ಇತ್ತೀಚಿಗೆ IT ರೈಡ್-ಗಳು ಹೆಚ್ಚಾಗಿ ನಡೆಯುತ್ತಿವೆ, ಈಗ ಕೆ.ಪಿ.ನಂಜುಂಡಿಯವರ ಆಸ್ತಿಯ ಮೇಲೆ IT ರೈಡ್ ಆಗಿವೆ..

0
594

ಇತ್ತೀಚಿಗೆ ಅಕ್ರಮ ಅಸ್ತಿಗಳಿಸುವವರು ಹೆಚ್ಚಾಗುತ್ತಿದ್ದಾರೆ, ಸರ್ಕಾರಕ್ಕೆ ತೆರೆಗೆ ಕಟ್ಟದೆ ಕಪ್ಪು ಹಣ ಕೂಡಿಟ್ಟ ಇಂತಹ ವ್ಯಕ್ತಿಗಳಿಗೆ ಐಟಿ ಅಧಿಕಾರಿಗಳು ಶಾಕ್ ನೀಡುತ್ತ ಬಂದಿದ್ದಾರೆ. ಮೊನ್ನೆತಾನೆ ಕೊಪ್ಪಳದಲ್ಲಿ ಅಕ್ರಮ ಆಸ್ತಿಗಳಿಸಿದ ಕಾಂಗ್ರೆಸ್ ನಾಯಕನ ಕಂಪನಿಯ ಮೇಲೆ ಆದಾಯ ತೆರೆಗೆ ಅಧಿಕಾರಿಗಳು ಧಾಳಿ ನಡೆಸಿ 70 ಕೋಟಿ.ರೂ ಮೊತ್ತದ ಅಕ್ರಮ ಬಯಲು ಮಾಡಿದ್ದರು, ಈಗ ಕರ್ನಾಟಕದ ಪ್ರಸಿದ್ಧ ಸಂಸ್ಥೆಯೊಂದರ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ, ಯಾವ ಸಂಸ್ಥೆ ಎಂದು ನೀವೇ ನೋಡಿ.

ಗೋವಾ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಕರ್ನಾಟಕದ ಬಿಜಿಪಿ ನಾಯಕ ಹಾಗು ಸುಪ್ರಸಿದ್ದ K.P.ನಂಜುಂಡಿ ಸಂಸ್ಥೆಯ ಮೇಲೆ. K.P.ನಂಜುಂಡಿ ಗ್ರೂಪ್-ನ ಮಾಲೀಕರಾದ ನಂಜುಂಡಿ ಅವರ ಧಾರವಾಡ ಹಾಗು ಬೆಂಗಳೂರು ನಗರದ ಎರಡು ಮನೆ, ಜೆವೆಲ್ರ್ಸ್, ಸಿಲ್ಕ್ ಶೋ ರೂಂ ಮತ್ತು ಚಾನಲ್ ಮೇಲೆ ಹಠಾತ್ತನೆ ಏಕಕಾಲದಲ್ಲಿ ದಾಳಿ ಮಹತ್ವದ ದಾಖಲೆಗಳನ್ನು ಕಲೆಹಾಕಿ ಪರಿಶೀಲಿಸುತ್ತಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು ಕೇವಲ K.P.ನಂಜುಂಡಿ ಗ್ರೂಪ್-ನ ಮಾಲೀಕರಾದ ನಂಜುಂಡಿಯವರ ಆಸ್ತಿಗಳ ಮೇಲೆ ಮಾತ್ರ ದಾಳಿ ನಡೆಸಿಲ್ಲ ಅವರ ಸಂಬಂಧಿಕರು, ಸ್ನೇಹಿತರು ಮತ್ತು ಗ್ರೂಪ್-ನ ಉನ್ನತ ಹುದ್ದೆಯಲ್ಲಿರುವವರ ಮನೆ ಮತ್ತು ಅವರ ಆಸ್ತಿಗಳ ಮೇಲೆಯು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಒಟ್ಟಿನಲ್ಲಿ ನಾವು ಯಾವುದೇ ಪಕ್ಷಕ್ಕೆ ಸೀಮಿತವಲ್ಲ, ಅನುಮಾನ ಅಥವಾ ದೂರು ಬಂದ ತಕ್ಷಣ ಅವರು ಯಾರೇ ಆಗಲಿ ನಮ್ಮ ಕರ್ತವ್ಯದಿಂದ ಹಿಂಜರಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಐಟಿ ಅಧಿಕಾರಿಗಳು ನೀಡಿದ್ದಾರೆ…!