ಮಂಡ್ಯದ ರಾಜಕೀಯಕ್ಕೆ ಜುಟ್ಟಲು ಹಿಡಿದ ಐಟಿ ಅಧಿಕಾರಿಗಳು; ತಂದೆ -ಮಗ ಉಳಿದುಕೊಂಡಿದ್ದ ಹೋಟೆಲ್​​ ಮೇಲೆ ಐಟಿ ದಾಳಿ; ಬೇಸತ್ತ ಕುಮಾರಣ್ಣ ಮೋದಿಯ ಮೇಲೆ ಕಿಡಿ..

0
378

ಮಂಡ್ಯದಲ್ಲಿ ಬಿಗು ಬಿಟ್ಟಿರುವ ಮೈತ್ರಿ ಸರ್ಕಾರದ ಅಭ್ಯರ್ಥಿಗಳ ಮೇಲೆ ಕಣ್ಣಿಟ್ಟಿರುವ ಐಟಿ ಅಧಿಕಾರಿಗಳು ವಾರದಿಂದ ಬಲೆಯನ್ನು ಬಿಸುತ್ತಲೇ ಇದ್ದಾರೆ. ಹಾಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ನಮ್ಮ ಪುತ್ರನ ಗೆಲುವಿಗಾಗಿ ಹಣ ಹೊಳೆಯನ್ನೇ ಹರಿಸುತ್ತಾರೆ, ಎನ್ನುವ ಅನುಮಾನ ಮತ್ತು ಮಾಹಿತಿ ಮೇರೆಗೆ ದಾಳಿ ನಡೆಸುತ್ತಿರುವ ಅಧಿಕಾರಿಗಳು ಮತ್ತೆ ಕುಮಾರಸ್ವಾಮಿ ಮತ್ತು ನಿಖಿಲ್ ಅವರಿಗೆ ಶಾಕ್ ನೀಡಿದ್ದು ಸಿಎಂ ಉಳಿದುಕೊಂಡ ಹೋಟೆಲ್ ಮತ್ತು ನಿಖಿಲ್ ವಾಸ್ತವ ಹೂಡಿರುವ ಹೋಟೆಲ್ ಸಿಸಿ ಕ್ಯಾಮರಾ ತಪಾಷಣೆ ಮಾಡಿದ್ದಾರೆ.

Also read: ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದ ಬೇಸತ್ತು ಮಂಡ್ಯ ಕಾಂಗ್ರೆಸ್ ನಾಯಕರು ಸುಮಲತಾಗೆ ಬಹಿರಂಗ ಬೆಂಬಲ?? ನಿಖಿಲ್ ಗತಿ??

ಹೌದು ಐಟಿ ದಾಳಿ ಮೈತ್ರಿ ಸರ್ಕಾರಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ಕಾಂಗ್ರೆಸ್​​-ಜೆಡಿಎಸ್​​​ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪುತ್ರ ನಿಖಿಲ್​​ನನ್ನು ಗೆಲ್ಲಿಸಲು ಸಿ ಎಂ ಎಚ್​.ಡಿ ಕುಮಾರಸ್ವಾಮಿ ಹೋಟೆಲ್​​ವೊಂದರಲ್ಲಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಮಂಡ್ಯದ ಶಾಸಕ ಮತ್ತು ಸಚಿವರು ಭಾಗಿಯಾಗಿದ್ದರು. ಬಳಿಕ ಅದೇ ಹೋಟೆಲ್​​ನಲ್ಲಿ ಸಿಎಂ ಉಳಿದುಕೊಂಡಿದ್ದರು. ಇದೀಗ ಸಿಎಂ ಕುಮಾರಸ್ವಾಮಿ ಅವರು ರಾತ್ರಿ ಉಳಿದುಕೊಂಡಿದ ಖಾಸಗಿ ಹೋಟೆಲ್​​ ಮೇಲೆಯೂ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೇ ಹೋಟೆಲ್ ಸಿಬ್ಬಂದಿಯನ್ನು ಐಟಿ ತಂಡ ವಿಚಾರಣೆ ನಡೆಸುತ್ತಿದೆ.

Also read: ಇತ್ತೀಚೆಗೆ ರೈಡ್-ಗಳಿಗೆ ಭಾರಿ ಸುದ್ದಿಯಾಗಿದ್ದ ಐ.ಟಿ. ಡಿಪಾರ್ಟ್-ಮೆಂಟ್ ಅಧಿಕಾರಿ ಲಂಚ ಸ್ವೀಕರಿಸುವಾಗ ಸಿಬಿಐ ಬಲೆಗೆ!!

ಅಷ್ಟೇ ಅಲ್ಲದೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್‍ನ ಬೃಂದಾವನದಲ್ಲಿರುವ ಖಾಸಗಿ ಹೋಟೆಲ್ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಾಮಾನ್ಯವಾಗಿ ಮುಖ್ಯಮತ್ರಿ ಕುಮಾರಸ್ವಾಮಿ ಸೇರಿದಂತೆ ಕ್ಷೇತ್ರಕ್ಕೆ ಆಗಮಿಸುವ ಹಲವು ಗಣ್ಯ ನಾಯಕರು ಇದೇ ಹೋಟೆಲಿನಲ್ಲಿ ವಾಸ್ತವ್ಯ ಹೂಡುತ್ತಾರೆ. ಈ ಹಿನ್ನೆಲೆಯಲ್ಲಿ ಐಟಿ ರೇಡ್ ಆಗಿರುವ ಶಂಕೆ ವ್ಯಕ್ತವಾಗಿದ್ದು, ನಿನ್ನೆ ರಾತ್ರಿ ಕೂಡ ಮೈತ್ರಿ ಅಭ್ಯರ್ಥಿ ನಿಖಿಲ್ ಅವರು ಇದೇ ಹೋಟೆಲ್ -ನಲ್ಲಿ ತಂಗಿದ್ದರು. ಆ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದ ವೇಳೆ ಆಗಮಿಸಿದ ಐಟಿ ಅಧಿಕಾರಿಗಳ ತಂಡ ಸುಮಾರು ಅರ್ಧ ಗಂಟೆ ಕಾಲ ಹೋಟೆಲ್ ಕೊಠಡಿಯನ್ನು ಪರಿಶೀಲನೆ ನಡೆಸಿತು. 30 ಜನರ ಅಧಿಕಾರಿಗಳ ತಂಡ ದಾಳಿಯ ವೇಳೆ ಆಗಮಿಸಿತ್ತು ಎಂಬ ಮಾಹಿತಿ ಲಭಿಸಿದೆ. ಜತೆಗೆ ಹೋಟೆಲ್ ನಲ್ಲಿ ಸಭೆ ನಡೆದ ದಿನದ ಸಿಸಿಟಿವಿ ದೃಶ್ಯಗಳು ಸೇರಿ ಹಲವು ದಾಖಲೆಗಳು ವಶಕ್ಕೆ ಪಡೆದು ಹೋಟೆಲ್​​​ ತಪಾಸಣೆ ನಡೆಸಲಾಗುತ್ತಿದೆ.

Also read: ಇವು ಶೋಕಿ ಎತ್ತುಗಳು ಬಿಸಿಲಿಗೆ ಬಂದಿವೆ ಸ್ವಲ್ಪ ರೈತರ ಕಷ್ಟಗಳು ಅರ್ಥವಾಗಲಿ; ಎಂದ ಕುಮಾರಸ್ವಾಮಿಗೆ ಯಶ್ ಕೊಟ್ಟ ಉತ್ತರ ಏನು ಗೊತ್ತಾ??

ಈ ಬೆನ್ನಲ್ಲೇ ಐಟಿ ದಾಳಿಯ ಬಗ್ಗೆ ಕಿಡಿಕಾರಿದ್ದ ಸಿಎಂ, ನಮ್ಮ ನಾಯಕರನ್ನೇ ಟಾರ್ಗೆಟ್ ಮಾಡಿ ದಾಳಿ ನಡೆಸಲಾಗುತ್ತಿದೆ. ಅಪರೇಷನ್ ಕಮಲ ವೇಳೆ ಏಕೆ ಕ್ರಮ ಕೈಗೊಂಡಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಐಟಿ ಅಧಿಕಾರಿಗಳ ಮೂಲಕ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದ್ದಾರೆ. ಎಂದು ಸುದ್ದಿಗಾರರ ಜತೆ ಮಾತನಾಡಿದ್ದ ಕುಮಾರಸ್ವಾಮಿ, “ಕೇಂದ್ರ ಸರ್ಕಾರ ಐಟಿ ದಾಳಿ ನಡೆಸಲು ಸಿದ್ಧತೆ ನಡೆಸಿದೆ. ಕೇಂದ್ರ ಸರ್ಕಾರದ ಏಜೆಂಟ್​ಗಳಾಗಿ ಐಟಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ನಮಗೂ ರಾಜಕಾರಣ ಗೊತ್ತಿದೆ. ನನ್ನ ಜೊತೆ ಆತ್ಮೀಯರಾಗಿರುವ ಬಿಜೆಪಿಯವರೊಬ್ಬರು ಫೋನ್ ಮಾಡಿದ್ದರು. ಖುದ್ದು ಅವರೇ ಈ ವಿಚಾರ ತಿಳಿಸಿದರು. ದಾಳಿ ನಡೆಸಲು ನಾಳೆ ಬೆಳಗ್ಗೆ 5 ಗಂಟೆಗೆ ಮಹೂರ್ತ ಇಟ್ಟಿದ್ದಾರಂತೆ. ಇಷ್ಟು ಕೀಳು ಮಟ್ಟದಲ್ಲಿ ರಾಜಕೀಯ ಮಾಡಿ ನಮ್ಮನ್ನು ಹೆದರಿಸುತ್ತಿದ್ದಾರೆ. ನಾವು ದರೋಡೆ ಮಾಡಿಲ್ಲ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇವೆ”, ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.