ಇನ್ಮುಂದೆ ಕ್ಯಾನ್ಸರ್ ಖಾಯಿಲೆಗೆ ಹೆದರಬೇಕಿಲ್ಲ; ಅಂತು ಇಂತೂ ಕ್ಯಾನ್ಸರ್‌ಗೆ ಪರಿಣಾಮಕಾರಿ ಔಷಧಿ ಕಂಡು ಹಿಡಿದ ಇಸ್ರೇಲ್ ವಿಜ್ಞಾನಿಗಳು..

0
4189

ಇತ್ತೀಚಿನ ದಿನಗಳಲ್ಲಿ ಮಾನವನಿಗೆ ಬರುವ ಖಾಯಿಲೆಗಳು ವಿಭಿನ್ನವಾಗಿವೆ. ಅದರಲ್ಲಿ ಹೆಚ್ಚು ಅಪಾಯಕಾರಕ ಖಾಯಿಲೆ ಎಂದರೆ ಕ್ಯಾನ್ಸರ್, ಈ ಖಾಯಿಲೆ ದೇಹದ ಯಾವುದೇ ಭಾಗದಲ್ಲಿ ಕಂಡು ಬಂದರು ಸರಿಯಾದ ಚಿಕಿತ್ಸೆ ಇಲ್ಲದೆ ರೋಗಿಯನ್ನು ಕೊನೆಯ ಹಂತಕ್ಕೆ ತಲುಪಿಸುತ್ತೆ. ಇದಕ್ಕೆ ಎಷ್ಟೇ ಹಣ ಶುರಿದರು ರೋಗದಿಂದ ಮುಕ್ತಿಯಾಗಲು ಸಾಧ್ಯವಾಗುವುದಿಲ್ಲ, ಈ ಕ್ಯಾನ್ಸರ್ ಮೊದಲನೆ ಹಂತದಲ್ಲಿ ಪತ್ತೆಯಾದರೆ ರೋಗಿ ಉಳಿಯುವ ಸಾದ್ಯತೆ ಇರುತ್ತೆ, ಒಂದು ವೇಳೆ ಅದನ್ನು ಮೀರಿದರೆ ವ್ಯಕ್ತಿಗೆ ಸಾವೇ ಗತಿಯಾಗುತ್ತೆ. ಏಕೆಂದರೆ ಪ್ರತಿನಿತ್ಯವೂ ಕ್ಯಾನ್ಸರ್ ನಿಂದ ಸಾವಿರಾರು ಜನರು ಸಾಯಿತ್ತಿರುವುದು ಸಾಕ್ಷಿಯಾಗಿದೆ.

ಹೌದು ಡೇಂಜರಸ್ ಖಾಯಿಲೆಗಳಲ್ಲಿ ಒಂದಾದ ಕ್ಯಾನ್ಸರ್ ಗೆ ಒಂದು ಪರಿಣಾಮಕಾರಿ ಔಷಧಿ ಕಂಡು ಹಿಡಿಯಲು ಹಲವು ದೇಶದ ವಿಜ್ಞಾನಿಗಳು ಪ್ರಯತ್ನ ಪಟ್ಟರು ಅದು ಯಶಸ್ವಿಯಾಗಿಲ್ಲ, ಅದೇ ಪ್ರಯತ್ನದಲ್ಲಿ ಇಸ್ರೇಲ್ ವಿಜ್ಞಾನಿಗಳು ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳು ಮತ್ತು ಕ್ಯಾನ್ಸರ್‌ ಕೋಶಗಳನ್ನು ಮಾತ್ರ ಗುರಿಯಾಗಿಸಿ, ನೇರವಾಗಿ ಅದರ ಮೇಲೆಯೇ ದಾಳಿ ಮಾಡಿ ಗುಣಪಡಿಸುವ ಔಷಧಿಯನ್ನು ಕಂಡು ಹಿಡಿದು ಪ್ರಪಂಚವೆ ತಮ್ಮತ್ತ ತಿರುಗುವಂತೆ ಮಾಡಿದ್ದಾರೆ.

ಈ ವಿಷಯವಾಗಿ ಮಾಹಿತಿ ನೀಡಿದ ವ್ಯದ್ಯರ ತಂಡ 2020ರೊಳಗೆ ಕ್ಯಾನ್ಸರ್‌ನ್ನು ಸಂಪೂರ್ಣವಾಗಿ ಗುಣಪಡಿಸಬಲ್ಲ ಔಷಧಿ ತಯಾರಿಸುತ್ತೇವೆಂದು ಖಚಿತಪಡಿಸಿದ್ದಾರೆ. ಈ ವಿಜ್ಞಾನಿಗಳು ತಾವು ಸಿದ್ಧಪಡಿಸಿರುವ ಔಷಧಿ ಪರೀಕ್ಷಿಸುವ ಕೊನೆಯ ಹಂತದಲ್ಲಿದ್ದಾರೆನ್ನಲಾಗಿದೆ. ಒಂದು ವೇಳೆ ಅವರು ತಮ್ಮ ಪ್ರಯೋಗದಲ್ಲಿ ಯಶಸ್ವಿಯಾದದರೆ ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳಿಗೆ ತಮ್ಮ ನೋವಿನಿಂದ ಮುಕ್ತಿ ಸಿಗಲಿದೆ.

ಏನಿದು ಔಷಧಿ?

ಮುಟಾಟೊ ಹೆಸರಿನ ಕ್ರಾಂತಿಕಾರಿ ಕ್ಯಾನ್ಸರ್‌ ಚಿಕಿತ್ಸಾ ಔಷಧವನ್ನು ಅಕ್ಸಿಲರೇಟೆಡ್ ಇವೊಲ್ಯೂಶನ್ ಬಯೋಟೆಕ್ನಾಲಜೀಸ್ ಲಿ. ಅಭಿವೃದ್ಧಿಪಡಿಸಿದೆ. ಮುಟಾಟೊ ಎಂದರೆ, ಮಲ್ಟಿ ಟಾರ್ಗೆಟ್ ಟಾಕ್ಸಿನ್. ಅದು ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳು ಮತ್ತು ಕ್ಯಾನ್ಸರ್‌ ಕೋಶಗಳನ್ನು ಮಾತ್ರ ಗುರಿಯಾಗಿಸಿ, ನೇರವಾಗಿ ಅದರ ಮೇಲೆಯೇ ದಾಳಿ ನಡೆಸುತ್ತದೆ. ಉಳಿದಂತೆ ಆರೋಗ್ಯವಂತ ಕೋಶಗಳಿಗೆ ಯಾವುದೇ ಹಾನಿಯೆಸಗುವುದಿಲ್ಲ. ಎಂದು ದ ಜೆರುಸಲೆಂ ಕಂಪೆನಿಯ ಚೇರ್ ಮನ್ ಡೆನ್ ಎರಿಡೋರ್ ಈ ಕುರಿತಾಗಿ ಹೇಳಿದ್ದಾರೆ.

ಡಾ. ಎರಿಡೋರ್ ಮಾಹಿತಿಯಂತೆ:

ನಾವು ಕಂಡು ಹುಡುಕಿರುವ ಕ್ಯಾನ್ಸರ್ ಔಷಧಿಯ ಪ್ರಭಾವ ಮೊದಲ ದಿನದಿಂದಲೇ ಕಂಡುಕೊಳ್ಳಬಹುದು. ಇದರಿಂದ ಯಾವುದೇ ದುಷ್ಪರಿಣಾಮಗಳಿಲ್ಲ ಹಾಗೂ ಇದು ದುಬಾರಿಯಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಿಗಳಿಗೆ ಹೋಲಿಸಿದರೆ ಇದು ಬಹಳ ಕಡಿಮೆ ಬೆಲೆಗೆ ಜನರ ಕೈತಲುಪಲಿದೆ. ಇದು ಫೋರ್ಬ್ಸ್ ನಲ್ಲಿ ಪ್ರಕಟವಾಗಿರುವ ವರದಿಯನ್ವಯ ಮುಟಾಟೋ ಕ್ಯಾನ್ಸರ್ ಕ್ಯಾನ್ಸರ್-ಟಾರ್ಗೆಟಿಂಗ್ ಪೆಪ್ಸಿಡೇಸ್ ಹಾಗೂ ಯೂನಿಕ್ ಟಾಕ್ಸಿನ್ ನ ಮಿಶ್ರಣವೆನ್ನಲಾಗಿದೆ. ಇದು ಕೇವಲ ಕ್ಯಾನ್ಸರ್ ಪೀಡಿತ ಜೀವಕೋಶಗನ್ನಷ್ಟೇ ನಾಶಪಡಿಸುತ್ತವೆ. ಕಿಮೋ ಅಥವಾ ಇತರ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುವ ಔಷಧಿಗಳಂತೆ ಆರೋಗ್ಯಯುತ ಜೀವಕೋಶಗಳನ್ನೂ ಇದು ನಾಶಪಡಿಸುವುದಿಲ್ಲ. ಈಗಾಗಲೇ ಇಲಿಗಳ ಮೇಲೆ ಈ ಔಷಧಿಯನ್ನು ಪ್ರಯೋಗಿಸಲಾಗಿದ್ದು, ಯಸಶ್ಸು ಲಭಿಸಿದೆ. 2019ರಲ್ಲಿ ಮನುಷ್ಯರ ಮೇಲೂ ಇದರ ಪ್ರಯೋಗ ನಡೆಯಲಿದೆ. ಎಂದು ಹೇಳಿದ್ದಾರೆ.

Also read: ಎಳೆ ಕಂದಮ್ಮಗಳಿಗೆ ಹಚ್ಚುವ ಜಾನ್ಸನ್ ಬೇಬಿ ಪೌಡರ್-ನಿಂದ ಮಕ್ಕಳಿಗೆ ಭೇಕರ ಕ್ಯಾನ್ಸರ್ ಬರಬಹುದು ಎಂದು ಶ್ರೀಲಂಕಾದಲ್ಲಿ ಬ್ಯಾನ್ ಮಾಡಲಾಗಿದೆ.. ನಮ್ಮ ದೇಶದಲ್ಲೂ ಹೀಗೆ ಮಾಡಬೇಕಾ?