ಇಸ್ರೊನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿಲಾಗಿದೆ, ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿ.

0
481

ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ : 20

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್‌ 08, 2018

ವೆಬ್‌ ವಿಳಾಸ:www.shar.gov.in

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಉಡ್ಡಯನ ನೆಲೆ, ಪ್ರಪಲೆಂಟ್‌ ಉತ್ಪಾದನೆ ಕೇಂದ್ರವಾಗಿರುವ ಆಂಧ್ರಪ್ರದೇಶದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದ ಎಸ್‌ಎಚ್‌ಎಆರ್‌ (ಎಸ್‌ಡಿಎಸ್‌ಸಿ ಎಸ್‌ಎಚ್‌ಎಆರ್‌)ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಶ್ರೀಹರಿಕೋಟಾದಲ್ಲಿರುವ ಎಸ್‌ಡಿಎಸ್‌ಸಿ ಎಸ್‌ಎಚ್‌ಎಆರ್‌ ಎನ್ನುವುದು ಇಸ್ರೋ ಉದ್ಯೋಗಿಗಳಿಗೆ ಮತ್ತು ಅವಲಂಬಿತರಿಗೆ ಚಿಕಿತ್ಸೆ ನೀಡಲು ಇರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿದೆ.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಮೆಡಿಕಲ್‌ ಆಫೀಸರ್‌ ‘ಎಸ್‌ಡಿ’ (ಫಿಸಿಷಿಯನ್‌)-೧: ಸಂಬಂಧಪಟ್ಟ ವಿಷಯದಲ್ಲಿ ಎಂಬಿಬಿಎಸ್‌+ ಎಂಡಿ/ಎಂಎಸ್‌/ಡಿಎನ್‌ಬಿ ಪದವಿ ಪಡೆದಿರಬೇಕು.

ಮೆಡಿಕಲ್‌ ಆಫೀಸರ್‌ ಎಸ್‌ಡಿ(ಡೆರ್ಮಟೊಲಜಿ) ಮತ್ತು ಮೆಡಿಕಲ್‌ ಆಫೀಸರ್‌ ಎಸ್‌ಸಿ (ಡೆರ್ಮಟೊಲಜಿ)-೧: ಡಿಕಲ್‌ ಆಫೀಸರ್‌ ಎಸ್‌ಡಿ ಹುದ್ದೆಗಳಿಗೆ ಸಂಬಂಧಪಟ್ಟ ವಿಷಯದಲ್ಲಿ ಎಂಬಿಬಿಎಸ್‌+ ಎಂಡಿ/ಎಂಎಸ್‌/ಡಿಎನ್‌ಬಿ ಮತ್ತು ಮೆಡಿಕಲ್‌ ಆಫೀಸರ್‌ ಎಸ್‌ಸಿ ಹುದ್ದೆಗಳಿಗೆ ಎಂಬಿಬಿಎಸ್‌+ ಸಂಬಂಧಪಟ್ಟ ವಿಷಯಗಳಲ್ಲಿ ಡಿಪ್ಲೊಮಾ ಪಡೆದಿರಬೇಕು.

ಸಬ್‌ ಆಫೀಸರ್‌-೧: ಎನ್‌ಎಫ್‌ಎಸ್‌ಸಿ ಸಬ್‌ ಆಫೀಸರ್ಸ್‌ ಸರ್ಟಿಫಿಕೇಟ್‌ ಪಡೆದಿರಬೇಕು

ಡ್ರೈವರ್‌ ಕಂ ಆಪರೇಟರ್‌ ‘ಎ’-೩ ಮತ್ತು ಫೈರ್‌ಮೆನ್‌ ‘ಎ’-1: ಫೈರ್‌ಮನ್‌/ಡ್ರೈವರ್‌ ಕಂ ಆಪರೇಟರ್‌ ಆಗಿ 6 ವರ್ಷದ ಕೆಲಸದ ಅನುಭವ ಹೊಂದಿರಬೇಕು ಅಥವಾ ಸಬ್‌ ಆಫೀಸರ್‌ ಸರ್ಟಿಫಿಕೇಟ್‌ ಜೊತೆಗೆ ಫಿಸಿಕ್ಸ್‌, ಕೆಮಿಸ್ಟ್ರಿ ಮತ್ತು ಗಣಿತದಲ್ಲಿ ಬಿಎಸ್ಸಿ ಓದಿರಬೇಕು. ಡ್ರೈವರ್‌ ಕಂ ಆಪರೇಟರ್‌ ‘ಎ’ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಬಯಸಲಾಗಿದೆ. ಹೆವಿ ವೆಹಿಕಲ್‌ ಡ್ರೈವಿಂಗ್‌ ಲೈಸನ್ಸ್‌ ಪಡೆದಿರಬೇಕು ಮತ್ತು 3 ವರ್ಷದ ಚಾಲನಾ ಅನುಭವ ಹೊಂದಿರಬೇಕು. ಫೈರ್‌ಮೆನ್‌ ಎ ಹುದ್ದೆಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಬಯಸಲಾಗಿದೆ.

ಪ್ರೈಮರಿ ಟೀಚರ್‌-೦೬: ಪ್ರೈಮರಿ ಟೀಚರ್‌ ಹುದ್ದೆಗೆ ಸೀನಿಯರ್‌ ಸೆಕೆಂಡರಿ ಸ್ಕೂಲ್‌ ಅಥವಾ ಇಂಟರ್‌ಮೀಡಿಯೇಟ್‌ ಸರ್ಟಿಫಿಕೇಟ್ ಜೊತೆಗೆ ಸಿಬಿಎಸ್‌ಸಿ ನಡೆಸುವ ಸೆಂಟ್ರಲ್‌ ಟೀಚರ್‌ ಎಲಿಜಿಬಿಲಿಟಿ ಟೆಸ್ಟ್‌ (ಸಿಟಿಇಟಿ) ಪಾಸಾಗಿರಬೇಕು. ಹಿಂದಿ ಮತ್ತು ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧನೆ ಮಾಡುವ ಸಾಮರ್ಥ್ಯ‌ ಇರಬೇಕು.

ಟ್ರೈನರಿ ಗ್ರಾಜುಯೇಟ್‌ ಟೀಚರ್‌- ಸಾಮಾಜಿಕ ಅಧ್ಯಯನ-1, ಗಣಿತ-1, ವಿಜ್ಞಾನ-1, ಹಿಂದಿ-1, ಇಂಗ್ಲಿಷ್‌-1, ಸಂಸ್ಕೃತ-೧: ಟ್ರೈನ್ಡ್‌ ಗ್ರಾಜುಯೇಟ್‌ ಟೀಚರ್‌ ಹುದ್ದೆಗೆ ಪದವಿ ಅಥವಾ ಎನ್‌ಸಿಇಆರ್‌ಟಿಯ ರೀಜನಲ್‌ ಕಾಲೇಜ್‌ ಆಫ್‌ ಎಜುಕೇಷನ್‌ನಲ್ಲಿ ಸಂಬಂಧಪಟ್ಟ ವಿಷಯದಲ್ಲಿ 4 ವರ್ಷದ ಇಂಟಿಗ್ರೇಟೆಡ್‌ ಪದವಿ ಪಡೆದಿರಬೇಕು. ಸಿಬಿಎಸ್‌ಇ ನಡೆಸುವ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟಿಇಟಿ) ಉತ್ತೀರ್ಣರಾಗಿರಬೇಕು. ಬೋಧಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕಂಪ್ಯೂಟರ್‌ ಜ್ಞಾನ ಇರುವುದೂ ಕಡ್ಡಾಯ.

ಗರಿಷ್ಠ ವಯೋಮಿತಿ:

ಸಬ್‌ ಆಫೀಸರ್‌ಗೆ 35 ವರ್ಷ, ಡ್ರೈವರ್‌-30 ವರ್ಷ, ಫೈರ್‌ಮೆನ್‌ಗೆ-25 ವರ್ಷ, ಮಡಿಕಲ್‌ ಆಫೀಸರ್‌ ಎಸ್‌ಸಿಗೆ 35 ವರ್ಷ, ಪ್ರೈಮರಿ ಟೀಚರ್‌ಗೆ 30 ವರ್ಷ ಮತ್ತು ಟಿಜಿಟಿಗೆ ಗರಿಷ್ಠ 35 ವರ್ಷ.