ಉಪಚುನಾವಣೆಯಲ್ಲಿ ಡಿಕೆಶಿ ಹೋದ ಕಡೆಯಲೆಲ್ಲಾ ಜನರ ಜಾತ್ರೆ ಕಂಡು ಹೆದರಿ ಮತ್ತೆ ಐಟಿ ನೋಟಿಸ್ ನೀಡಿತಾ ಮೋದಿ ಸರ್ಕಾರ??

0
412

ಉಪ ಚುನಾವಣೆಗೆ ಕೇವಲ ನಾಲ್ಕೇ ದಿನ ಬಾಕಿಯಿದೆ, ಅದರಲ್ಲಿ ಬಹಿರಂಗ ಪ್ರಚಾರಕ್ಕೆ 2 ದಿನ ಉಳಿದಿದ್ದು, ಇದರಲ್ಲೇ ಪಕ್ಷದ ಶಕ್ತಿಯನ್ನು ಹೆಚ್ಚಿಸಿ ಮತದಾರರನ್ನು ಸೆಳೆಯುವಲ್ಲಿ ಎಲ್ಲ ಪಕ್ಷಗಳು ಶ್ರಮ ಪಡುತ್ತಿವೆ. ಅದಕ್ಕಾಗಿ ಒಂದಂದು ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳು ನೂರಾರು ಕೋಟಿ ಹಣ ಕರ್ಚು ಮಾಡಿ ಗೆಲ್ಲಲೇಬೇಕು ಎನ್ನುವ ಹಂಬಲದಲಿದ್ದಾರೆ. ಮತದಾರರನ್ನು ಸೆಳೆಯಲು ಎಲ್ಲಾ ಪಕ್ಷಗಳ ಮುಖಂಡರು ನಾ ಮುಂದು, ತಾ ಮುಂದು ಎಂದು ಹಣ ಮತ್ತು ಗಿಫ್ಟ್ ನೀಡುತ್ತಿದ್ದಾರೆ, ಎನ್ನುವ ಮಾತುಗಳು ಕೇಳಿಬರುತ್ತಿದ್ದು. ಆದರೆ ಕಾಂಗ್ರೆಸ್ ಪರ ಪ್ರಚಾರದಲ್ಲಿರುವ ಡಿಕೆ ಶಿವಕುಮಾರ್ ಅವರಿಗೆ ಮತ್ತೆ ಐಟಿ ನೋಟೀಸ್ ಬಂದಿದ್ದು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.

ಡಿ.ಕೆ.ಶಿ ಪ್ರಚಾರಕ್ಕೆಅಡ್ಡಿಯಾಯ್ತ ಐಟಿ ನೋಟೀಸ್?

ಹೌದು ಚುನಾವಣೆಯ ಪ್ರಚಾರದಲ್ಲಿರುವ ಡಿ.ಕೆ.ಶಿವಕುಮಾರ್ ಮೇಲೆ ಕೇಂದ್ರದ ಕಣ್ಣು ಬಿದ್ದಿದ್ದು, ಹೋದ ಕಡೆಯಲ್ಲಿ ಕೂಡುವ ಜನರ ಬೆಂಬಲವನ್ನು ನೋಡಿಯೇ ಬಿಜೆಪಿ ಸರ್ಕಾರ ಡಿಕೆಶಿ ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಎನ್ನುವ ಮಾತುಗಳು ಕೇಳಿಬರುತ್ತಿವೆ. ಅದರಂತೆ ಈ ತಿಂಗಳ ಕೊನೆಯೊಳಗೆ ಅಂತಿಮ ಹೇಳಿಕೆ ದಾಖಲು ಮಾಡಬೇಕು ಎಂದು ಐಟಿ ಇಲಾಖೆ ನೋಟಿಸ್ ನಲ್ಲಿ ಸೂಚಿಸಿದೆ. ಅದೇ ರೀತಿ ಡಿಕೆ ಶಿವಕುಮಾರ್ ಅವರಿಗೆ ನೀಡಲಾಗಿದ್ದ ಅವಧಿ ಡಿಸೆಂಬರ್ 31ಕ್ಕೆ ಕೊನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಕುಟುಂಬಸ್ಥರಿಗೆ ಸೂಕ್ತ ಸಮಯದಲ್ಲಿ ವಿಚಾರಣೆಗೆ ಹಾಜರಾಗದೇ ಇದ್ದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಐಟಿ ಇಲಾಖೆ ಎಚ್ಚರಿಕೆಯನ್ನು ನೀಡಿದೆ.

ಹೌದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ 48 ದಿನಗಳ ಜೈಲು ವಾಸದ ನಂತರ ದೆಹಲಿ ಹೈಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿ ಡಿಕೆಶಿ ಅವರಿಗೆ ಜಾಮೀನು ನೀಡಿದ್ದು, 25 ಲಕ್ಷ ರೂ ಠೇವಣಿ ಬಾಂಡ್ ನೀಡಬೇಕು, ಪಾಸ್‌ಪೋರ್ಟ್ ಕೋರ್ಟ್ ವಶಕ್ಕೆ ಸಲ್ಲಿಸಬೇಕು, ವಿದೇಶಕ್ಕೆ ತೆರಳುವಂತಿಲ್ಲ, ಸಾಕ್ಷ್ಯ ನಾಶಪಡಿಸುವಂತಿಲ್ಲ ಹಾಗೂ ವಿಚಾರಣೆಗೆ ಕರೆದಾಗ ಹಾಜರಾಗಬೇಕು ಎಂಬ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿತ್ತು, ಇದರಿಂದ ಕಳೆದ 48 ದಿನಗಳಿಂದ ಜೈಲಿನಲ್ಲಿದ್ದ ಡಿಕೆಶಿವಕುಮಾರ್ ಗೆ ಬಿಗ್​ ರಿಲೀಫ್ ಸಿಕ್ಕಂತಾಗಿ ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿದರು.

ಅದರಂತೆ ಡಿಕೆಶಿ ಹೋದ ಕಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿಕೊಂಡು ಅಭಿಮಾನ ತೋರಿಸುತ್ತಿದ್ದಾರೆ, ಇದರಿಂದ ಗೆಲ್ಲುವ ವಿಶ್ವಾಸದಲ್ಲಿದ್ದ ಬಿಜೆಪಿಗೆ ಹೊಡೆತ ಬೀಳುವುದೆಂದೇ ಭಯಬಿದ್ದು ಮತ್ತೆ ಐಟಿ ಅಧಿಕಾರಿಗಳನ್ನು ಚೂ ಬಿಟ್ಟಿದ್ದಾರೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಫೈನಲ್ ರಿಪೋರ್ಟ್ ಅನ್ನು ನಮ್ಮ ಲೆಕ್ಕ ಪರಿಶೋಧಕರು ಸಿದ್ಧಗೊಳಿಸುತ್ತಿದ್ದಾರೆ, ಕಾನೂನು ಅವರ ಕೈಯಲ್ಲಿದೆ ಆದರೆ ಅದು ರಾಜಕೀಯವಾಗಿ ದುರುಪಯೋಗ ಆಗುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ನೋಡೋಣ ಮುಂದೆ ಏನು ಆಗುತ್ತೆ. ಕಾಗವಾಡಕ್ಕೆ…

ಉಸಿರಾಡಲೂ ಬಿಡ್ತಿಲ್ಲ, ತಿಂಗಳಲ್ಲಿ 30 ನೋಟಿಸ್?

ನೋಟಿಸ್ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, ಉಸಿರಾಡಲು ಅವಕಾಶ ನೀಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದೇವೆ. ತಕ್ಷಣವೇ ಅಸೆಸ್ಸಮೆಂಟ್ ಆರ್ಡರ್ ಮಾಡಬೇಕೆಂದು ಹೇಳುತ್ತಿದ್ದಾರೆ. ಈಗ ಬೆಂಗಳೂರಿಗೆ ಹೋಗಿ ಅಧಿಕಾರಿಗಳನ್ನು ಭೇಟಿಯಾಗುತ್ತೇನೆ. ಎಲ್ಲರ ಫೈನಲ್ ರಿಪೋರ್ಟ್ ನ್ನು ನಮ್ಮ ಅಧಿಕಾರಿಗಳು ಸಿದ್ಧಗೊಳಿಸುತ್ತಿದ್ದಾರೆ. ಕಾನೂನು ಅವರ ಕೈಯಲ್ಲಿದ್ದು, ಏನ್ ಬೇಕಾದ್ರೂ ಮಾಡಬಹುದು ಅಂತ ಅಂದುಕೊಂಡಿದ್ದಾರೆ . ಕಾಗವಾಡಕ್ಕೆ ಹೆಲಿಕಾಪ್ಟರ್ ನಲ್ಲಿ ಹೋಗಲು ಅನುಮತಿಯನ್ನ ನೀಡಲಿಲ್ಲ, ಎಂದು ಡಿ.ಕೆ.ಶಿವಕುಮಾರ್-ರವರು ಅಸಮಾಧಾನ ಹೊರಹಾಕಿದ್ದಾರೆ..