ಇಸ್ರೋದಿಂದ ಮತ್ತೊಂದು ಇತಿಹಾಸ ನಿರ್ಮಾಣ. ಜಿಸ್ಯಾಟ್‌- 9 ಉಪಗ್ರಹ ಯಶಸ್ವಿ ಉಡಾವಣೆ

0
421

ಶ್ರೀಹರಿಕೋಟಾ: ಇಸ್ರೋ ಅಭಿವೃದ್ಧಿಪಡಿಸಿರುವ ಜಿಸ್ಯಾಟ್‌- 9 ಉಪಗ್ರಹವನ್ನು  ಆಂಧ್ರಪ್ರದೇಶದ  ಶ್ರೀಹರಿಕೋಟಾದಿಂದ ಇಂದು ಯಶಸ್ವಿಯಾಗಿ ಉಡಯಿಸಲಾಯಿತು. ಸಾರ್ಕ್ ದೇಶಗಳ ನಡುವೆ ಸಂಪರ್ಕ ವೃದ್ಧಿಸಲು ಭೂಸ್ಥಿರ ಸಂಪರ್ಕ ಉಪಗ್ರಹವನ್ನು ಇಸ್ರೋ ಅಭಿವೃದ್ಧಿ ಪಡಿಸಿದ್ದು,  ಸಾರ್ಕ್ ರಾಷ್ಟ್ರಗಳಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಉಡುಗೊರೆಯಾಗಿದೆ.

 

ಸುಮಾರು 450 ಕೋಟಿ ರು. ವೆಚ್ಚ. ಸುಮಾರು 2, 230 ಕೆ.ಜಿ. ತೂಕ, 12 ವರ್ಷಗಳ ಜೀವಿತಾವಧಿಯಿರುವ ಈ ಉಪಗ್ರಹ ಯೋಜನೆಯಿಂದ ಸಾರ್ಕ್ ದೇಶಗಳಿಗೆ, ದೂರಸಂಪರ್ಕ, ಡಿಟಿಎಚ್‌, ಟೆಲಿ ಶಿಕ್ಷಣ, ಟೆಲಿಮೆಡಿಸಿನ್‌, ವಿಪತ್ತು ನಿರ್ವಹಣಾ ನೆರವು ಲಭ್ಯವಾಗಲಿದೆ.

 

ಪ್ರಧಾನಿ ಮೋದಿ ಮೇರೆಗೆ ಇಸ್ರೋ ಸಂಸ್ಥೆ ಸಾರ್ಕ್ ರಾಷ್ಟ್ರಗಳಿಗಾಗಿ ಉಪಗ್ರಹ ಅಭಿವೃದ್ಧಿಪಡಿಸಿದೆ. ಈ ಯೋಜನೆಗೆ 8  ಸಾರ್ಕ್ ರಾಷ್ಟ್ರಗಳ ಒಪ್ಪಿಗೆಯಿದೆ, ಆದರೆ ಪಾಕಿಸ್ತಾನ ಯೋಜನೆಯಿಂದ ಹೊರ ನಡೆದಿತ್ತು.

 

ಭೂಕಂಪ,  ಚಂಡಮಾರುತ, ಪ್ರವಾಹ ಹಾಗೂ ಸುನಾಮಿ ಉಂಟಾದಾಗ ಅದನ್ನು ಎದುರಿಸುವ ಸಂಬಂಧ ನೇಪಾಳ, ಭೂತಾನ್‌, ಬಾಂಗ್ಲಾದೇಶ ಆಫ್ಘಾನಿಸ್ತಾನ, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಭಾರತ ಸೇರಿ ಏಳೂ ರಾಷ್ಟ್ರಗಳು ಪರಸ್ಪರ  ಚರ್ಚಿಸಿಕೊಳ್ಳಲು ಸುರಕ್ಷಿತ ‘ಹಾಟ್‌ ಲೈನ್‌’ವೊಂದನ್ನು ಈ ಉಪಗ್ರಹದಿಂದಾಗಿ ತೆರೆಯಬಹುದಾಗಿದೆ.

 

ಸಾರ್ಕ್ ದೇಶಗಳ ಪೈಕಿ ಭಾರತ ಹೊರತುಪಡಿಸಿ ಕೇವಲ 3 ರಾಷ್ಟ್ರಗಳು ಮಾತ್ರವೇ ಉಪಗ್ರಹ ಹೊಂದಿವೆ. ಚೀನಾ ನೆರವಿನಿಂದ ಪಾಕಿಸ್ತಾನ, ಶ್ರೀಲಂಕಾ ಈ ವ್ಯವಸ್ಥೆ ಹೊಂದಿದ್ದರೆ, ಆಫ್ಘಾನಿಸ್ತಾನ ಕೂಡ ಉಪಗ್ರಹ ಹೊಂದಿದೆ.  ಬಾಂಗ್ಲಾದೇಶ ಇದೇ ವರ್ಷದಲ್ಲಿ ಉಪಗ್ರಹ ವ್ಯವಸ್ಥೆ ಹೊಂದಲು ಉದ್ದೇಶಿಸಿದೆ.