ತೆರಿಗೆ ಪವತಿಗೆ ರಾಜ್ಯ ಸರ್ಕಾರದ ಹೊಸ ಯೋಜನೆ

0
584

ಹೊಸ ತೆರಿಗೆ ವ್ಯವಸ್ಥೆ ಜಾರಿಗೊಂಡರೆ ಹಳೆ ವ್ಯವಸ್ಥೆಯ ಪ್ರಕಾರ ತೆರಿಗೆ ಪಾವತಿಸದೆ ಬಾಕಿ ಉಳಿಕೊಂಡವರಿಗೆ ವಿನಾಯಿತಿ ಅಥವಾ ಅವರ ತೆರಿಗೆ ಮನ್ನಾ ಆಗಿಬಿಡುತ್ತದೆ. ಹಾಗಾಗಿ ತೆರಿಗೆ ಬಾಕಿ ಯಾಕೆ ಪಾವತಿಸಬೇಕು ಎಂಬ ಭಾವನೆ ಸಲ್ಲದು. ಈಗಗಲೇ ಸರ್ಕಾರಗಳು ಬಾಕಿ ತೆರಿಗೆ ವಸೂಲಿಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ, ನಮ್ಮ ರಾಜ್ಯದ ಮಟ್ಟಿಗೆ ಹೇಳುವುದಾದರೆ, ‘ಕರಸಮಾಧನೆ’ ಎಂಬ ಯೋಜನೆಯನ್ನು ಸರ್ಕಾರ ಈಗಗಲೇ ಜಾರಿಗೊಳಿಸಿದೆ.

ಯೋಜನೆಯ ಉದ್ದೇಶ

ಸದ್ಯ ಚಾಲ್ತಿಯಲ್ಲಿರುವ ಕರ್ನಾಟಕ ವಾಣಿಜ್ಯ ತೆರಿಗೆ ಕಾಯ್ದೆ ಅಥಾವ ಕರ್ನಾಟಕ ಮೌಲ್ಯ ವರ್ಧಿತ ತೆರಿಗೆ ಕಾಯ್ದೆ ಪದ್ಧತಿಗಳಲ್ಲಿ ಕರವನ್ನು ಬಾಕಿ ಉಳಿಸಿಕೊಂಡಿರುವ ವ್ಯಾಪಾರಸ್ಥರು ಅಥವಾ ಮಾಲಿಕರಿಗೆ ಬಾಕಿ ತೆರಿಗೆ ಪಾವತಿಸುವುದಕ್ಕೆ ಅನುಕೂಲವಾಗುವಂತೆ ಕರ್ನಾಟಕ ಸರ್ಕಾರವು ‘ಕರಸಮಾಧನ 2017’ ಎಂಬ ಹೊಸ ಯೋಜನೆಯನ್ನು ಏ. 6ರಿಂದ ಅನ್ವಯವಾಗುವಂತೆ ಜಾರಿಗೊಳಿಸಿದೆ. ಮೇ 31ರಂದು ಇದು ಕೊನೆಗೊಳ್ಳಲಿದ್ದು, ವ್ಯಾಪರಸ್ಥರು, ಉದ್ಯಮಗಳ ಮಾಲೀಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಈ ಯೋಜನೆಯಡಿ, ವ್ಯಾಪಾರಸ್ಥರಿಗೆ ಅಥವಾ ಮಾಲೀಕರಿಗೆ ಕೆಲವು ರಿಯಾತಿಗಳನ್ನು ನೀಡುವ ಮೂಲಕ ಸರ್ಕಾರವು ಬಾಕಿ ಇರುವ ತೆರಿಗೆಯನ್ನು ಸಂಗ್ರಹಿಸುವ ಉದ್ದೇಶ ಹೊಂದಿದೆ. ಅಲ್ಲದೇ, ತನ್ಮೂಲಕ ಜಿಎಸ್ ಟಿಯು ಮುಖ್ಯವಾಹಿಗೆ ಸೇರಿಕೊಳ್ಳಲು ವ್ಯಾಪಾರಸ್ಥರು ಅಥವಾ ಮಾಲೀಕರಿಗೆ ಅವಕಾಶ ನೀಡಲಾಗಿದೆ.

ವಿನಾಯಿ ಸೂತ್ರ: ಕರಸಮಾಧಾನ 2017 ಯೋಜನೆಯ ಪ್ರಕಾರ. ತೆರಿಗೆ ಮೇಲಿನ ದಂಡ ಹಾಗೂ ಬಡ್ಡಿಯಲ್ಲಿ ಕೆಲವು ವಿನಾಯಿತಿಗಳನ್ನು ನೀಡಲು ಸೂತ್ರಗಳನ್ನು ಘೋಷಿಸಲಾಗಿದೆ.

*31-05-2017 ಅಥವಾ ಅದಕ್ಕೂ ಮೊದಲು ಎಲ್ಲ ತೆರಿಗೆ ಬಾಕಿಯನ್ನು ಹಾಗೂ ಶೇ. 10ರಷ್ಟು ದಂಡ ಮತ್ತು ಬಡ್ಡಿಯ ಬಾಕಿಯೊಂದಿಗೆ ಪಾವತಿಸಿದಲ್ಲಿ ಉಳಿದ ಶೇ. 90ರಷ್ಟು ದಂಡ ಮತ್ತು ಬಡ್ಡಿಯ ಬಾಕಿಯನ್ನು ಮನ್ನಾ ಮಾಡಲಾಗುವುದು.

*ಈ ಯೋಜನೆಯಲ್ಲಿ ಎಲ್ಲ ವರ್ಷಗಳ ತೆರಿಗೆ ಅವಧಿಗಳ ಕರನಿರ್ಧರಣೆ/ಮರು ಕರನಿರ್ಧರಣೆಗೆ ಸಂಬಂಧಿಸಿದ ತೆರಿಗೆ ಬಾಕಿ ಹೊಂದಿಲ್ಲದಿದ್ದರೂ, ಬಡ್ಡಿ ಮತ್ತು ದಂಡ ಮಾತ್ರ ಬಾಕಿಯಿರುವ ಕರದಾತರಿಗೂ ಅನ್ವಯಯಿಸುತ್ತದ.

*ಈ ಯೋಜನೆಯು 31-03-2005ಕ್ಕೆ ಅಂತ್ಯಗೊಂಡ ಅದುವರೆಗಿನ ಎಲ್ಲಾ ವರ್ಷಗಳಿಗೆ ಕರ್ನಾಟಕ ಮಾರಾಟ ತೆರಿಗೆ ಕಾಯ್ದೆ ಹಾಗೂ ಕೇಂದ್ರ ಮಾರಾಟ ತೆರಿಗೆ ಕಾಯ್ದೆ ಅಡಿಯಲ್ಲಿನ ಕರನಿರ್ಧರಣೆ. ಮರು ಕರಧರಣಿ ಹಾಗೂ 31-03-2016ಕ್ಕೆ ಕೊನೆಗೊಳ್ಳುವ ಎಲ್ಲಾ ವಸ್ತುಗಳಿಗೆ ಕರ್ನಾಟಕ ಮೌಲ್ಯ ವರ್ಧಿತ ತೆರಿಗೆ ಕಾಯ್ದೆ, ಕರ್ನಾಟಕ ಪ್ರವೇಶ ತೆರಿಗೆ ಕಾಯ್ದೆ, ಕರ್ನಾಟಕ ವೃತ್ತಿ ತೆರಿಗೆ ಕಾಯ್ದೆ, ಕರ್ನಾಟಕ ವಿಲಾಸಿ ತೆರಿಗೆ ಕಾಯ್ದೆ, ಕರ್ನಾಟಕ ಕೃಷಿ ವರಮಾನ ತೆರಿಗೆ ಕಾಯ್ದೆ ಹಾಗೂ ಕರ್ನಾಟಕ ಮನರಂಜನಾ ತೆರಿಗೆ ಕಾಯ್ದೆಗಳ ಅಡಿಯಲ್ಲಿನ ಕರನಿರ್ಧರಣೆ ಅಥವಾ ಮರು ಕರ ನಿರ್ಧರಣೆಗೆ ಸಂಬಂಧಿಸಿದಂತೆ 15-03-2017ರ ವರೆಗೆ ಬಾಕಿಯಿರುವ ಪೂರ್ಣ ತೆರಿಗೆಯನ್ನು ಪಾವತಿ ಮಾಡಲು ಲಭ್ಯವಾಗಲಿದೆ,.

*ಕರದಾತರು ವಿದ್ಯುನ್ಮಾನ ವಿಧಾನದ ಮೂಲಕ http://ctax.kar.nic.in ಜಾಲತಾಣದಲ್ಲಿ ವಿವರಿಸುವ ವಿಧಾನವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು.

*ಈ ಯೋಜನೆಯ ಲಾಭವನ್ನು ಪಡೆಯಲು ಉಂಟಾಗಬಹುದ ಅನಾನುಕೂಲತೆಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ 15-03-2017ಕ್ಕೆ ಬಾಕಿಯಿರುವ ಸರಿಯಾದ ತೆರಿಗೆ, ಅರ್ಜಿ ಸಲ್ಲಿಸುವ ದಿನಾಂಕವರೆಗೆ ಅನ್ವಯವಾಗುವ ದಂಡ ಹಾಗೂ ಬಡ್ಡಿಯನ್ನು ತಿಳಿಯಲು ಎಲ್ಲ ಕರದಾತರೂ ತಮ್ಮ ಸಂಬಂಧಿಸಿದ ಕರನಿರ್ಧರಣಾಧಿಕಾರಿ, ನೇಮಿಸಲಾದ ಅಧಿಕಾರಿ ಅಥವಾ ವಸೂಲಿ ಅಧಿಕಾರಿಯನ್ನು ಸಂಪರ್ಕಿಸಲು ವಾಣಿಜ್ಯ ತೆರಿಗೆಗಳ ಇಲಾಖೆ ಕೋರಿದೆ.