ಮೋದಿ ನೀಡಿರುವ ಭರವಸೆಗಳಲ್ಲೇ ಸುಳ್ಳು, ಯುವಕರಿಗೆ ಹಾಗೂ ರೈತರಿಗೆ ಮೋದಿಯಿಂದ ಭಾರಿ ಮೊಸವಾಗಿದೆ : ಮನಮೋಹನ್ ಸಿಂಗ್

0
429

ಮಧ್ಯ ಪ್ರದೇಶದ ಇಂದೋರ್- ನಲ್ಲಿ ನಡೆದ ಸಭೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯುವಜನರಿಗೆ ಮತ್ತು ರೈತರಿಗೆ ನೀಡಿದ ಭರವಸೆಗಳು ಸುಳ್ಳು ಬರವಸೆಗಳಾಗಿದು. ದೇಶ ಎದುರಿಸುತ್ತಿರುವ ಉದ್ಯೋಗದ ಸಮಸ್ಯೆ, ಸಿಬಿಐ ಮತ್ತು RBI ತಾಕಲಾಟ, ಅಪನಗದೀಕರಣ ಸೃಷ್ಟಿಸಿದ ಏರುಪೇರಿನ ವಿಷಯಗಳ ಭ್ರಷ್ಟಾಚಾರವನ್ನು ಮುಚ್ಚಿ ಹಾಕುತ್ತಿದ್ದಾರೆ. ಎಂದು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

Also read: ಭ್ರಷ್ಟಾಚಾರ ಮುಚ್ಚಿದೊಡಕ್ಕೆ ಏನೇನ್ ಮಾಡ್ತಾರೆ ನೋಡಿ; ಈ ಮುಖ್ಯಮಂತ್ರಿಯ 3 ವರ್ಷದ ಮೊಮ್ಮಗನ ಬಳಿ ಇದೆ ಕೋಟ್ಯಂತರ ರೂಪಾಯಿ ಆಸ್ತಿ!!

ಕೇಂದ್ರ ಸರ್ಕಾರದ ಅಪನಗದೀಕರಣದಂಥ ಯಡವಟ್ಟು:

ನರೇಂದ್ರ ಮೋದಿ ಅವರ ಸರಕಾರ ಅಪನಗದೀಕರಣವನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ, ಕಾಲದಿಂದ ಕಾಲಕ್ಕೆ ಹೊಸಹೊಸ ವಾದ ಮಂಡಿಸುತ್ತ ಸುಳ್ಳಿನ ಕಟ್ಟಡವನ್ನೇ ನಿರ್ಮಿಸುತ್ತಿದೆ. ಆದರೆ ಅಪನಗದೀಕರಣ ದೇಶ ಕಂಡ ಬಹುದೊಡ್ಡ ಸೋಲು. ಅದರ ಯಾವುದೇ ಉದ್ದೇಶ ಸಫಲವಾಗಿಲ್ಲ ಎಂದು ಕೇಂದ್ರ ಸರಕಾರವನ್ನು ಜಾಲಾಡಿದರು.

Also read: ಬೆಂಗಳೂರಿನ ಮೂಲ ಸೌಕರ್ಯಗಳು ಮಾತ್ರ ಸುಧಾರಣೆ ಕಾಣುತ್ತಿಲ್ಲ, ಆದರೆ BBMP ಮಾತ್ರ ತೆರಿಗೆ ಏರಿಕೆ ಮಾಡುತ್ತಲೇ ಇದೆ, ಇದು ಸರೀನಾ??

ಮಧ್ಯಪ್ರದೇಶದಲ್ಲಿ 5 ತಾಸಿಗೊಂದು ಸುಸೈಡ್:

ಮಧ್ಯಪ್ರದೇಶ ಚುನಾವಣೆಯ ಮೊದಲೇ ಕೃಷಿಯ ಬಿಕ್ಕಟ್ಟನ್ನು ನೆನಪಿಸಿಕೊಂಡು ರೈತರು ಮಧ್ಯಪ್ರದೇಶ ಸೇರಿದಂತೆ ಭಾರತದಾದ್ಯಂತ ಹೆಚ್ಚಿನ ನೋವನ್ನು ಅನುಭವಿಸುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ರೈತರ ಆತ್ಮಹತೆ ಪ್ರಮಾಣ ಹೆಚ್ಚಾಗಿದ್ದು ಪ್ರತಿ ಐದು ಗಂಟೆಗಳಿಗೊಬ್ಬರು ಸುಸೈಡ್ ಮಾಡಿಕೊಳ್ಳುತ್ತಿದ್ದಾರೆ. 2004 ರಿಂದ 2016 ರ ನಡುವೆ ಮದ್ಯಪ್ರದೇಶದಲ್ಲಿ ಸುಮಾರು 17,000 ರೈತರ ಆತ್ಮಹತ್ಯೆಗೆ ಶರಣಾಗಿದ್ದಾರೆ. 2014 ರಲ್ಲಿ ಮೋದಿಜಿ ಯವರು ನೀಡಿದ ಭರವಸೆಯಲ್ಲಿ ಯುವಕರಿಗೆ ವರ್ಷದಲ್ಲಿ 2 ಕೋಟಿ ಉದ್ಯೋಗಗಳು ಸೃಷ್ಟಿಯಾಗಿದ್ದು, ಮೋದಿ ಸರಕಾರವು ಪೈಪ್ ಕನಸನ್ನು ಹೊಂದಿದೆ. ಲೇಬರ್ ಬ್ಯೂರೊದ ತ್ರೈಮಾಸಿಕ ಸಮೀಕ್ಷೆ ಮಾತ್ರ ವಿಶ್ವಾಸಾರ್ಹ ದತ್ತಾಂಶವಾಗಿದೆ ಎಂದು ಮಾಜಿ ಪ್ರಧಾನಿ ಹೇಳಿದರು.

‘ನಾನು ರಿಮೋಟ್ ಕಂಟ್ರೋಲ್ ಪ್ರಧಾನಿಯಾಗಿರಲಿಲ್ಲ’

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು, ‘ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಹತ್ತು ವರ್ಷಗಳ ಕಾಲ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಿಮೋಟ್ ಕಂಟ್ರೋಲ್ ಆಗಿ ಕೆಲಸ ಮಾಡಿದರು’ ಎಂದಿದ್ದರು. ಇದಕ್ಕೆ ಮನಮೋಹನ್ ಸಿಂಗ್ ಖಡಕ್ ಉತ್ತರ ನೀಡಿ ನಮ್ಮ ಸರ್ಕಾರ ಮತ್ತು ಪಕ್ಷದ ನಡುವೆ ಸಾಕಷ್ಟು ಸೌಹಾರ್ದತೆ ಇತ್ತು. ನಮ್ಮ ಸರ್ಕಾರದಲ್ಲಿ ಪಕ್ಷ ಬೇರೆ, ಸರ್ಕಾರ ಬೇರೆ ಎಂಬಂತೆ ಕೆಲಸ ಮಾಡಿಲ್ಲ. ಎಲ್ಲರೂ ಸರ್ಕಾರದ ಕೆಲಸವನ್ನು ಸಮರ್ಪಣಾ ಭಾವದಿಂದ ಮಾಡಿದರು. ನಮ್ಮ ಸರ್ಕಾರದ ಯಶಸ್ಸಿಗೂ ಅದೇ ಕಾರಣ. ನಮ್ಮ ಪಕ್ಷದಲ್ಲಿ ಯಾರಲ್ಲೂ ಭಿನ್ನಾಭಿಪ್ರಾಯಗಳು ಹುಟ್ಟಿರಲಿಲ್ಲ’ ‘ನಾನು ರಿಮೋಟ್ ಕಂಟ್ರೋಲ್ ಪ್ರಧಾನಿಯಾಗಿರಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಜಿ ಪ್ರಧಾನಿ ಉತ್ತರ ನೀಡಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕೂವರೆ ವರ್ಷಗಳಿಂದ ಭಾರತ ಅತ್ಯಂತ ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿದೆ. ದೇಶದ ಯುವಕರು ಉದ್ಯೋಗವಿಲ್ಲದೆ ಪರಿತಪಿಸುತ್ತಿದ್ದಾರೆ. ಪ್ರತಿಪಕ್ಷ ಮತ್ತು ವಿವಿಧ ಗುಂಪುಗಳು ಜಂಟಿ ಸಂಸದೀಯ ಸಮಿತಿಯನ್ನು ಒತ್ತಾಯಿಸುತ್ತಿವೆ ಆದರೆ ಮೋದಿ ಸರಕಾರ ಇದಕ್ಕೆ ಸಿದ್ಧವಾಗಿಲ್ಲ” ಎಂದು ಮಾಧ್ಯಮಗಳಿಗೆ ಮಾತನಾಡಿ ಮನಮೋಹನ್ ಸಿಂಗ್ ಹೇಳಿದರು.