ನಿನ್ನೆಯ ಗ್ರಹಣದ ದಿನವೇ ಉತ್ತರ ಭಾರತದಲ್ಲಿ ಭಾರಿ ಭೂಕಂಪನ ಆಗಿದೆ, ಇದು ಕೇವಲ ಕಾಕತಾಳಿಯವೇ ಅಥವಾ ದೈವಿಕ ನಿಗೂಢತೆ ಇದೆಯೇ?

0
374

ನಿನ್ನೆ ಅಪರೂಪದ ಚಂದ್ರಗ್ರಹಣ ಸಂಭವಿಸಲಿದೆ, ಇದು 150 ವರ್ಷಗಳ ನಂತರ ನಡೆದ ವಿಶೇಷ ಗ್ರಹಣವಂತೆ, ಈ ಹಿನ್ನೆಲೆ ದೇಶದ ಅನೇಕ ದೇವಸ್ಥಾನದಲ್ಲಿ ದೇವರ ದರ್ಶನದಲ್ಲಿ ಸಮಯ ಬದಲಾವಣೆ ಮಾಡಲಾಗಿತ್ತು. ಆದರೆ, ಚಂದ್ರಗ್ರಹಣದ ದಿನದಂದೇ ಉತ್ತರ ಭಾರತದಲ್ಲಿ ದೊಡ್ಡ ಭೂಕಂಪ ಸಂಭವಿಸಿದೆ ಗೊತ್ತಾ.

ಹೌದು, ಅಫ್ಘಾನಿಸ್ತಾನ-ಕಜಕಿಸ್ತಾನದ ಗಡಿಭಾಗದಲ್ಲಿ ಭೂಕಂಪನದ ಕೇಂದ್ರ ಬಿಂದುವನ್ನು ಗುರುತಿಸಲಾಗಿದ್ದು, ರಿಕ್ಟರ್ ಮಾಪಕದಲ್ಲಿ 6.1 ರಷ್ಟು ತೀವ್ರತೆ ದಾಖಲಾಗಿದೆ. ಅಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಉತ್ತರ ಭಾರತದ ದೆಹಲಿ, ಪಂಜಾಬ್, ಹಿಮಾಚಲ, ಹರಿಯಾಣ ಹಾಗೂ ಜಮ್ಮು ಕಾಶ್ಮೀರದಲ್ಲಿ ಭೂಮಿ ನಡುಗಿದ ಬಾರಿ ಶಬ್ದದ ಕೇಳಿಬಂದಿದೆ.

ಚಂದ್ರಗ್ರಹಣಕ್ಕೂ, ಭೂಕಂಪನಕ್ಕೂ ಏನಾದರು ಸಂಬಂಧವಿದೆಯಾ? ಹೌದು, ಇದೆ ಎನ್ನುತ್ತದೆ ವಿಜ್ಞಾನ, ಅದಕ್ಕೆ ಹಲವಾರು ದಾಖಲೆಸಹಿತ ಸಾಕ್ಷಿಗಳು ಇವೆ. ಇದಕ್ಕೂ ಮೊದಲು ಅಂದರೆ 2001 ರ ಜನವರಿ 11 ರಂದು ಚಂದ್ರಗ್ರಹಣ ಸಂಭವಿಸಿತ್ತು, ಇದಾದ ಕೇವಲ 15 ದಿನಗಳ ನಂತರ ಗುಜುರಾತಿನಲ್ಲಿ ಶೇ. 7.6 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಲ್ಲಿ 166000 ಜನ ಗಾಯಗೊಂಡು, 19727 ಸಾವಿರ ಜನ ಸಾವನ್ನಪ್ಪಿದರು.

ಮೇ 16, 2003 ರಲ್ಲಿ ಟರ್ಕಿ ದೇಶದಲ್ಲಿ ಚಂದ್ರಗ್ರಹಣ ಸಂಭವಿಸಿತ್ತು. ಇದಕ್ಕೂ ಕೇವಲ 15 ದಿನಗಳ ಮುಂಚಿತವಾಗಿ ಶೇ. 6.4 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಲ್ಲಿ 521 ಜನ ಗಾಯಗೊಂಡು, 126 ಜನ ಸಾವನ್ನಪ್ಪಿದರು. ಸೆಪ್ಟೆಂಬರ್ 16, 1978 ರಲ್ಲಿ ಇರಾನ್ ದೇಶದಲ್ಲಿ, ಚಂದ್ರಗ್ರಹಣ ಸಂಭವಿಸುವ ಕೇವಲ 3.5 ತಾಸಿಗೂ ಮುಂಚಿತವಾಗಿ ಭೂಕಂಪವಾಯಿತು, ಇದರಲ್ಲಿ 25000 ಅಧಿಕ ಜನ ಪ್ರಾಣಬಿಟ್ಟರು.

ವಿಜ್ಞಾನಿಗಳ ಪ್ರಕಾರ ಚಂದ್ರಗ್ರಹಣ ಸೂಪರ್-ಮೂನ್ ಪ್ರಭಾವದಿಂದ ಸಂಭವಿಸುತ್ತದೆಯಂತೆ, ಇದರಲ್ಲಿ ಭೂಮಿ ಸೂರ್ಯನ ಕಿರಣಗಳ ಮದ್ಯೆ ಬರುತ್ತದೆ, ಇದರಿಂದಾಗಿ ಅವು ಚಂದ್ರನನ್ನು ತಲುಪುವುದಿಲ್ಲ. ಇದೆ ರೀತಿ ಸೂರ್ಯ ಗ್ರಹಣವು ಸಂಭವಿಸುತ್ತದೆ. ಸೂರ್ಯ ಮತ್ತು ಚಂದ್ರನ ಮದ್ಯೆ ಬರುವುದರಿಂದ ಭೂಮಿಯ ಗುರುತ್ವಾಕರ್ಷಣೆಯಲ್ಲಿ ಏರು ಪೇರಾಗಿ ಭೂಕಂಪ ಸಂಭವಿಸುತ್ತದೆಯಂತೆ.

ಇದೆ ಕಾರಣಕ್ಕೆ ಗ್ರಹಣದ ಸಂದರ್ಭದಲ್ಲಿ ಹೆಚ್ಚಾಗಿ ಭೂಕಂಪನ ಸಂಭವಿಸುತ್ತದೆಯಂತೆ. ಅದಕ್ಕೆ, ಗ್ರಹಣ ಮತ್ತು ಭೂಕಂಪ ಒಂದಕ್ಕೊಂದು ಪರಸ್ಪರ ಸಂಬಂಧಿಸಿದೆ. ಎರಡು ಒಂದೇ ಬಾರಿ ನಡೆಯುವುದು ಕಾಕತಾಳಿಯವೋ ಅಥವಾ ವಿಜ್ಞಾನವೋ ನೀವೇ ಯೋಚಿಸಿ.