ವಿಕ್ರಮ್ ಲ್ಯಾಂಡರ್ ಪತ್ತೆ; ಸಹಾಯಕ್ಕೆ ಬಂದ ಮಿತ್ರ ಇಸ್ರೇಲ್ ದೇಶ, ಯಶಸ್ವಿಯಾಗುತ್ತ ಚಂದ್ರಯಾನ-2??

0
375

ಪ್ರಪಂಚದ ತುಂಬೆಲ್ಲ ಕುತೂಹಲಕ್ಕೆ ಮೂಡಿಸಿದ ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಪತ್ತೆಯಾಗಿದ್ದು, ಕಳೆದುಕೊಂಡ ಭರವಸೆ ಮತ್ತೆ ಚಿಗುರೋದೆಡಿದೆ. ಲ್ಯಾಂಡರ್​ ವಿಕ್ರಂ ಲ್ಯಾಂಡರ್​ ಪತ್ತೆಯಾಗಿರುವ ಸುದ್ದಿಯನ್ನು ಇಸ್ರೋದ ಅಧ್ಯಕ್ಷ ಕೆ. ಶಿವನ್​ ಸ್ಪಷ್ಟಪಡಿಸಿದ್ದಾರೆ. ಲ್ಯಾಂಡರ್​ ಚಂದ್ರನ ಅಂಗಳದಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಕುರಿತಂತೆ ಆರ್ಬಿಟರ್ ಒಂದು ಫೋಟೋವನ್ನು ಸೆರೆ ಹಿಡಿದು ಕಳುಹಿಸಿದೆ. ವಿಕ್ರಮ ಸಂಪರ್ಕಕ್ಕೆ ಸಿಗುವ ಲಕ್ಷಣಗಳು ಕಂಡು ಬರುತ್ತಿದ್ದು, ಚಂದ್ರಯಾನ ಯಶ್ವಸ್ವಿಯಾಗುತ್ತಾ ಎನ್ನುವ ಕುತೂಹಲ ಮತ್ತೆ ಮನೆಮಾಡಿದೆ.

ವಿಕ್ರಮ್​ ಲ್ಯಾಂಡರ್ ಪತ್ತೆ?

ಹೌದು ವಿಕ್ರಮ್​ ಲ್ಯಾಂಡರ್​ನ ಸಂಪರ್ಕ ಕಡಿತಗೊಂಡಿರುವುದು ಗೊತ್ತೇ ಇದೆ. ಚಂದ್ರನ ಅಧ್ಯಯನ ಮಾಡುವ ಉದ್ದೇಶ ದಿಂದ ಕಳುಹಿಸಿದ್ದ ಚಂದ್ರಯಾನ 2- ಲ್ಯಾಂಡರ್​ ವಿಕ್ರಮ್​ ಕೊನೆಗೂ ಪತ್ತೆಯಾಗಿದೆ. ಸಂಪರ್ಕ ಕಡಿತಗೊಂಡ ವಿಕ್ರಮ್ ಲ್ಯಾಂಡರ್ ಸದ್ಯದ ಸ್ಥಿತಿಯೇನು? ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಪತ್ತೆಹಚ್ಚಿದ್ದು ಹೇಗೆ? ಲ್ಯಾಂಡರ್ ಮಾಸ್ಟರ್ ಕಂಟ್ರೋಲ್ ನ ಸಂಪರ್ಕ ಕಡಿದುಕೊಂಡಿದ್ದಕ್ಕೆ ಇಸ್ರೋ ಕ್ರಮ ಕೈಗೊಳ್ಳಲಿದ್ದು ಸೆಪ್ಟೆಂಬರ್ 7ರ ಮುಂಜಾನೆ ಚಂದ್ರನಿಂದ 2.1 ಕಿಲೋ ಮೀಟರ್ ದೂರ ಇರುವ ತನಕ ಮಾತ್ರ ಇಸ್ರೋನ ಮಾಸ್ಟರ್ ಕಂಟ್ರೋಲ್ ಸಂಪರ್ಕಕ್ಕೆ ಸಿಕ್ಕಿತ್ತು. ಆನಂತರ ಸಂಪರ್ಕ ಸಾಧ್ಯವಾಗಿಲ್ಲ. ವಿಕ್ರಮ್ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸಲು ಮುಂದಿನ 14 ದಿನಗಳ ಕಾಲ ಇಸ್ರೋ ತನ್ನ ಪ್ರಯತ್ನ ಮುಂದುವರೆಸಲಿದೆ ಎಂದು ಮೂಲಗಳು ತಿಳಿಸಿದೆ.

ಚಂದ್ರನ ಮೇಲೆ ಸುತ್ತುತ್ತಿರುವ ಆರ್ಬಿಟರ್ ನಲ್ಲಿರುವ ತಾಂತ್ರಿಕ ಉಪಕರಣ ಆರ್ಬಿಟರ್ ಹೈರೆಸಲ್ಯೂಶನ್ ಕ್ಯಾಮರಾ ಬಳಸಿ ಚಂದ್ರನ ಮೇಲ್ಮೈನಲ್ಲಿರುವ ವಿಕ್ರಮ್ ಲ್ಯಾಂಡರ್ ಇರುವ ಸ್ಥಳದ ಚಿತ್ರವನ್ನು ಭೂನಿಯಂತ್ರಣಕ್ಕೆ ಕೇಂದ್ರ ಕಳುಹಿಸಿದೆ ಎಂದು ಇಸ್ರೋ ಮೂಲಗಳು ಖಚಿತಪಡಿಸಿದೆ. ಒಎಚ್ಆರ್​​​ಸಿ ಎಂಬ ಪೇಲೋಡ್ ಬಳಸಿ ವಿಕ್ರಮ್ ಪತ್ತೆ ಮಾಡಲಾಗಿದೆ. ಈ ಕುರಿತಂತೆ ಆರ್ಬಿಟರ್ ಒಂದು ಫೋಟೋವನ್ನು ಸೆರೆ ಹಿಡಿದು ಕಳುಹಿಸಿದೆ. ವಿಕ್ರಮ್​ ಚಂದ್ರನ ಕಕ್ಷೆಯ ಸುತ್ತ ಸುತ್ತಿದ್ದು, ಅದರ ಜೊತೆ ಇನ್ನೂ ಸಂಪರ್ಕ ಸಾಧ್ಯವಾಗಿಲ್ಲ ಎಂದಿದ್ದಾರೆ.

ನೇರವಿಗೆ ಬಂದ ಇಸ್ರೇಲ್?

ಬಾಹ್ಯಾಕಾಶ ಸಂಸ್ಥೆ ಚಂದ್ರನ ಮೇಲೆ ಲ್ಯಾಂಡರ್ ಪತನ ಕುರಿತು ಪರಸ್ಪರ ಮಾಹಿತಿ ಹಂಚಿಕೊಳ್ಳಲು ಮತ್ತೊಮ್ಮೆ ಭಾರತದ ಸಹಾಯಕ್ಕೆ ಮಿತ್ರದೇಶ ಇಸ್ರೇಲ್ ಮುಂದಾಗಿವೆ. ಲ್ಯಾಂಡರ್ ಸಂಪರ್ಕ ಕಳೆದುಕೊಂಡ ಬಗ್ಗೆ ತನಿಖೆ ಪೂರ್ಣಗೊಳಿಸಿರುವ ಇಸ್ರೋದ ಅವಲೋಕನಾ ಸಮತಿ, ಲ್ಯಾಂಡರ್ ಮಾಸ್ಟರ್ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಳ್ಳಲು ಕಾರಣ ಏನು ಎಂಬುದರ ಕುರಿತು ಇಸ್ರೋ ಮುಖ್ಯಸ್ಥರು ಹಾಗೂ ಇಸ್ರೇಲ್ ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥರು ಪರಸ್ಪರ ಮಾಹಿತಿ ಹಂಚಿಕೊಳ್ಳಲಿದ್ದಾರೆ. ನಿನ್ನೆಯಷ್ಟೇ ವಿಕ್ರಮ್ ಪತ್ತೆ ಬಗ್ಗೆ ಇಸ್ರೋ ಮಾಹಿತಿ ನೀಡಿತ್ತು. ಈ ವರ್ಷದ ಏಪ್ರಿಲ್ 11 ರಂದು ಇಸ್ರೇಲಿನ ರೊಬೊಟಿಕ್ ಲೂನಾರ್ ಲ್ಯಾಂಡರ್ ಪತನ ಹೊಂದಿತ್ತು. ಚಂದ್ರನ ಅಂಗಳಕ್ಕೆ ಇಳಿಯುವ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಭಾರತ ಮತ್ತು ಇಸ್ರೇಲಿನ ಚಂದ್ರಯಾನಗಳಿಗೆ ಸಾಮ್ಯತೆ ಇರುವ ಕಾರಣ ಈಗ ಎರಡು ದೇಶಗಳು ಅಧ್ಯಯನ ನಡೆಸಲಿದೆ.

Also read: ನಿರಾಸೆ ಮೂಡಿಸಿದ ಚಂದ್ರಯಾನ-2; ಮೋದಿ ತಬ್ಬಿ ಕಣ್ಣೀರು ಹಾಕಿದ ಇಸ್ರೋ ಅಧ್ಯಕ್ಷ, ಬೆನ್ನು ತಟ್ಟಿ ಸ್ಫೂರ್ತಿತುಂಬಿದ ಮೋದಿ ಮಾತಿಗೆ ಇಡೀ ದೇಶವೇ ಭಾವುಕ.!