ಮೈದಾ ಎಂಬ ಅತೀ ಭಯಂಕರ ವಿಷ…!!

0
46750

ನಾಲಿಗೆಗೆ ರುಚಿ ರುಚಿಯಾದ ತಿನಸು ತಿನ್ನುವುದೆಂದರೆ ಜನರಿಗೆ ಎಲ್ಲಿಲ್ಲದ್ದ ಸಂತೋಷ.ಅದರಲ್ಲೂ ಸಾಮಾನ್ಯವಾಗಿ ಬೇಕರಿ ತಿಂಡಿಯಂತೂ ಅಹಾ…. ಅಹಾ… ಸ್ಬರ್ಗ ಸುಖ. ತಿಂದರೇ ತಿನ್ನುತ್ತಲೇ ಇರಬೇಕಾನಿಸುತ್ತದೆ. ಅದರೇ ಬೇಕರಿಗಳಲ್ಲಿ ತಯಾರಿಸಲ್ಪಡುವ ಬಹುತೇಕ ಪದಾರ್ಥಗಳೂ ಬಳಕೆ ಮೈದದಿಂದಲೇ ಆಗುತ್ತದೆ ಎನ್ನುವುದು ನಿಮಗೆ ತಿಳಿದಿದೆಯೇ. ಇದರಿಂದ ಏನೂ ಸಮಸ್ಯೆ ಇಲ್ಲ ಎಂದು ನಂಬಿ ತಿನ್ನುವವರೇ ಹೆಚ್ಚು. ಅದರೇ ಇಲ್ಲಿದೇ ನಿಮಗೆ ಒಂದು ಶಾಕಿಂಗ್ ವಿಷಯ.

Also read: ಮೊಟ್ಟೆಯಲ್ಲಿರುವ ಔಷಧೀಯ ಗುಣಗಳನ್ನು ತಿಳಿದರೆ ಈಗಿನಿಂದಲೇ ಮೊಟ್ಟೆ ತಿನ್ನೋಕೆ ಶುರು ಮಾಡ್ತೀರ..

ಗೋಧಿಯಿಂದ ಉತ್ಪಾದಿಸಲಾಗುವ ಮೈದಹಿಟ್ಟು ಅತ್ಯಂತ ಅಪಾಯಕಾರಿ. ಇದರಿಂದ ಆಗುವ ತೊಂದರೆಗಳ ಬಗ್ಗೆ ಯಾರೂ ಕಿಂಚಿತ್ತೂ ಯೋಚಿಸದೆ ಬಳಸುತ್ತಲೇ ಇದ್ದಾರೆ. ನಾಲಿಗೆ ರುಚಿ ಮತ್ತು ಬಿಳಿ ಪದಾರ್ಥದ ಮೇಲೆ ನಮಗಿರುವ ಆರಾಧನೆ ಇದರ ಪ್ರಚಾರಕ್ಕೆ ಅನುಕೂಲವಾಗಿದೆ.

ಮೈದಾ ಇತಿಹಾಸ :

ಗೋಧಿಯಿಂದ ಉಮಿ ಮತ್ತು ತೌಡು ಸೇರಿದಂತೆ ಎಲ್ಲಾ ನಾರಿನ ಅಂಶಗಳೂ ತೆಗೆದು, ಅದರಲ್ಲಿರುವ ತರಿ ಮತ್ತು ಪುಡಿಯನ್ನು ಬೇರ್ಪಡಿಸಲಾಗುತ್ತದೆ. ಇವೆರಡನ್ನೂ ‘ಬೆನ್ಸೋಯಿಕ್ ಪೆರೋಕ್ಸೈಡ್’ ಬಳಸಿ ಬ್ಲೀಚ್ ಮಾಡಲಾಗುತ್ತದೆ. ತರಿಯ ‘ರವ’ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬರುತ್ತದೆ. ಪುಡಿಯನ್ನು ‘ಅಲೋಕ್ಸನ್’ ಎಂಬ ಕೆಮಿಕಲ್ ಸೇರಿಸಿ ಮೃದು ಮಾಡಿದ ಮೇಲೆ ಅದು ಮೈದಾ ಆಗುತ್ತದೆ.

1949 ರಲ್ಲಿ ಇಂಗ್ಲೆಂಡಿನಲ್ಲಿ ಮೈದಾವನ್ನು ನಿಷೇಧಿಸಲಾಗಿತ್ತು. ಅಮೇರಿಕ ಮತ್ತು ಯುರೋಪಿನಲ್ಲಿ ಟನ್‍ಗಟ್ಟಲೆ ಮೈದಾ ನದೀ ದಂಡೆಗಳಲ್ಲಿ ಮತ್ತು ಖಾಲಿ ಜಾಗಗಳಲ್ಲಿ ತಂದು ಸುರಿದ ನಂತರ ಪರಿಸರ ಸಮಸ್ಯೆ ಶುರುವಾದಾಗ ಅದಕ್ಕೆ ಪರಿಹಾರ ಏನು ಎಂದು ಯುರೋಪಿಯನ್ನರು ಯೋಚಿಸಿದರು. ನದೀ ದಡದಲ್ಲಿ ಅಲೆಯುತ್ತಿರುವ ಹಸುಗಳ ಮೈಮೇಲೆ ಮೈದಾ ಅಂಟಿಕೊಂಡಿರುವುದನ್ನು ನೋಡಿದ ಬುದ್ಧಿವಂತ ಬಿಳಿಯ ಸಾಹೇಬ ಅದರಿಂದ ‘ಕೇರ್’ ಎಂಬ ಹೆಸರಿನಲ್ಲಿ ಆಹಾರ ಪದಾರ್ಥಗಳನ್ನು ಮೂರನೇ ಜಗತ್ತಿನ ದೇಶಗಳಿಗೆ ಕಳುಹಿಸಿದಾಗ ಭಾರತಕ್ಕೂ ಇದನ್ನು ಕಳುಹಿಸಲಾಯಿತು. ಚಳುವಳಿಗಾರರು ಭಿತ್ತಿ ಚಿತ್ರಗಳನ್ನು ಅಂಟಿಸಲು ಮೈದಾವನ್ನು ಬಳಸುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಚಲನಚಿತ್ರದ ಪೋಸ್ಟರುಗಳನ್ನು ಅಂಟಿಸಲು ಮೈದಾವನ್ನೇ ಬಳಸಲಾಗುತ್ತಿದೆ.

ಮೈದಾದಿಂದ ತಯಾರಿಸುವ ಆಹಾರ ಪದಾರ್ಥಗಳು & ಅದರಿಂದಾಗುವ ಆರೋಗ್ಯ ಸಮಸ್ಯೆಗಳು :

ಈಗ ಮೈದಾವನ್ನು ಬಳಸಿ ಕೇಕ್, ಬ್ರೆಡ್, ಬನ್, ರಸ್ಕ್, ನೂಡಲ್ಸ್, ಸೇಮಿಯಾ, ಬಿಸ್ಕತ್, ಪರೋಟ, ಪೂರಿ, ಚಪಾತಿ, ನಾನ್, ತಂದೂರಿ, ರೋಟಿ ಇವೆಲ್ಲವನ್ನೂ ತಯಾರಿಸಲಾಗುತ್ತದೆ. ಮೈದಾ ತಿನ್ನುವವರಿಗೆ ಸಕ್ಕರೆ ಖಾಯಿಲೆ ಕಟ್ಟಿಟ್ಟ ಬುತ್ತಿ. ಏಕೆಂದರೆ, ಮೈದಾದಲ್ಲಿ ಬಳಸುವ ಅಲಾಕ್ಸ್‍ನ್ ಎಂಬ ಔಷಧಿಯು ಪ್ಯಾಂಕ್ರಿಯಾಸ್‍ನಲ್ಲಿರುವ ಬೀಟಾ ಜೀವಕೋಶಗಳನ್ನು ನಾಶ ಮಾಡಿ, ಇನ್‍ಸುಲಿನ್ ಕಡಿಮೆಯಾಗಲು ಕಾರಣವಾಗುತ್ತದೆ.

ಅಂಗಡಿಗಳಲ್ಲಿ ಮಾರುತ್ತಿರುವ ಎಲ್ಲಾ ಹಿಟ್ಟುಗಳಲ್ಲೂ ಅಲಾಕ್ಸನ್ ಬಳಸಲಾಗುತ್ತದೆ. ನಾವು ಮಾಡುವ ಹಿಟ್ಟು ಇಷ್ಟು ಮೃದುವಾಗಲು ಸಾಧ್ಯವಿಲ್ಲ. ಇನ್ನು ಬೇಕರಿಯಲ್ಲಿ ಮೈದಾ ಬಳಸುವಾಗ ಉಪಯೋಗಿಸುವ ಪದಾರ್ಥಗಳ ಬಗ್ಗೆ ತಿಳಿದರೆ ಗಾಬರಿಯಾಗುತ್ತದೆ. ಕೃತಕ ಬಣ್ಣಗಳು, ಮಿನರಲ್ ಆಯಿಲ್, ಟೇಸ್ಟ್ ಮೇಕರುಗಳು, ಪ್ರಿಸರ್ವೇಟೀವ್‍ಗಳು, ಡಾಲ್ಡ, ಸಕ್ಕರೆ, ಸಾಕರಿನ್, ಅಜಿನೋಮೋಟೋ ಇವೆಲ್ಲವನ್ನೂ ಸೇರಿಸಲಾಗುತ್ತದೆ. ಬಣ್ಣವಾಗಿ ಬಳಸುವುದೆಲ್ಲವೂ ಪೆಟ್ರೋಲಿಯಂ ಉಪ ಉತ್ಪನ್ನಗಳೇ, ಈ ಬಣ್ಣಗಳು ಅರ್ಬುಧಕ್ಕೆ (ಕ್ಯಾನ್ಸರ್‍ಗೆ) ಕಾರಣವಾಗುತ್ತವೆ. ಬೇಕರಿಗಳಲ್ಲಿ ಎಣ್ಣೆಗೆ ಬದಲು ಬಳಸುವುದು ಮಿನರಲ್ ಆಯಿಲ್ ಎಂಬ ಲಿಕ್ವಿಡ್ ಪಾರಫೀನ್ ಆಗಿದೆ.

Also read: ಕಷ್ಟಪಟ್ಟು ಮಾಡುವ ಹಿಟ್ಟುಗಳನ್ನು ಸರಿಯಾಗಿ ಇಡದಿದ್ದರೆ ಹಾಳಾಗುತ್ತದೆ, ಯಾವ ಹಿಟ್ಟನ್ನು ಹೇಗೆ ಸಂರಕ್ಷಿಸಬೇಕು ಅಂತ ಹೇಳ್ತೀವಿ ನೋಡಿ…