ಚಂದ್ರನ ಮೇಲೆ ರೋವರ್, 83 ಸ್ಯಾಟಲೈಟ್‌ಗಳನ್ನು ಒಮ್ಮೆಲೆ ರವಾನೆ: ಇಸ್ರೊ ಡಬಲ್ ಸಾಧನೆ

0
956

ಇಸ್ರೊ ಸಂಸ್ಥೆ ದೀಪಾವಳಿ ವೇಳೆಗೆ ಎರಡು ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಅದು ಮುಂದಿನ ವರ್ಷವೇ ಈಡೇರಿಸುವ ಗುರಿ ಹೊಂದಿದೆ. ಮೊದಲನೆಯದು ಒಂದೇ ರಾಕೆಟ್ ಮೂಲಕ ೮೩ ಸ್ಯಾಟಲೈಟ್‌ಗಳನ್ನು ರವಾನಿಸುವ ಮೂಲಕ ವಿಶ್ವದಾಖಲೆ ಬರೆಯುವುದು ಮತ್ತೊಂದು ಖಾಸಗಿ ಸಂಸ್ಥೆ ಮೊದಲ ಬಾರಿ ಒಪ್ಪಂದ ಮಾಡಿಕೊಂಡಿರುವ ಇಸ್ರೊ ಚಂದ್ರನ ಮೇಲೆ ರೋವರ್ ಕಳಹಿಸುವ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗುವುದು.
ಹೌದು, ಎಲ್ಲವೂ ಅಂದುಕೊಂಡಂತೆ ಆದರೆ 2017 ಕೊನೆಯಲ್ಲಿ ಇಸ್ರೊ ಈ ಸಾಧನೆಗಳ ಗುರಿ ಈಡೇರಿಸಿದ ಗರಿ ಮೂಡಿಸಿಕೊಳ್ಳಲಿದೆ.

83 ಸ್ಯಾಟಲೈಟ್

ಇಸ್ರೊ 3 ದೇಶೀಯ ಸ್ಯಾಟಲೈಟ್ ಸೇರಿದಂತೆ 83 ಸ್ಯಾಟಲೈಟ್‌ಗಳನ್ನು ಒಮ್ಮೆಲೆ ಕಕ್ಷೆಗೆ ರವಾನಿಸಲಿದೆ. ಈ ಮೂಲಕ ಇಷ್ಟು ಸಂಖ್ಯೆಯ ಸ್ಯಾಟಲೈಟ್ ಹೊತ್ತೊಯ್ದ ರಾಕೆಟ್ ಉಡಾಯಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.

ರೋವರ್ ರವಾನೆ

ಚಂದ್ರನ ಮೇಲೆ ರೋವರ್ ಇಳಿಸಿ ಅಲ್ಲಿ ಅಧ್ಯಯನ ನಡೆಸುವ ಮಹತ್ವಾಕಾಂಕ್ಷಿ ಯೋಜನೆಗೆ ಖಾಸಗಿ ಸಂಸ್ಥೆ ‘ಇಂದೂಸ್’ ಜೊತೆ ಇಸ್ರೊ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದ ಸುಮಾರು 20 ದಶಲಕ್ಷ ಡಾಲರ್ ಆಗಿದೆ. ಸುಮಾರು 320 ಟನ್ ಸಾಮರ್ಥ್ಯದ ಬೃಹತ್ ರಾಕೆಟ್ ಇದಕ್ಕಾಗಿ ವಿಶೇಷವಾಗಿ ಸಿದ್ಧಗೊಳ್ಳಲಿದೆ.
ಪಿಎಸ್‌ಎಲ್‌ವಿ ಇಂಜಿನ್ ಈ ಯೋಜನೆಗೆ ಬಳಸಲು ಮಾತುಕತೆ ನಡೆದಿದ್ದು, ಸುಮಾರು 30 ದೇಶಗಳ ಸ್ಪರ್ಧೆಯಲ್ಲಿ ಭಾರತಕ್ಕೆ ಈ ಯೋಜನೆ ಲಭಿಸಿದೆ. ಈ ಯೋಜನೆಗಾಗಿ ಸುಮಾರು 100 ವಿಜ್ಞಾನಿಗಳು ಶ್ರಮ ವಹಿಸಿದ್ದಾರೆ.