ಕಾಂಗ್ರೆಸ್ ನಾಯಕನ ಮನೆ ಮೇಲೆ ರೈಡ್ ಮಾಡಿದಾಗ ಕೋಟ್ಯಾಂತರ ರೂಪಾಯಿ ಅಘೋಷಿತ ಆಸ್ತಿ ಪತ್ತೆಯಾಗಿ ಎಲ್ಲರನ್ನೂ ಆಶ್ಚರ್ಯ ಪಡಿಸಿದೆ..

0
517

ಕೊಪ್ಪಳ ಜಿಲ್ಲೆಯಲ್ಲಿ ಒಬ್ಬ ಬರಿ ಕೂದಲು ಮಾರಿ 70 ಕೋಟಿ ರೂಪಾಯಿ ಗಳಿಸಿದ್ದಾನೆ. ಅದು ಹೇಗೆ ಸಾಧ್ಯ ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಿದ ಹಾಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೂ ಮೂಡಿ ದಾಳಿ ನಡೆಸಿದರೆ ಅವನ ಬಳಿ ಇರುವುದು ಕಪ್ಪು ಹಣ ಎಂದು ಗೊತ್ತಾಗಿದೆ. ಅಷ್ಟಕ್ಕೂ ಯಾರು ಆ ಐಟಿ ಅಧಿಕಾರಿಗಳ ಹೊಸ ಅತಿಥಿ ನೀವೇ ನೋಡಿ.

ಈತನ ಹೆಸರು ಶ್ರೀನಿವಾಸ್ ಗುಪ್ತ, ಕೋಪಳ್ಳದಲ್ಲಿ ಕಾಂಗ್ರೆಸ್ ನಾಯಕ, ಈತ ಹೈದರಾಬಾದ್‌ನ ವೇಲೂರಿನಲ್ಲಿ ಕೂದಲು ಸಂಸ್ಕರಣ ಘಟಕ ಹೊಂದಿದ್ದು, ಕೊಪ್ಪಳದ ಭಾಗ್ಯನಗರದ ಘಟಕದ ಮೂಲಕ ಆಫ್ರಿಕಾ ಮತ್ತು ಯೂರೋಪ್ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಆಫ್ರಿಕಾ ದೇಶದಲ್ಲಿ ಒಣ ಕೂದಲಿಗೆ ಅತಿ ಹೆಚ್ಚು ಬೇಡಿಕೆ ಇದ್ದು, ಮಾರುಕಟ್ಟೆಯಲ್ಲಿ ಒಣಕೂದಲು ಹೆಚ್ಚಾಗಿ ಮಾರಾಟವಾಗುತ್ತದೆ.

ಕೊಪ್ಪಳದಲ್ಲಿ ಇರುವ ಘಟಕದ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು 65 ಕೋಟಿ ರೂ. ಅಘೋಷಿತ ಆದಾಯ ಪತ್ತೆ ಹಚ್ಚಿ, ಐದು ಕೋಟಿ ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದೇವಾಲಯಗಳು ಮತ್ತು ಬ್ಯೂಟಿ ಪಾರ್ಲರ್‌ಗಳಿಂದ ಖರೀದಿಸಿದ ಕೂದಲುಗಳನ್ನು ತೆರಿಗೆ ಪಾವತಿಸದೆ ಈ ಘಟಕದ ಮೂಲಕ ವಿದೇಶಕ್ಕೆ ರಫ್ತು ಮಾಡುತ್ತಿರುವುದು ತಿಳಿದು ಬಂದಿದೆ.

ಒಬ್ಬ ಕೂದಲು ಉದ್ಯಮಿ ಇಷ್ಟರ ಮಟ್ಟಿಗೆ ಹೇಗೆ ಬೆಳೆಯಲು ಸಾಧ್ಯ ಎಂದು ಸಂಶಯದ ಮೇಲೆ ಧಾಳಿ ನಡೆಸಿದ ಐಟಿ ಅಧಿಕಾರಿಗಳಿಗೆ ಭರ್ಜರಿ ಭೇಟೆ ಸಿಕ್ಕಿದೆ. ಇವರು ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದಾಗ 65 ಕೋಟಿ ರೂ. ಅಘೋಷಿತ ಆದಾಯ, ದಾಖಲೆಗಳಿಲ್ಲದ 2.5 ಕೋಟಿ ರೂ. ಮೌಲ್ಯದ ಚಿನ್ನಾಭರಣ, 2.5 ಕೋಟಿ ರೂ. ನಗದು ಮತ್ತು 140 ಕೆಜಿ ಬೆಳ್ಳಿ ವಸ್ತುಗಳು ಸಿಕ್ಕಿದೆ.

ಈ ಧಾಳಿಯಲ್ಲಿ ಆದಾಯ ತೆರೆಗೆ ಅಧಿಕಾರಿಗಳಿಗೆ ತಿಳಿದ ಇನ್ನೊಂದು ಅಚ್ಚರಿಯ ವಿಷಯವೇನೆಂದರೆ, ಶ್ರೀನಿವಾಸ್ ಗುಪ್ತ 2015 ರಲ್ಲಿ ಐಟಿ ಅಧಿಕಾರಿಗಳ ಕಣ್ಣು ತಪ್ಪಿಸಿ ಸುಮಾರು 600 ಕೋಟಿ. ರೂ. ವ್ಯವಹಾರ ನಡೆಸಿದ್ದಾನಂತೆ, ಇನ್ನು ಶ್ರೀನಿವಾಸ್ ಗುಪ್ತ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆ ಕಾಡು ನೋಡಬೇಕು.