ಹರಳೆಣ್ಣೆಯಿಂದ ಕೇವಲ ಕೂದಲು ಸೊಂಪಾಗಿ ಬೆಳೆಯುವುದು ಮಾತ್ರವಲ್ಲ ಅದರಿಂದ ಇಷ್ಟೊಂದು ಲಾಭಗಳು ಇವೆ ಅಂತ ತಿಳಿದುಕೊಂಡರೆ ಬೆರಗಾಗ್ತೀರಾ..!!

0
4464

Kannada News | Health tips in kannada

ಹರಳೆಣ್ಣೆಯಿಂದ ವಾರಕ್ಕೊಮ್ಮೆಯಾದ್ರೂ ಅಭ್ಯಂಜನ ಸ್ನಾನ ಮಾಡುವುದರಿಂದ ಕಣ್ಣಿಗೆ ಮತ್ತು ದೇಹಕ್ಕೆ ತಂಪುಂಟಾಗುತ್ತದೆ. ಹರಳೆಣ್ಣೆಯನ್ನು ಹಚ್ಚಿ ಸ್ನಾನ ಮಾಡುವುದರಿಂದ ಚರ್ಮ ಮೃದುವಾಗುತ್ತದೆ, ಚರ್ಮದ ಕಾಂತಿ ಹೆಚ್ಚುತ್ತದೆ ಮತ್ತು ದೇಹದಲ್ಲಿ ಚೈತನ್ಯವು ಅಧಿಕವಾಗುತ್ತದೆ. ಹರಳೆಣ್ಣೆ ಉತ್ತಮ ವಿರೇಚಕ ಗುಣವುಳ್ಳ ತೈಲ. ವಯಸ್ಸಿಗನುಗುಣವಾಗಿ ಹರಳೆಣ್ಣೆಯನ್ನು ಸೇವಿಸಿದ್ದಲ್ಲಿ ಮಲವಿಸರ್ಜನೆ ಸರಾಗವಾಗಿ ಆಗುವುದು.

-ಹೊಟ್ಟೆ ತೊಳಸುವಿಕೆ, ವಾಕರಿಕೆ, ಸಂಕಟ, ಉದರಬೇನೆ ಇತ್ಯಾಧಿ ವ್ಯಾಧಿಗಳ ಪರಿಹಾರಕ್ಕೆ ನಿಂಬೆ ರಸದೊಂದಿಗೆ ಹರಳೆಣ್ಣೆ ಸೇವಿಸಬೇಕು..

-ಹರಳೆಣ್ಣೆಯನ್ನು ಅಂಗಾಂಗಗಳಿಗೆ ಹಚ್ಚಿ ಚೆನ್ನಾಗಿ ಮಾಲೀಸು ಮಾಡಿದ ನಂತರ ಬಿಸಿ ನೀರಿನ ಸ್ನಾನ ಮಾಡಿದ್ದಲ್ಲಿ ಮೈಕೈ ನೋವು, ಕೀಲು ನೋವು ಕಡಿಮೆಯಾಗಿ ಆಲಸ್ಯ ಕಡಿಮೆಯಾಗುವುದು.

-ಕಣ್ಣು ಚುಚ್ಚುವಿಕೆ ಮತ್ತು ಕಣ್ಣುರಿಗಳಿಗೆ ರಾತ್ರಿ ಮಲಗುವ ಮುಂಚೆ ಕಣ್ಣಿನ ರೆಪ್ಪೆಗಳಿಗೆ ಹರಳೆಣ್ಣೆಯನ್ನು ಹಚ್ಚಿದ್ದಲ್ಲಿ ಗುಣವಾಗುವುದು.

-ಹರಳೆಣ್ಣೆ ತಲೆಗೆ ಹಚ್ಚುವುದರಿಂದ ಕೂದಲು ಚೆನ್ನಾಗಿ ಬೆಳೆಯುವುದು ಮತ್ತು ಹೊಟ್ಟು ನಿವಾರಣೆಯಾಗುವುದು.

-ಗರ್ಭಿಣಿಯರು ದಿನಕ್ಕೊಮ್ಮೆ ಮೊಲೆ ತೊಟ್ಟಿಗೆ ಹರಳೆಣ್ಣೆ ಹಚ್ಚಿ ತೊಟ್ಟನ್ನು ಹೊರಮುಖವಾಗಿ ತೀಡಿದ್ದಲ್ಲಿ ಹೆರಿಗೆಯ ನಂತರ ಹಾಲು ಉಣಿಸುವ ಕಾರ್ಯ ಸುಗಮವಾಗುವುದು.

-ಹೆರಿಗೆಯ ನಂತರ ಸ್ತನಗಳಿಗೆ ಹರಳೆಣ್ಣೆ ಹಚ್ಚಿ ಮಾಲೀಶು ಮಾಡುವುದರಿಂದ ಹೆಚ್ಚು ಹಾಲು ಸ್ರವಿಸುವುದು.

-ಮಗುವು ಹೊಟ್ಟೆ ಉಬ್ಬರದಿಂದ ನರಳುತ್ತಿದ್ದರೆ ಹರಳೆಣ್ಣೆ ಸವರಿದ ವೀಳೇದೆಲೆಯನ್ನು ಬಿಸಿ ಮಾಡಿ ಅದರ ಶಾಖವನ್ನುಮಗುವಿನ ಹೊಟ್ಟೆಯ ಮೇಲಿಟ್ಟಲ್ಲಿ ತತ್ತಕ್ಷಣ ಪರಿಹಾರ ಲಭಿಸುವುದು.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

Watch:

Also Watch: ಈಗ ಗೊತ್ತಾಯ್ತು ತೆಂಗನ್ನ ಯಾಕೆ ಕಲ್ಪವೃಕ್ಷ ಅಂತ ಕರೀತಾರೆ.. ನಿಮಗೂ ಗೊತ್ತಾಗ್ಬೇಕಾ ಹಾಗಿದ್ರೆ ಮುಂದೆ ಓದಿ..