ಅಂಗಡಿಗಳಿಂದ ಸಿಹಿ ತಿಂಡಿಗಳನ್ನು ತಿನ್ನುವವರು ಶಾಕ್-ಆಗುವ ವಿಚಾರ, ನೀವು ತಿನ್ನುವ ಸಿಹಿ ತಿಂಡಿ ನಿಜವಾಗಿಯೂ ಸುರಕ್ಷಿತವಾಗಿದೆಯೇ? ಮುಂದೆ ಓದಿ…

0
1995

ಖೋವಾ ಅಂದ್ರೆ ಸಾಕು ಒಮ್ಮೆ ಬಾಯಲ್ಲಿ ನೀರು ಬರುತ್ತೆ.. ಏಕೆಂದ್ರೆ ಅದರ ಸ್ವಾದವೇ ಅಂತಹದ್ದು.. ತಿಂದ್ರೆ ಮತ್ತೆ ಮತ್ತೆ ತಿನ್ನ ಬೇಕು ಅನ್ನಿಸುತ್ತಿದೆ. ನೀವು ಒಂದೊಮ್ಮೆ ಖೋವಾ ಪ್ರೀಯರಾ ಈ ಸ್ಟೋರಿ ಓದಿ ನಂತರ ಖೋವಾ ತಿನ್ನೋದೊ ಬೇಡವೋ ಅನ್ನೋದನ್ನು ಡಿಸೈಡ್​ ಮಾಡಿ.

ಖೋವಾ ಹೇಗೆ ತಯಾರಾಗುತ್ತೇ ಎಂದು ನಿಮಗೆ ಗೊತ್ತಾದ್ರೆ ನಿಮ್ಮ ರೋಮಗಳು ಸಹ ಎದ್ದು ನಿಲ್ಲುತ್ತವೆ. ಇದನ್ನು ಮಾಡುವ ವಿಧಾನವನ್ನು ಒಮ್ಮೆ ನೋಡಿದ್ರೆ ಸಾಕು ಇನ್ನೆಂದು ಈ ಖಾದ್ಯವನ್ನು ಕನಸಿನಲ್ಲೂ ತಿನ್ನುವುದಿಲ್ಲ ಎಂಬ ಭಾವ ಮನಸ್ಸಿನಲ್ಲಿ ಬರುತ್ತದೆ.

ಖೋವಾ ಒಂದು ಹೈನುಗಾರಿಕೆ ಉತ್ಪನ್ನ. ಅದನ್ನು ಖೋವಾ, ಖವಾ ಎಂದೂ ಕರೆಯುತ್ತಾರೆ. ಅದನ್ನು ಒಣ ಪೂರ್ಣ ಹಾಲು ಅಥವಾ ತೆರೆದ ಕಬ್ಬಿಣದ ಬಾಣಲೆಯಲ್ಲಿ ಕಾಯಿಸಿ ಗಟ್ಟಿಯಾಗಿಸಿದ ಹಾಲಿನಿಂದ ತಯಾರಿಸಲಾಗುತ್ತದೆ. ಈ ಆಹಾರ ಸಾಮಾನ್ಯ ತಾಜಾ ಗಿಣ್ಣುಕ್ಕಿಂತ ಕಡಿಮೆ ತೇವಾಂಶವನ್ನು ಹೊಂದಿರುತ್ತದೆ. ಧಾರವಾಡದ ಸುಪ್ರಸಿದ್ಧ ಪೇಢೆಯನ್ನೂ ಇದರಿಂದಲೇ ಮಾಡಲಾಗುತ್ತದೆ. ಈಗ ನಾವು ಹೇಳ್ತಿರುವ ಖೋವಾ ಹಾಲಿನಿಂದ ತಯಾರಿಸಲಾದ ಉತ್ಪವಂತೂ ಅಲ್ಲವೇ ಅಲ್ಲ.

ಹೌದು ತಮಿಳು ನಾಡಿನ ಕಾವೇರಿಪಟ್ಟಣಂನಲ್ಲಿ ಖೋವಾ ತಯಾರಿಸುವ ಕಾರ್ಖಾನೆಗಳು ಇವೆ. ಇಲ್ಲಿ ಮಾಡುವ ವಿಧಾನವನ್ನು ನೋಡಿದ್ರೆ ಮೈ ಜುಮ್ಮ ಎನ್ನುತ್ತದೆ. ಹೌದು, ಫ್ರೆಶ್​ ಹಾಲನ್ನು ಕುದಿಸಿ ತಯಾರಿಸಬಹುದಾದ ಖೋವಾವನ್ನು ಇಲ್ಲಿನ ಫ್ಯಾಕ್ಟರಿಗಳು ಬೇರೆ ರೀತಿಯಲ್ಲಿ ಮಾಡ್ತಾರೆ.

ಇಲ್ಲಿನ ಕೆಲವು ಫ್ಯಾಕ್ಟರಿಗಳ ಅಸಲಿಯತ್ತನ್ನು ಖಾಸಗಿ ವಾಹಿನಿಯೊಂದು ಬಯಲು ಮಾಡಿದೆ. ಈ ಕಾರ್ಖಾನೆಯಲ್ಲಿ ಡೇಟ್​ ಬಾರ್​ ಆದ ಹಾಲಿನ ಪೌಡರ್​ನಿಂದ ತಯಾರಿಸುತ್ತಾರೆ. ಈ ರಹಸ್ಯವನ್ನು ಬೇರೆ ಯಾರೇ ಹೇಳಿದ್ರೂ ಯಾರು ನಂಬುತ್ತಿರಲಿಲ್ಲ ಏನು ಆದ್ರೆ, ಕಾರ್ಖಾನೆಯ ಸಿಬ್ಬಂದಿಯೇ ಇದರ ಬಗ್ಗೆ ಹೇಳಿಕೆ ನೀಡಿದ್ದು, ನಿಜಕ್ಕೂ ಆತಂಕ ಮೂಡಿಸಿದೆ. ಇನ್ನು ಖೋವಾ ರುಚಿಯಾಗಲು ಕಂಪನಿಗಳು ಸೋಡಾಪುಡಿ, ಅಜಿನಮೋಟ, ಮಿತಿಮೀರಿ ಸಕ್ಕರೆ ಡೆಡ್ಲಿ ಕಲರ್​ಗಳನ್ನು ಬಳಸುತ್ತಾರೆ. ಇದರಿಂದ ಇದರ ಟೆಸ್ಟ್​ ಉತ್ತಮವಾಗುತ್ತದೆ ಎಂಬ ಭಾವ ಕಂಪನಿಗಳದ್ದು. ಇನ್ನು ಈ ತರಹದ ಖೋವಾಗಳನ್ನು ಕಲಾಕಂದ್​, ಬರ್ಫಿಗೆಲ್ಲಾ ಬಳಸುತ್ತಾರೆ. ಇನ್ನೊಂದು ಶಾಕಿಂಗ್​ ನ್ಯೂಸ್​ ಎಂದ್ರೆ ನಮ್ಮ ರಾಜ್ಯದಲ್ಲೇ ಈ ಖೋವಾಗೆ ಹೆಚ್ಚಿನ ಬೇಡಿಕೆ. ಅದ್ರಲ್ಲೂ ಬೆಂಗಳೂರು ಈ ಲೀಸ್ಟ್​​ನಲ್ಲಿ ನಂಬರ್​ 1.