ದರ್ಶನ್ 50ನೇ ಸಿನಿಮಾ ಕುರುಕ್ಷೇತ್ರ ದಲ್ಲಿ ಅನ್ಯಾಯವಾಗ್ತಿದ್ಯ? ಸಿನೆಮಾಕ್ಕೂ ರಾಜಕೀಯ ಕಾಲಿಟ್ಟಿದ್ಯ??

0
1207

ಕನ್ನಡ ಸಿನಿಮಾರಂಗದಲೇ ವಿಭಿನ್ನವಾಗಿ ನಟನೆ ಮಾಡಿ ಅಭಿಮಾನಿಗಳ ಮನದಲ್ಲಿ ಹಚ್ಚೆಯಾಗಿ ಬೆಳೆಯಿತ್ತಿರುವ ದರ್ಶನ್ 49 ಚಿತ್ರಗಳನ್ನು ಪೂರ್ಣಗೊಳಿಸಿ 50 ನೇ ಸಿನಿಮಾ ಸಂಭ್ರಮದಲ್ಲಿ ನಟಿಸುತ್ತಿರೋ ಕುರುಕ್ಷೇತ್ರ ದಲ್ಲಿ ದರ್ಶನ್ ಗೆ ಅನ್ಯಾಯ ಆಗುತ್ತಿದೆ ಅಂತೆ!!

Also read: ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾದ ಅಧಿಕೃತ ಫೋಟೋಸ್ ಬಿಡುಗಡೆಯಾಗಿವೆ ದರ್ಶನ್ ಲುಕ್ ಸೂಪರ್ ನೀವು ನೋಡಿ..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೆಜೆಸ್ಟಿಕ್ ಸಿನಿಮಾದ ಮೂಲಕ ನಾಯಕನಾಗಿ ಅಭಿಮಾನಿಗಳ ಮನಗೆದ್ದು ಸಾರಥಿ, ಐರಾವತ, ಚಕ್ರವರ್ತಿ, ಜಗ್ಗುದಾದ, ಗಜ, ಬೃಂದಾವನ ಹೀಗೆ 49 ಚಿತ್ರಮಾಡಿ, ಅವರದೇ ಅಭಿಮಾನಿಗಳ ದಂಡನ್ನೇ ಕಟ್ಟಿಕೊಂಡಿರುವ ದರ್ಶನ್ ಅವರ 50ನೇ ಸಿನಿಮಾ ಬರುತ್ತಿರುವುದು ಅಭಿಮಾನಿಗಳಿಗೆ ಹುಚ್ಚು ಎಬ್ಬಿಸಿದೆ. ದರ್ಶನ್ ಅವರ 50ನೇ ಸಿನಿಮಾದ ವಿಶೇಷತೆ ಅಂದ್ರೆ ಪೌರಾಣಿಕ ಪಾತ್ರದ ಮೂಲಕ ದುರ್ಯೋಧನ ವೇಷದಲ್ಲಿ ಮಿಂಚುತ್ತಿರುವುದು ಅತಿ ರೋಚಕ ಅಂತಾನೆ ಹೇಳಬಹುದು. ಆದ್ರೆ ಇದೆ ಕುರುಕ್ಷೇತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಗೆ ಅನ್ಯಾಯ ಆಗ್ತಿದೆಯಂತೆ, ಹೌದು ಈ ಅನ್ಯಾಯ ಆಗ್ತಿರುವುದು ಬೇರೆ ಯಾರಿಂದ ಅಲ್ಲ ಮುಖ್ಯಮಂತ್ರಿ ಕುಮಾರಸ್ವಾಮಿರವರ ಪುತ್ರ ‘ನಿಖಿಲ್’ ನಿಂದ ಅಂತಾ ವದಂತಿ ಹೊರಡುತ್ತಿರುವುದು ದರ್ಶನ್ ಅಭಿಮಾನಿಗಳಿಗೆ ಬೇಸರ ತಂದಿದ್ದೆ. ಇದೆ ಕಾರಣಕ್ಕೆ ‘ಕುರುಕ್ಷೇತ್ರ’ ರಿಲೀಸ್ ಗೆ ಲೇಟ್ ಆಗ್ತಿರೋದು ಎಂಬ ಪ್ರಶ್ನೆ ಎಲ್ಲರಮನದಲ್ಲಿ. ಇನ್ನೂ ಈ ಕುರುಕ್ಷೇತ್ರದಲ್ಲಿ ಗಜ’ನಿಗೆ ಆಗ್ತಿರೋ ಅನ್ಯಾಯ ಅಂದ್ರೆ ಮುನಿರತ್ನ ದರ್ಶನ್ ಗೆ ಸರಿಸಮನಾಗಿ ನಿಖಿಲ್ ಗೆ ಮನ್ನಣೆ ನೀಡಿರುವುದು ಅಂತ ಸಿನಿಮಾ ಪ್ರಿಯರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.

Also read: ದರ್ಶನ್ ಕುರುಕ್ಷೇತ್ರಕ್ಕೆ ಕರ್ಣನಾಗಿ ಎಂಟ್ರಿ ಕೊಟ್ಟ ಶಿವರಾಜ್ ಕುಮಾರ್ ಇದನ್ನು ದರ್ಶನ್ ಒಪ್ಪಿಕೊಳ್ಳುತ್ತಾರ…!

ದರ್ಶನ್ ಹೇಳಿರೋ ಪ್ರಕಾರ 2018 ಮಾರ್ಚ್ ಹೊತ್ತಿಗೆ ಕುರುಕ್ಷೆತ್ರ ರಿಲೀಸ್ ಆಗುತ್ತೆ ಅಂತ ನಿರ್ಮಾಪಕರು ಹೇಳಿದ್ರು ಇದೀಗ ಮಾರ್ಚ್ ಮುಗಿದು ಐದು ತಿಂಗಳಾದ್ರೂ ಕುರುಕ್ಷೇತ್ರ ತೆರೆಗೆ ಬರುತ್ತಿರೋ ಸುಳಿವೇ ಇಲ್ಲ. ಯಾಕೆ? ಎಂಬುದು ನೂರಾರು ಅನುಮಾನವನ್ನು ಹುಟ್ಟಿಸುತ್ತಿದೆ. ಈ ಸಿನಿಮಾದ ನಿರ್ಮಾಪಕ ಮುನಿರತ್ನ ಹೇಳ್ತಿರೋದು ಹೀಗಿವೆ ನೋಡಿ. ಮುನಿರತ್ನ ಕೋಟಿ ಕೋಟಿ ಹಣ ಸುರಿದು ಮಾಡ್ತಿರೋ ಕುರುಕ್ಷೇತ್ರ, ದರ್ಶನ್ ಹೆಸರಲ್ಲೇ ಸದ್ದುಮಾಡ್ತಿರೋ ಈ ಸಿನಿಮಾದಲ್ಲಿ ಅವರಿಗೆ ಪ್ರಧಾನವಾದ ಪ್ರಾತವಿದೆಯೋ ಇಲ್ಲವೋ ಎಂಬುದು ಅನುಮಾನ. ಯಾಕೆಂದ್ರೆ ಪ್ರಧಾನ ಪಾತ್ರ ದುರ್ಯೋಧನ ಬಿಟ್ರೆ ಕೃಷ್ಣ, ಭೀಮಾ, ಅರ್ಜುನರು ಕಾಣಬೇಕು ಆದ್ರೆ ಇವರೆಲ್ಲರಿಗಿಂತ ಅಭಿಮನ್ಯು ಪಾತ್ರದಲ್ಲಿ ಮಿಂಚುತ್ತಿರೋ ನಿಖಿಲ್ ಎರಡೂವರೆ ಘಂಟೆ ಸಿನಿಮಾದಲ್ಲಿ ಅರ್ಧಘಂಟೆ ತೆರೆಮೇಲೆ ಕಾಣುತ್ತಾರೆ ಅಂತೆ.

Also read: ಕುರುಕ್ಷೇತ್ರ’ದಲ್ಲಿ ರವಿಚಂದ್ರನ್ ಪಾತ್ರ ಯಾವುದು ಗೊತ್ತಾ…?

ಈ ಮಾತನ್ನು ಖುದ್ದಾಗಿ ಅವರೇ ಮಾಧ್ಯಮದವರ ಮುಂದೆ ಹೇಳಿದ್ದಾರೆ. ಇದನ್ನು ನೋಡಿದ್ರೆ ದರ್ಶನ್ ಗಿಂತ ನಿಖಿಲ್ ಹೆಚ್ಹು ಸಿನಿಮಾದಲ್ಲಿ ಕಾಣುತ್ತಿರುವುದು ಯಾಕೇ ? ಮುಖ್ಯಮಂತ್ರಿ ಮಗ ಅಂತಾನಾ ? ಇಲ್ಲ ದರ್ಶನ್ ಸರಿಸಮಾನವಾಗಿ ನಿಖಿಲ್ ಬೆಳೆದಿದ್ದಾರೆ ಅಂತಾನ?. ಇಲ್ಲ ಮುನಿರತ್ನ ಇಂತಹ ವಿವಾದ ಸೃಷ್ಟಿಮಾಡಿ ಜನರ ತಲೆಯಲ್ಲಿ ಹುಳಬಿಟ್ಟು ದುಡ್ಡು ಮಾಡೋ ಐಡಿಯಾ ಏನಾದ್ರು ಇದಿಯಾ? ಅಂತ ಎಲ್ಲರ ವಿಚಾರ. ಹಾಗೆ ಇಷ್ಟುದಿನ ಬಿಡುಗಡೆಯಾದ ವೀಡಿಯೊದಲ್ಲಿ ದರ್ಶನ್ ಸರಿಸಮಾನವಾಗಿ ನಿಖಿಲ್ ಕಂಡು ಬಂದ್ದಿದ್ದಾರೆ, ಇದರಿಂದ 50 ನೇ ಸಿನಿಮಾದ ಕುಷಿಯಲ್ಲಿರುವ ಸಂಗೊಳ್ಳಿ ರಾಯಣ್ಣನಿಗೆ ಈ ಕುರುಕ್ಷೇತ್ರ ಚಿತ್ರದಿಂದ ಅನ್ಯಾಯವಾದ್ರೆ ದರ್ಶನ್ ಅಭಿಮಾನಿಗಳು ಸುಮ್ನೆ ಇರುವುದು ಸಾಧ್ಯಾನ ಎಂಬುವುದು ದೊಡ್ಡ ಪ್ರಶ್ನೆಯಾಗಿದೆ. ಈ ಎಲ್ಲಾ ವಿಚಾರದ ಬಗ್ಗೆ ನಿಖಿಲ್ ಗೆ ಕೇಳಿದ್ರೆ 3 ಸಿನಿಮಾ ಮಾಡಿರೋ ನಾನ್ ಎಲ್ಲಿ 50 ಸಿನಿಮಾ ಮಾಡಿರೋ ದರ್ಶನ್ ಎಲ್ಲಿ, ವಿನಾ ಕಾರಣ ವಿವಾದ ಹಬ್ಬಿರುವುದು ಬೇಸರ ತಂದಿದೆ ಅಂತ ತಮ್ಮ ಭಾವನೆ ವ್ಯಕ್ತಪಡಿಸಿದ್ರು.