ಆಯುರ್ವೇದದಲ್ಲಿ ಹೇಳಿರುವಂತೆ ಸೋನಾಮುಖಿ ಗಿಡವು ನಿಮ್ಮ ಆರೋಗ್ಯಕ್ಕೆ ತುಂಬಾ ಉತ್ತಮವಾದ ಗಿಡವಾಗಿದೆ..!

0
1576

ಹೌದು ಈ ಸೋನಾಮುಖಿ ಗಿಡವು ನಿಮ್ಮಲಿ ಬರುವ ಕೆಲವೊಂದು ರೋಗಗಳಿಗೆ ರಾಮಭಾಣವಾಗಿ ಕೆಲಸಮಾಡುತ್ತೆ.
ಹಾಗಿದ್ರೆ ಈ ಗಿಡವು ಯಾವ ರೀತಿ ಉಪಯೋಗವಾಗುತ್ತೆ ಅಂತ ನೋಡಿ.

1.ಮಲಬದ್ಧತೆಯಲ್ಲಿ:

is-a-good-plant-for-your-health-1
source:jansatta.com

ಸೋನಾಮುಖಿ 2 ಗ್ರಾಂ, ಸೋಂಪು ಮತ್ತು ಗುಲಾಬಿ ಹೂವಿನ ದಳ ಎರಡು ಸೇರಿ 5 ಗ್ರಾಂ, ಒಣಗಿದ ದ್ರಾಕ್ಷಿ 2 ಗ್ರಾಂ ಮತ್ತು ಅಂಜೂರದ ಹಣ್ಣು 20 ಗ್ರಾಂ ಇವೆಲ್ಲವನ್ನು ಸೇರಿಸಿ ಕಲ್ಪತ್ತಿನಲ್ಲಿ ಹಾಕಿ ನುಣ್ಣಗೆ ಅರೆಯುವುದು ಹೀಗೆ ಅರೆದ ಕಲ್ಕವನ್ನು ನೀರಿಗೆ ಹಾಕಿ, ಅಷ್ಟಾಂಶ ಕಷಾಯ ಮಾಡಿ, ತಣ್ಣಗಾದ ಮೇಲೆ ಶೋಧಿಸುವುದು. ರಾತ್ರಿ ವೇಳೆ ನಾಲ್ಕು ಟೀ ಚಮಚ ಸೇವಿಸುದು. ಬೆಳಗ್ಗೆ ಒಂದೆರಡು ಬೇದಿ ಆಗಿ, ಮಲಬದ್ಧತೆ ಮತ್ತು ನೆಗಡಿ ಪರಿಹಾರವಾಗುದು.

2.ಜ್ವರದಲ್ಲಿ ಹೆಚ್ಚಾಗಿ ಬರುವ ಬೆವರನ್ನು ತಡೆಯಲು:

is-a-good-plant-for-your-health-2.
source:thedickinsonpress.com

ಅರ್ಧ ಟೀ ಚಮಚ ಸೋನಾಮುಖಿ ಚೂರ್ಣವನ್ನು ಮಜ್ಜಿಗೆಯಲ್ಲಿ ಕದಡಿ ಕುಡಿಸುವುದು. ಅಲ್ಪ ಪ್ರಮಾಣ ಒಳ್ಳೆಯದು. ದಿವಸಕ್ಕೆ ಒಂದೇ ವೇಳೆ ವೈದ್ಯರ ಸಲಹೆ ಮೇರೆಗೆ ಉಪಚಾರ ನೀಡುವುದು.

3.ಜ್ವರ ಹೆಚ್ಚಾಗಿ ನಾಲಿಗೆಯ ಮೇಲೆ ಮೊಳೆಗಳಾದರೆ:
ಒಂದೆರಡು ಚಿಟಿಕೆ ಸೋನಾಮುಖಿಯ ನಯವಾದ ಚೂರ್ಣವನ್ನು ಜೇನಿನಲ್ಲಿ ಕಲಸಿ ನಾಲಿಗೆಯ ಮೇಲೆ ಸವರುವುದು.

is-a-good-plant-for-your-health-3
source:istockphoto.com

4.ಜ್ವರದಲ್ಲಿ:
ಸೋನಾಮುಖಿ, ಅಳಲೆಕಾಯಿ ಮತ್ತು ಶುಂಠಿ, ತಲಾ 5-5 ಗ್ರಾಂ ತೆಗೆದುಕೊಂಡು, ಚೆನ್ನಾಗಿ ಜಜ್ಜಿ, ನೀರಿಗೆ ಹಾಕಿ ಕಾಯಿಸಿ, ಕಷಾಯ ಮಾಡುವುದು. ನಾಲ್ಕು ಟೀ ಚಮಚ ಕಷಾಯಕ್ಕೆ ಕೆಂಪು ಕಲ್ಲು ಸಕ್ಕರೆ ಪುಡಿ ಸೇರಿಸಿ ಸೇವಿಸುವುದು. ದಿವಸಕ್ಕೆ ಒಂದೇ ವೇಳೆ

5.ಸ್ತನದ ಹುಣ್ಣು ಮತ್ತು ಗಡ್ಡೆಗಳಿಗೆ:

is-a-good-plant-for-your-health-4
source:guanabana2016blog.wordpress.com

ಸೋನಾಮುಖಿ ಆಡುಸೋಗೆ ಎಲೆ, ಮುತ್ತಗದ ಬೇರು ಕರೀ ಲಕ್ಕಿ ಬೇರು ಗುಳ್ಳದ ಬೇರು , ಭೃಂಗರಾಜನ ಎಲೆ, ಇವೆಲ್ಲವನ್ನು ಸಮತೂಕ ಸೇರಿಸಿ ನುಣ್ಣಗೆ ಕುಟ್ಟಿ ಚೂರ್ಣ ಮಾಡುವುದು. ವೇಳೆಗೆ 2 ಗ್ರಾಂ ಚೂರ್ಣವನ್ನು ಜೇನುತುಪ್ಪದಲ್ಲಿ ಕಲಸಿ ಸೇವಿಸುವುದು.

6.ಚರ್ಮವ್ಯಾಧಿಯಲ್ಲಿ:
ಸೋನಾಮುಖಿಯ ಬೀಜ ತಿರುಳನ್ನು ನಯವಾಗಿ ಅರೆದು, ಮೊಸರಿನಲ್ಲಿ ಕಲಸಿ ಲೇಪಿಸುವುದು.

is-a-good-plant-for-your-health-5
source:salud.uncomo.com

ಎಚ್ಚರಿಕೆ:
ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಹೊಟ್ಟೆಯಲ್ಲಿ ನುಲಿಯುವ ನೋವು ಬಾಯಾರಿಕೆ ಮತ್ತು ವಾಂತಿ ಸಹ ಆಗಬಹುದು.