ಅತ್ಯದ್ಭುತ ಸಾಧನೆಗಳನ್ನು ಮಾಡುತ್ತಾ ಬಂದಿರುವ “ಇಸ್ರೋ”ದ ಒಂದು ವಿಶ್ಲೇಷಣೆ!!

0
899
ದಾಖಲೆ ಉಪಗ್ರಹ ಉಡಾವಣೆ ಮಾಡಿದ ಇಸ್ರೋ
ಬಾಹ್ಯಾಕಾಶ ಲೋಕದಲ್ಲಿ ಇಸ್ರೋ ಹೊಸ ಮೈಲುಗಲ್ಲು
ಬಾಹ್ಯಾಕಾಶ ಲೋಕದಲ್ಲಿ ತನ್ನದೇ ಚಾಪು ಮೂಡಿಸಿರುವ ಇಸ್ರೋ, ಬುಧವಾರ ಮತ್ತೊಂದು ಹಿರಿಮೆಗೆ ಕೊರಳೊಡ್ಡಿದೆ. ಏಕಕಾಲಕ್ಕೆ ೧೦೪ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ಇತಿಹಾಸ ನಿರ್ಮಿಸಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ಸಿ-೩೭ ಉಪಗ್ರಹ ಬೆಳಗ್ಗೆ ೯.೨೮ಕ್ಕೆ ಉಡಾವಣೆಗೊಂಡಿತು.
 
ಇದರಲ್ಲಿ ಇಸ್ರೋ ಭಾರತದ ೩, ಇಸ್ರೇಲ್, ಕಜಕಿಸ್ತಾನ್, ನೆದರ್‌ಲ್ಯಾಂಡ್, ಸ್ವಿಜರ್‌ಲೆಂಡ್, ಯು.ಎ.ಇ.ಯ ತಲಾ ಒಂದು, ಅಮೇರಿಕದ ೯೬ ಉಪಗ್ರಹಳು ಸೇರಿವೆ. 
ಉಪಗ್ರಹ ಉಡಾವಣೆಯಲ್ಲಿ ತನ್ನ ಹೆಜ್ಜೆಗುರುತನ್ನು ಬಲಿಷ್ಠವಾಗಿ ಮೂಡಿಸುತ್ತಿರುವ ಇಸ್ರೋ ವಿದೇಶಿ ವಿಜ್ಞಾನಿಗಳಿಂದಲೂ ಪ್ರಶಂಸೆಗೆ ಪಾತ್ರವಾಗಿದೆ. ಈ ಹಿಂದೆ ರಷ್ಯಾ ಒಂದು ಬಾರಿ ೩೬ ಉಪಗ್ರಹಗಳ ಉಡಾವಣೆ ಮಾಡಿದ್ದು, ದಾಖಲೆಯಾಗಿತ್ತು. ಈ ದಾಖಲೆಯನ್ನು ಅಳಿಸಿರುವ ಇಸ್ರೋ ಹೊಸ ದಾಖಲೆಯನ್ನು ಬರೆದಿದೆ. 
 
ಇಸ್ರೋ ದಾಖಲೆ 
ಇಸ್ರೋ ಹೊಸ ಕಾರ್ಯಗಳಿಗೆ ಪ್ರತಿಭಾರಿಯೂ ಸನ್ನದ್ಧವಾಗುತ್ತದೆ. ೧೦೪ ಉಪಗ್ರಹ ಏಕಕಾಲಕ್ಕೆ ಉಡಾವಣೆ ಮಾಡಿ ಇಸ್ರೋ ದಾಖಲೆ ನಿರ್ಮಿಸಿದೆ. ಕಡಿಮೆ ವೆಚ್ಚದಲ್ಲಿ ಉಪಗ್ರಹ ಉಡಾವಣೆ, ಹಾಗೂ ನಿಖರ ಗುರಿ ತಲುಪುವ ಇಸ್ರೋ ಕಾರ್ಯಕ್ಕೆ ಹಲವು ವಿದೇಶಿ ಕಂಪನಿಗಳು ಮನಸೋತಿವೆ. ಇದರಿಂದ ಈ ಬಾರಿ ಉಡಾವಣೆಯಾದವುಗಳಲ್ಲಿ ವಿದೇಶಿ ಉಪಗ್ರಹಗಳ ಸಂಖ್ಯೆ ಹೆಚ್ಚಿದೆ. ಇದಕ್ಕೂ ಮೊದಲು ರಷ್ಯಾ ೨೦೧೪ರಲ್ಲಿ ೩೯ ಉಪಗ್ರಹಗಳನ್ನು, ಅಮೆರಿಕದ ನಾಸಾ ೨೦೧೩ರಲ್ಲಿ ೨೯ ಉಪಗ್ರಹಗಳ ಉಡಾವಣೆ ಮಾಡಿತ್ತು.
 
ಇಸ್ರೋ ಏಕೆ ವಿದೇಶಿಗರಿಗೆ ಅಚ್ಚು ಮೆಚ್ಚು? 
ಇಸ್ರೋ ಭಾರತದ ಸಂಸ್ಥೆಯಾದರೂ, ಈ ಸಂಸ್ಥೆಯ ಮೇಲೆ ವಿದೇಶಿಗರಿಗೆ ಬಹಳ ಪ್ರೀತಿ. ಕಾರಣ ಭಾರತದಲ್ಲಿ ಬಾಹ್ಯಾಕಾಶ ಉಡಾವಣೆಯ ವೆಚ್ಚ ಕಡಿಮೆಯಾಗಿರುತ್ತದೆ. ನಮ್ಮ ದೇಶದಲ್ಲಿ ಉಪಗ್ರಹವನ್ನು ಉಡಾವಾಣೆ ಮಾಡಿ, ಹಣ ಉಳಿಸುವ ಯೋಜನೆ ವಿದೇಶಿಯರದ್ದು. ಅಮೆರಿಕ, ಚೀನಾ, ಜಪಾನ್ ಹಾಗೂ ಯೂರೋಪ್‌ಗಳಿಗೆ ಹೋಲಿಸಿದರೆ, ಪ್ರತಿಷತ ೬೬ ರಷ್ಟು ಕಡಿಮೆ ದರದಲ್ಲಿ ಇಸ್ರೋ ಅಂತರಿಕ್ಷಕದಲ್ಲಿ ಉಡಾವಾಣೆ ಕಾರ್ಯ ಮಾಡುತ್ತದೆ. ಒಂದು ಅಂದಾಜಿನ ಪ್ರಕಾರ ಭಾರತ ಪಿಎಸ್‌ಎಲ್‌ವಿ ೧೦೦ ಕೋಟಿ ವೆಚ್ಚ ಮಾಡಲುಗುತ್ತದೆ. ರಷ್ಯಾ ೪೫೫, ಅಮೆರಿಕ ೩೮೧, ಜಪಾನ್ ೬೬೯೨, ಚೀನಾ ೬೬೯೨, ಯೂರೋಪ್ ೬೬೯೨ ಕೋಟಿ ಹಣವನ್ನು ಹೂಡಿಕೆ ಮಾಡುತ್ತವೆ.
 
ಉಪಗ್ರಹ ಉಡಾವಣೆ ಹೇಗೆ? 
ಒಂದು ಉಪಗ್ರಹವನ್ನು ಉಡಾವಣೆ ಮಾಡುವುದೇ ಕಷ್ಟದ ಕೆಲಸ. ದಾಖಲೆಯ ಪ್ರಮಾಣದ ಉಡಾವಣೆಗೆ ಇಸ್ರೋ ಸಿಬ್ಬಂದಿ ಹಗಲಿರುಳು ಶ್ರಮಿಸಿದ್ದಾರೆ. ಉಪಗ್ರಹಗಳು ತಮ್ಮ ಕಕ್ಷೆಗೆ (orbital)ಅನುಸಾರ ಬೇರ್ಪಟ್ಟು ತಮ್ಮ ಕಾರ್ಯವನ್ನು ಮಾಡುತ್ತವೆ. ಈ ಸಮಯದಲ್ಲಿ ಒಂದು ಉಪಗ್ರಹ ಹಾಗೂ ಮತ್ತೊಂದು ಘರ್ಷಣೆ ಆಗದ ರೀತಿ ನೋಡಿಕೊಳ್ಳುವ ಜವಬ್ದಾರಿ ಇರುತ್ತದೆ. ಒಂದು ಕಕ್ಷೆಯಿಂದ ಇನ್ನೊಂದು ಕಕ್ಷೆಗೆ ಸೇರಿಸ ಬೇಕಾದ ಸಮಯವನ್ನು ಲೆಕ್ಕಾ ಹಾಕಿ ಉಡಾವಣೆ ಮಾಡಲಾಗುತ್ತದೆ. ಇವುಗಳ ಉಡಾವಣೆಯಲ್ಲಿ ಕೂದಲೆಳೆಯಷ್ಟು ವ್ಯತ್ಯಾಸವಾದರು ನಷ್ಟ ಖಚಿತ. ಉಪಗ್ರಹಗಳು ತಮ್ಮ ತಮ್ಮ ಕಕ್ಷೆಯನ್ನು ಭಿನ್ನ ಭಿನ್ನ ದಿಕ್ಕುಗಳಲ್ಲಿ ಸೇರುವಂತೆ ವಿನ್ಯಾಸ ಮಾಡಲಾಗಿರುತ್ತದೆ.
ದಾಖಲೆಗೆ ಶುಭಾಶಯಗಳ ಸುರಿಮಳೆ:
ದಾಖಲೆ ಪ್ರಮಾಣ ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡಿದ ಇಸ್ರೋಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.
ಅಲ್ಲದೆ ದೇಶ ಹಾಗೂ ವಿದೇಶಿ ಗಣ್ಯರು ಸಹ ಇಸ್ರೋ ಶ್ಲಾಘನೆಯನ್ನು ಕೊಂಡಾಡಿದ್ದಾರೆ.