ಬಿಜೆಪಿ ರೈತ ವಿರೋಧಿಯೇ? ದೆಹಲಿಯ ರೈತರ ಮೇಲಿನ ಪೋಲಿಸ್ ದೌರ್ಜನ್ಯ ಯಡಿಯೂರಪ್ಪ ಸರ್ಕಾರದ ಶೂಟ್-ಔಟ್-ಅನ್ನು ಜ್ಞಾಪಿಸಿದೆ!!

0
322

ಬಿಜೆಪಿ ರೈತ ವಿರೋಧಿಯೇ?

ಪ್ರಧಾನಿ ನರೇಂದ್ರ ಮೋದಿ ತಾವು ಉದ್ಯಮಿ ಪರ ಎಂದು ಬಹಿರಂಗವಾಗಿಯೇ ಹೇಳಿಕೊಂಡು ಬೀಗಿದರು. ಆದರೆ ಎಂದೂ ನಾನು ರೈತ ಪರ ಎಂದು ಹೇಳಿಕೊಂಡಿಲ್ಲ. ಬಹುಶಃ ಇದು ಒಟ್ಟಾರೆ ಬಿಜೆಪಿ ಮನಸ್ಥಿಯೇ ಇರಬೇಕು. ಏಕೆಂದರೆ ಬಿಜೆಪಿ ಆಡಳಿತದ ಸರಕಾರಗಳು ಅಸ್ತಿತ್ವಕ್ಕೆ ಬಂದಲೆಲ್ಲಾ ರೈತರ ಮೇಲೆ ದಬ್ಬಾಳಿಕೆ ನಡೆದ ಸಾಕ್ಷಿಗಳು ಇವೆ.

Also read: ವಿಮಾನ ಪ್ರಯಾಣದಲ್ಲೂ ಫೇಸ್ ರೆಕಾಗ್ನಿಶನ್ ವ್ಯವಸ್ಥೆ, ಈ ಕೀರ್ತಿ ಪಡೆದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ!!

ದೆಹಲಿಯಲ್ಲಿ ರೈತರ ಮೇಲೆ ಜಲಫಿರಂಗಿ:

ದೆಹಲಿಯಲ್ಲಿ ಮೊನ್ನೆ ಪ್ರತಿಭಟನೆಗೆಂದು ಬಂದ ರೈತರ ಮೇಲೆ ಪೊಲೀಸರು ಅಶ್ರುವಾಯು, ಜಲಫಿರಂಗಿ ಸಿಡಿಸಿದ್ದಾರೆ. ಇದರಿಂದ ಹಲವಾರು ರೈತರು ಗಾಯಗೊಂಡರು. ಇದರಿಂದ ರೈತರು ಬೇಡಿಕೆ ಈಡೇರದೇ ಇದ್ದರೂ ದಣಿದಿದ್ದರಿಂದ ತಾತ್ಕಾಲಿಕವಾಗಿ ಧರಣಿ ವಾಪಸ್ ಪಡೆದು ಹಿಂತಿರುಗಿದ್ದಾರೆ. ಈ ಘಟನೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಡೆದಿದ್ದು ಮೊದಲೇನಲ್ಲ. ಈ ಹಿಂದೆ ಚೆನ್ನೈನಿಂದ ರೈತರು ನೂರಾರು ದಿನ ದೆಹಲಿಯಲ್ಲಿ ಮೊಕ್ಕಂ ಹೂಡಿದ್ದರೂ ಪ್ರಧಾನಿ ಮೋದಿ ಅತ್ತ ತಲೆಯೇ ಹಾಕಲಿಲ್ಲ.

Also read: ಬಿ.ಜೆ.ಪಿ. ಆಡಳಿತವಿರುವ ಮಧ್ಯಪ್ರದೇಶದಲ್ಲಿ ಬಾಲಕಿಯ ಮೇಲೆ ದೇವಾಲಯದ ಪ್ರಾಂಗಣದಲ್ಲೇ ಅರ್ಚಕರಿಂದ ಅತ್ಯಾಚಾರ..!

ಸಾಲಮನ್ನ ಸೇರಿದಂತೆ ನಾನಾ ಬೇಡಿಕೆಗಳಿಗೆ ಆಗ್ರಹಿಸಿದ ತಮಿಳುನಾಡಿನ ರೈತರು ಮೂತ್ರ ಕುಡಿಯುವುದು, ಶೌಚ ಮೈಮೇಲೆ ಸುರಿದುಕೊಳ್ಳುವುದು, ಸತ್ತ ರೈತರ ತಲೆ ಬುರುಡೆ ಹಿಡಿದು.. ಸೇರಿದಂತೆ ನಾನಾ ರೀತಿಯ ಉಗ್ರ ಪ್ರತಿಭಟನೆ ನಡೆಸಿದರೂ ಪ್ರಧಾನಿಯ ಮನ ಕರಗಲೇ ಇಲ್ಲ. ಇದರ ನಡುವೆ ಉತ್ತರ ಪ್ರದೇಶದಿಂದ ಸುಮಾರು 30 ಸಾವಿರ ರೈತರು ಸತತ 12 ದಿನಗಳ ಕಾಲ ಸಾಲಮನ್ನ, ಪಿಂಚಣಿ ಸೇರಿದಂತೆ 11 ಬೇಡಿಕೆಗಳಿಗೆ ಆಗ್ರಹಿಸಿ ದೆಹಲಿ ಚಲೋ ಪ್ರತಿಭಟನೆ ನಡೆಸಿದರು. ಆದರೆ ಗಡಿಯಲ್ಲಿ ಅವರನ್ನು ಪೊಲೀಸರು ತಡೆಯುವ ಬದಲು ಅಶ್ರುವಾಯು, ಜಲ ಫಿರಂಗಿ ಸಿಡಿಸಿ ಘಾಸಿ ಉಂಟು ಮಾಡಿದರು.

ಬಿಎಸ್ವೈ ಸರಕಾರ ಗುಂಡು ಹಾರಿಸಿತ್ತು!

Also read: “ಇಂದು ಭಾರತದಲ್ಲಿ ಮೋದಿ ಅಲೆ ಇಲ್ಲ, ಜನರ ನಂಬಿಕೆಯನ್ನು ಮೋದಿ ಹಾಳು ಮಾಡಿದ್ದಾರೆ” ಶಶಿ ತರೂರ್ ಅವರ ಮಾತನ್ನು ನೀವು ಒಪ್ಪುತ್ತೀರಾ?!

ರೈತ ದೇಶದ ಬೆನ್ನೆಲುಬು. ಆತ ನಮಗೆ ಅನ್ನವನ್ನು ನೀಡುವ ಅನ್ನದಾತ ಅಂತ ರೈತರ ಹಸಿರು ಶಾಲು ಹೊದ್ದು ಅವರ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಬಿ.ಎಸ್. ಯಡಿಯೂರಪ್ಪ ರಸಗೊಬ್ಬರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗುಂಡು ಹಾರಿಸಿ ಕಳೆದ ಜೂನ್ಗೆ 10 ವರ್ಷ ಆದರೂ ಸಂತ್ರಸ್ತರಿಗೆ ಇನ್ನೂ ನೆರವು ಕೊಡುವುದಿರಲಿ, ಅವರ ಬಗ್ಗೆ ಚಕಾರ ಕೂಡ ಎತ್ತಿಲ್ಲ. ಜೂನ್ 10 2008 ರಂದು ಹಾವೇರಿ ಜಿಲ್ಲೆಯಲ್ಲಿ ರಸಗೊಬ್ಬರಕ್ಕಾಗಿ ರೈತರು ಗಲಾಟೆ ಮಾಡಿದ್ದರು. ರೈತರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದ್ದರು. ಆ ವೇಳೆಗೆ ಸಿದ್ದಲಿಂಗಪ್ಪ ಚೂರಿ ಮತ್ತು ನೆಲೋಗಲ್ಲ ಗ್ರಾಮದ ರೈತ ಪುಟ್ಟಪ್ಪ ಹೊನ್ನತ್ತಿ ಗುಂಡೇಟಿಗೆ ಬಲಿಯಾಗಿದ್ದರು. ನ್ಯಾಯ ಕೊಡಿಸಬೇಕಾದ ಆಯೋಗವೇ ರೈತರನ್ನು ಗೂಂಡಾಗಳು ಅಂತಾ ವರದಿ ನೀಡಿತ್ತು. ಆದ್ರೆ ಈ ವರದಿಯನ್ನು ರಾಜ್ಯ ಸರ್ಕಾರ ಬಹಿರಂಗ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ 50 ಸಾವಿರ ರೂಪಾಯಿ ಪರಿಹಾರ ಕೊಟ್ಟು ಕೈತೊಳೆದುಕೊಂಡಿದ್ದು ಬಿಟ್ಟರೆ ಸೂಕ್ತ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ.