈ ಭಾರಿಯ ಐಪಿಎಲ್-ನಲ್ಲಿ ಎಲ್ಲರ ಗಮನ ಜೈಸ್ವಾಲ್ ಮೇಲೆ ಇರಲಿದೆ.