ಇಸ್ರೋ ಬಾಹ್ಯಾಕಾಶ ಭೂವೀಕ್ಷಕ ನೌಕೆಯ ಪ್ರಕಾರ ಇನ್ನೆರಡು ದಿನಗಳಲ್ಲಿ ಇನ್ನೂ ಹೆಚ್ಚು ಮಳೆಯಾಗಲಿದೆಯಂತೆ!!

0
578

ಇಸ್ರೋ ಸಹಾಯದಿಂದ ಹವಾಮಾನ ಇಲಾಖೆ ಸೂಚನೆಯಂತೆ ಕೊಡಗು, ದಕ್ಷಿಣಭಾರತದಲ್ಲಿ ಹಿಂದೆಂದೂ ಕಂಡರಿಯದ ಮಳೆಯ ಆನಾಹುತ ಪ್ರಾಣಹಾನಿಯಿಂದ ನುಂಗಲಾರದ ನೋವು, ನೀಗಿಸಲಾಗದ ನಿರಾಶೆ ಸಹಿಸಲಾಗದಷ್ಟು ಸಂಕಷ್ಟ ಹರಿದುಬಂದು ಈಗ ಉಳಿದಿರುವುದು ಬರಿ ಕಣ್ಣಿರು ಮಾತ್ರ. ಎರಡು ದಿನ ಸ್ವಲ್ಪ ಕಡಿಮೆಕಂಡಿದ್ದ ಈ ಮಳೆ ಮತ್ತೆ ಕೇರಳ ಹಾಗು ಕೊಡಗನ್ನು ಸಂಪೂರ್ಣವಾಗಿ ಮುಳಿಗಿಸಲಿದೆ ಎಂದು ಹವಾಮಾನ ಇಲಾಖೆ ವಾಣಿಯಂತೆ ಈ ಕಡಲತೀರದ ಜನರಿಗೆ ಮತ್ತೆ ಕಂಠಕ ಶುರುಮಾಡಿದೆ. ಈ ಎಲ್ಲಾ ಅನಾಹುತದಿಂದ ತತ್ತರಿಸಿದ ಜನರ ರಕ್ಷಣೆಗೆ ಸಾವನ್ನೇ ಎದುರುಹಾಕಿ ಮುದ್ದಾಗಿದ ರಕ್ಷಣೆಪಡೆಗಳಾದ ನೌಕಾಸೇನೆ, ಏರ್ಪೋರ್ಸ್, ನೇವಿ, NDRF, ಕೋಸ್ಟ್ ಗಾರ್ಡ್ ಹೀಗೆ ದೇಶಕ್ಕೆ ದೇಶವೇ ಪ್ರವಾಹದ ರಕ್ಷಣೆಗೆ ನಿಂತಿದೆ, ಆದ್ರು ದಕ್ಷಿಣ ಭಾರತವೇ ಕಂಡು ಅರಿಯದ ಜಲ ಪ್ರಳಯವನ್ನು ಅರಿಗಿಸಲು ಸಾಧ್ಯವಾಗುತ್ತಿಲ್ಲ ಇದನ್ನೆಲ್ಲ ಕಂಡ ಇಸ್ರೋ ಕೇರಳವನ್ನು ಕಾಪಾಡಲು ತಯಾರಾಗಿದೆ ಐದು ಉಪಗ್ರಹಗಳ ಮೂಲಕ ಇಸ್ರೋ ಕೇರಳದ ನೆರೆವಿಗೆ ಮುಂದಾಗಿದೆ.

ಭಾರತೀಯ ಭಾಹ್ಯಾಕಾಶ ಸಂಸ್ಥೆ ಇಸ್ರೋದ ಐದು ಭೂ ವೀಕ್ಷಕ ಉಪಗ್ರಹಗಳು ರಕ್ಷಣೆಗೆ ಧಾವಿಸಿವೆ. ಇವುಗಳು ಕೇರಳದ ಸುತ್ತಮುತ್ತಲಿನ ಚಿತ್ರಗಳನ್ನು ಸೆರೆ ಹಿಡಿಯುತ್ತಿವೆ ಇದರಿಂದ ಯಾವ ಪ್ರದೆಶದಲ್ಲಿ ಪ್ರಹಾವವು ಹೆಚ್ಚಾಗುತ್ತಿದೆ ಎಂಬುದನ್ನು ಮುಂಗಡವಾಗಿ ತಿಳಿಸುತ್ತವೆ. ಈ ಮಾಹಿತಿಯಿಂದ ಜನರನ್ನು ಶೀಘ್ರವಾಗಿ ಸ್ಥಳಾಂತರ ಮಾಡಲು ಸಹಾಯವಾಗುತ್ತೆ. ಅಷ್ಟೇ ಅಲ್ಲದೆ ಈ ಉಪಗ್ರಹಗಳು ವಾತಾವರಣದ ಮೇಲೆ ಹದ್ದಿನ ಕಣ್ಣು ಇಟ್ತಿರುತ್ತವೆ. ಅರೆಬ್ಬಿ ಸಮುದ್ರ ಮಾರುತಗಳ ಆಟದ ಬಗ್ಗೆ ನಿಖರವಾಗಿ ಮಾಹಿತಿ ನೀಡುವ ಮೂಲಕ ಮಾರುತಗಳ ವೇಗ, ಚಲಿಸುವ ದಿಕ್ಕು, ಮಾರುತಗಳು ಬೀಸುವ ಸಮಯ ಹೀಗೆ ಮಳೆಗೆ ಕಾರಣವಾಗೋ ಅಂಶಗಳ ಮೇಲೆ ಗುರೀಟ್ಟುಕೊಂಡು ಮಳೆಯ ಬಗ್ಗೆ ಹೆಚ್ಚಿನ ಮುನ್ಸೂಚನೆ ನೀಡುತ್ತೆ.

ಇಂದಿನ ಸ್ಥಿತಿ ನೋಡಿದರೆ ಜಲಪ್ರಳಯ ಹೆಚ್ಚು ಹೆಚ್ಚು ಹರಿಯಿತ್ತಿದೆ ಇದರ ಜತೆಗೆ ಅಲ್ಲಿನ ಜನರ ರಕ್ತ ಕಣ್ಣಿರು, ಪ್ರಾಣವು ಒಟ್ಟಾಗಿ ಹರಿಯುತ್ತಿದೆ ಮನೆ ಮರ ಬೆಟ್ಟಗಳು ಧರೆಗುರುಳಿವೆ ನಿಂತ ನೆಲ ಕುಸಿದು ಬೀಳುತ್ತಿವೆ ನದಿಗಳು ಉಕ್ಕಿ ಉಕ್ಕಿ ಹರಿಯುತ್ತಿವೆ ರಸ್ತೆಗಳು ಕೊಚ್ಚಿಕೊಂಡು ಹೋಗುತ್ತಿವೆ. ಏಕಕಾಲಕ್ಕೆ ಉಕ್ಕಿದ ಜಲಾಶಯಗಳು ಮತ್ತೆ ಜೋರಾಗಿ ಕೊಡಗು ಹಾಗು ಕೇರಳವನ್ನು ನಡುಗಿಸುತ್ತಿವೆ ಈ ಅಪಾಯದಲ್ಲಿರುವ ಜನರನ್ನು ರಕ್ಷಿಸಲು ಬಂದಿರುವ  ರಕ್ಷಣಾ ಪಡೆಗಳ ಬೇವರಿನ ಹನಿ ಎಷ್ಟೇ ಹರಿಸಿದರು ಯಾವುದಕ್ಕೂ ಹೆದರದ ಪ್ರಕೃತಿಯ ಕೋಪ ತನ್ನ ನೆಸೆಯಲ್ಲಿ ಜನರ ಮೇಲೆ ಚಾಟಿ ಬಿಸುತಲಿದೆ.

ಹವಾಮಾನ ಇಲಾಖೆಯ ಪ್ರಕಾರ ಇನ್ನು ಎರಡು ಮೂರೂ ದಿನ ಕೇರಳ ಕೊಡಗಿನಲ್ಲಿ ಭಾರಿ ಮಳೆ ಸುರಿಯುವ ಸೂಚನೆಯನ್ನು ತಿಳಿಸಿದೆ. ಇದರಿಂದ ಕೊಡಗಿನಲ್ಲಿ ಮತ್ತೆ ಭಯಂಕರವಾದ ಭೀತಿ ಹುಟ್ಟಿದೆ ಈಗಾಗಲೇ ಜಮೀನು ಮನೆ ಲಾಭ ತರುವ ಪ್ರಾಣಿಗಳು ಎಲ್ಲಾ ಮುಳಿಗಿವೆ ಈಗ ಉಳಿದಿದ್ದು ಬರಿ ಕಣ್ಣೀರು ಮಾತ್ರ. ಕೆಲವೊಂದು ಹಳ್ಳಿಗಳಲ್ಲಿ ಇನ್ನೂ ಜನರು ಮಳೆಯಲ್ಲಿ ಸಿಲುಕಿಕೊಂಡಿದ್ದಾರೆ ಅವರನ್ನು ಹೊರ ತರುವುದು ಒಂದು ಸಾಹಸವೇ ಆಗಿದೆ, ಅದರಲ್ಲಿ ಇನ್ನೂ ಮೂರುದಿನ ಮಳೆ ಹೀಗೆ ಮುಂದುವರಿದರೆ ಅಲ್ಲಿನ ಜನರ ಗತಿ ಏನು ಎಂಬುದು ಎಲ್ಲರ ಹೃದಯ ಬಡಿತವಾಗಿದೆ.