ಇಸ್ರೋ- ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ..

0
719
ISRO_Job_Recuitment

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಬೆಂಗಳೂರು ಮತ್ತು ಹಾಸನದ ಕೇಂದ್ರಗಳಲ್ಲಿ ಖಾಲಿ ಇರುವ ಟೈಪಿಸ್ಟ್ ಮತ್ತು ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-07-2017

ಹುದ್ದೆ ವಿವರ:
4 ಹಿಂದಿ ಟೈಪಿಸ್ಟ್ ಹಾಗೂ ಒಂದು ಟೆಕ್ನಿಷಿಯನ್ (ಎಲೆಕ್ಟ್ರಿಕಲ್) ಹುದ್ದೆಗಳು (ಬೆಂಗಳೂರು ಮಾತ್ರ ಹಾಸನ ಕೇಂದ್ರದಲ್ಲಿ)

ವಿದ್ಯಾರ್ಹತೆ:

  • ಹಿಂದಿ ಟೈಪಿಸ್ಟ್ ಹುದ್ದೆ: ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಫಸ್ಟ್ ಕ್ಲಾಸ್ ನೊಂದಿಗೆ ಉತ್ತೀರ್ಣರಾಗಿರಬೇಕು. ಮತ್ತು ವೇಗವಾಗಿ ಕಂಪ್ಯೂಟರ್ ನಲ್ಲಿ ಹಿಂದಿ ಟೈಪಿಂಗ್ ಮಾಡಲು ಬರಬೇಕು.
  • ಟೆಕ್ನಿಷಿಯನ್-01 ಹುದ್ದೆ (ಬೆಂಗಳೂರಿನಲ್ಲಿ)
    ವಿದ್ಯಾರ್ಹತೆ: ಎಲೆಕ್ಟ್ರಿಕಲ್ ವಿಭಾಗದಲ್ಲಿ SSLC/SSC pass and ITI/ NTC/NAC ಉತ್ತೀರ್ಣರಾಗಿರಬೇಕು.

ವಯೋಮಿತಿ:
21/07/2017ರ ಅನ್ವಯಕ್ಕೆ ಹಿಂದಿ ಟೈಪಿಸ್ಟ್ ಹುದ್ದೆಗೆ 26 ವರ್ಷ. ಇನ್ನು ಟೆಕ್ನಿಷಿಯನ್ ಹುದ್ದೆಗೆ 35 ವರ್ಷ ನಿಗದಿ ಪಡಿಸಲಾಗಿದೆ.

ಅರ್ಜಿ ಸಲ್ಲಿಕೆ:
ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಭಾವಚಿತ್ರದೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಕಚೇರಿ ವಿಳಾಸಕ್ಕೆ ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ ಕಳುಹಿಸತಕ್ಕದ್ದು. ಅರ್ಜಿಯಲ್ಲಿನ ಎಲ್ಲಾ ದಾಖಲೆಗಳಿಗೂ ಅಭ್ಯರ್ಥಿಯು ಸ್ವಯಂ ದೃಢೀಕರಿಸಿ, ಅರ್ಜಿಯ ಲಕೋಟೆ ಮೇಲೆ ಯಾವ ಹುದ್ದೆಗೆ ಎಂದು ಸ್ಪಷ್ಟವಾಗಿ ದಪ್ಪಾಕ್ಷರದಲ್ಲಿ ನಮೂದಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ
AdministrativeOfficer (Recruitment),
ISRO Headquarters,
Antariksh Bhavan,
New BEL Road, Bangalore- 560094

ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ ಹಾಗೂ ಕೌಶಲ್ಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.