ಕನ್ನಡ ಚಿತ್ರರಂಗದ ಮೇಲೆ IT ಶಾಕ್; ಸುದೀಪ್, ಪುನಿತ್, ಯಶ್, ಶಿವರಾಜ್ ಕುಮಾರ, ಸೇರಿದಂತೆ ಹಲವರ ಮನೆ ಮೇಲೆ IT ದಾಳಿ..

0
542

ಕನ್ನಡ ಚಿತ್ರರಂಗದ ಮೇಲೆ IT ಅಧಿಕಾರಿಗಳು ಶಾಕ್ ನೀಡಿದ್ದು, ಸ್ಯಾಂಡಲ್ ವುಡ್-ನಲ್ಲಿ ಮಿಚ್ಚಿರುವ ಶ್ರೀಮಂತ ನಟ ನಿರ್ದೇಶಕ ಹಾಗೂ ನಿರ್ಮಾಪಕರ ಮನೆಗಳ ಮೇಲೆ ದಾಳಿ ಮಾಡಿದ್ದು. ಸುದೀಪ್, ಪುನಿತ್ ರಾಜ್ ಕುಮಾರ್, ಯಶ್, ಶಿವರಾಜ್ ಕುಮಾರ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ವಿಲನ್ ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್, ಜಯಣ್ಣ ಸೇರಿದಂತೆ ಹಲವು ಸಿನಿಮಾ ಕ್ಷೆತ್ರದ ಗಣ್ಯರ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆದಿದೆ.

Also read: ಬಾಕ್ಸ್ ಆಫೀಸ್-ನಲ್ಲಿ ಶಾರುಖ್ ಖಾನ್-ರ Zero ಚಿತ್ರವನ್ನೂ ಹಿಂದಿಕ್ಕಿ ಮುನ್ನುಗ್ಗುತಿದೆ ಕೆ.ಜಿ.ಎಫ್. ಕನ್ನಡಿಗರ ಚಿತ್ರ ಯಾರಿಗಿಂತ ಕಮ್ಮಿಯಿಲ್ಲ ಅನ್ನೋದನ್ನು ಸಾಧಿಸಿಯೇ ಬಿಟ್ಟರು ಯಶ್!!

ಹೌದು ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ನಗರದ ವಿವಿಧೆಡೆ ಸಿನಿಮಾ ಕ್ಷೇತ್ರದ ಗಣ್ಯರ ಮನೆಗಳ ಮೇಲೆ ಗುರುವಾರ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಒಟ್ಟು 60 ಕಡೆ ದಾಳಿಯಾಗಿದ್ದು ಇದೀಗ ಸುದೀಪ್, ಯಶ್, ಹಾಗೂ ಶಿವರಾಜ್ ಕುಮಾರ್ ಗೂ ಕೂಡ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಸದಾಶಿವನಗರದ ಪುನೀತ್ ರಾಜ್ ಕುಮಾರ್ ನಿವಾಸ, ನಾಗವಾರದಲ್ಲಿರುವ ಶಿವರಾಜ್ ಕುಮಾರ್ ನಿವಾಸ, ಮಹಾಲಕ್ಷ್ಮಿ ಲೇಔಟ್‌ನ ನಾಗಪುರದ ರಾಕ್ ಲೈನ್ ವೆಂಕಟೇಶ್ ನಿವಾಸ, ನಾಗರಬಾವಿಯ ವಿಜಯ್ ಕಿರಗಂದೂರು ನಿವಾಸ ಹಾಗೂ ಎಚ್ಎಸ್ಆರ್ ಲೇಔಟ್ ನಲ್ಲಿರುವ ಮನೋಹರ್ ನಿವಾಸದ ಮೇಲೆ ಸುಮಾರು 200 ಅಧಿಕಾರಿಗಳು ದಾಳಿ ನಡೆಸಿದ್ದು, ಚಂದನವನದ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.

ಕೆಜಿಎಫ್ ನಟ ಯಶ್ ಮನೆಗೂ IT ದಾಳಿ:

ಕೆಜಿಎಫ್​’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್​ ಮಾಡುತ್ತಿದೆ. ಎಂಬ ಹಿನ್ನೆಲೆಯಲ್ಲಿ ಕತ್ರಿಗುಪ್ಪೆಯಲ್ಲಿರುವ ‘ರಾಕಿಂಗ್​ ಸ್ಟಾರ್​’ ಯಶ್​ ಮನೆಯ ಮೇಲೆ IT ರೇಡ್ ಆಗಿದ್ದು ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಇನ್ನೂ ದಿ ವಿಲನ್ ಚಿತ್ರದಲ್ಲಿ ಮಿಂಚಿದ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಅವರ ‘ಹೆಬ್ಬುಲಿ’ ಸಿನಿಮಾ 2017ರ ದೊಡ್ಡ ಕಲೆಕ್ಷನ್ ಮಾಡಿತ್ತು. ಈ ಸಿನಿಮಾ 50+ ಕೋಟಿ ಹಣವನ್ನು ಗಳಿಕೆ ಮಾಡಿದೆ ಎಂಬ ಸುದ್ದಿ ಇತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಸುದೀಪ್ ಮನೆ ಹಾಗು ಸಂಬಧಪಟ್ಟ ಆಸ್ತಿಯ ಮೇಲೆ ಕಣ್ಣು ಬಿದ್ದಿದು ಈಗಾಗಲೇ ದಾಳಿ ಮಾಡಿದ ಅಧಿಕಾರಿಗಳು ಬಿಡುವಿಲ್ಲದೆ ಪರಿಶೀಲನೆ ನಡೆಸಿದ್ದಾರೆ.

ರಾಕ್​ಲೈನ್​ ಅವರ ಬಂಡವಾಳದ ಮೇಲೆ IT ಕಣ್ಣು:

ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ದೊಡ್ಡ ದೊಡ್ಡ ಸಿನಿಮಾಗಳಿಗೆ ಹೂಡಿಕೆ ಮಾಡುವ ವಿಚಾರದ ಹಿನ್ನೆಲೆಯಲ್ಲಿ ಪುನೀತ್​ ರಾಜ್​ಕುಮಾರ್​ ನಟನೆಯ ‘ನಟಸಾರ್ವಭೌಮ’ ಚಿತ್ರಕ್ಕೆ ರಾಕ್​ಲೈನ್​ ವೆಂಕಟೇಶ್​ ಬಂಡವಾಳ ಹೂಡಿದ್ದಾರೆ. ಈ ಚಿತ್ರಕ್ಕೆ ಪವನ್​ ಒಡೆಯರ್​ ಅವರ ನಿರ್ದೇಶನವಿದೆ. ಜ.5ರಂದು ಚಿತ್ರದ ಆಡಿಯೋ ರಿಲೀಸ್​ ಆಗಲಿದೆ. ಈ ವಿಚಾರವಾಗಿ ವೆಂಕಟೇಶ್ ಅವರ ಬಂಡವಾಳದ ಮೇಲೆ ಹೆಚ್ಚಿನ IT ಅಧಿಕಾರಿಗಳ ಕಣ್ಣು ಬಿದಿದ್ದು, ಮಹಾಲಕ್ಷ್ಮೀ ಲೇಔಟ್​ ಬಳಿ ಇರುವ ಮನೆ ಮೇಲೆ 8 ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.