ಮೈತ್ರಿ ಸರ್ಕಾರಕ್ಕೆ ಐಟಿ ಶಾಕ್; ಸಿಎಂ ಆಪ್ತ ಸಚಿವ ಸಿ.ಎಸ್​. ಪುಟ್ಟರಾಜು ಮನೆ ಸೇರಿದಂತೆ 15 ಕಡೆ ದಾಳಿ; ಮೋದಿ ವಿರುದ್ದ ಎಚ್ ಡಿ ಕುಟುಂಬ ಫುಲ್ ಗರಂ..

0
314

ಮಂಡ್ಯ, ಬೆಂಗಳೂರು, ಹಾಸನ, ಮೈಸೂರಿನಲ್ಲಿ​ 15 ಕಡೆ ಐಟಿ ಶಾಕ್

ಲೋಕಸಭಾ ಚುನಾವಣೆಯ ಆತುರದಲ್ಲಿರುವ ಜೆಡಿಎಸ್ ಪಕ್ಷಕ್ಕೆ ಐಟಿ ಶಾಕ್ ನೀಡಿದ್ದು ಮೈತ್ರಿಯಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಯಾಗಿದೇ. ಮಂಡ್ಯ ಜಿಲ್ಲಾ ಉಸ್ತುವಾರಿಯೂ ಆಗಿರುವ ಸಿ.ಎಸ್​. ಪುಟ್ಟರಾಜು ಮನೆ ಸೇರಿದಂತೆ ಮಂಡ್ಯ, ಬೆಂಗಳೂರು, ಹಾಸನ, ಮೈಸೂರಿನಲ್ಲಿ​ ಏಕಕಾಲಕ್ಕೆ 10 ಉದ್ಯಮಿಗಳೂ ಸೇರಿದಂತೆ 15ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಮಧ್ಯರಾತ್ರಿ ಐಟಿ ಶಾಕ್​ ನೀಡಲಾಗಿದೆ. ಇದೆಲ್ಲ ಮೋದಿ ಸರ್ಕಾರ ಮಾಡಿಸಿರುವ ಸಂಚು ಎಂದು ಜೆಡಿಎಸ್ ನಾಯಕರು ಹೋರಾಟಕ್ಕೆ ಇಳಿಯುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ.


Also read: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪ; ದೇಶದಲ್ಲೆ ಕರ್ನಾಟಕದಿಂದ ಚುನಾವಣಾ ಆಯೋಗಕ್ಕೆ ಹೆಚ್ಚು ದೂರು..

ಹೌದು ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಸ್ವಗ್ರಾಮದಲ್ಲಿರುವ ಮನೆ ಹಾಗೂ ಅವರ ಅಣ್ಣನ ಮಗನ ಮನೆಯ ಮೇಲೆ ದೆಹಲಿಯಿಂದ ಬಂದಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗ್ಗೆ ಸುಮಾರು 5 ಗಂಟೆ ವೇಳೆಗೆ ಮಂಡ್ಯ ಜಿಲ್ಲಾ ಉಸ್ತುವಾರಿಯೂ ಆಗಿರುವ ಸಿ.ಎಸ್​. ಪುಟ್ಟರಾಜು ಅವರಿಗೆ ಸೇರಿದ ಮಂಡ್ಯದ ಚಿನಕುರಳಿಯ ಮನೆಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೈಸೂರಿನ ವಿಜಯನಗರದಲ್ಲಿರುವ ಪುಟ್ಟರಾಜು ಅಣ್ಣನ ಮಗನ ಮನೆಯ ಮೇಲೆಯೂ ದಾಳಿ ನಡೆದಿದೆ. 4 ಕಾರುಗಳಲ್ಲಿ ಬಂದಿದ್ದ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಎಚ್​.ಡಿ. ರೇವಣ್ಣ ಸಚಿವರಾಗಿರುವ ಲೋಕೋಪಯೋಗಿ ಇಲಾಖೆಯ ಹಾಸನ ಕಚೇರಿ ಮೇಲೆ ಕೂಡ ಐಟಿ ದಾಳಿ ನಡೆದಿದ್ದು, ಹಾಸನದ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಂಜುನಾಥ್ ಅವರ ವಿಚಾರಣೆ ನಡೆಸಲಾಗಿದೆ. ಹಾಸನದಲ್ಲಿ ಒಟ್ಟು 10 ಕಡೆ ಐಟಿ ದಾಳಿ ನಡೆಸಲಾಗಿದೆ. ಬೆಳಗ್ಗೆ ಸುಮಾರು 5 ಗಂಟೆ ವೇಳೆಗೆ ಮಂಡ್ಯ ಜಿಲ್ಲಾ ಉಸ್ತುವಾರಿಯೂ ಆಗಿರುವ ಸಿ.ಎಸ್​. ಪುಟ್ಟರಾಜು ಅವರಿಗೆ ಸೇರಿದ ಮಂಡ್ಯದ ಚಿನಕುರಳಿಯ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.


Also read: ಪ್ರಧಾನಿ ಮೋದಿ ಅವರಿಂದ ಮಹತ್ವದ ಮಾಹಿತಿ; ಭಾರತದ ರಕ್ಷಣೆಯಲ್ಲಿ ‘ಮಿಷನ್ ಶಕ್ತಿ’ ಅತ್ಯಂತ ಮಹತ್ವದ ಹಜ್ಜೆ, ಅಂತರಿಕ್ಷ ಸಮರಕ್ಕೆ ಸಿದ್ಧವಾದ ಭಾರತ..

ಕೋಟ್ಯಂತರ ಹಣ ಸಾಗಣೆ ಶಂಕೆ ಹಿನ್ನೆಲೆ ಐಟಿ ದಾಳಿ?

ಚುನಾವಣೆ ವೇಳೆ ಕೋಟ್ಯಂತರ ಹಣ ಸಾಗಣೆ ಶಂಕೆ ಹಿನ್ನೆಲೆ ಐಟಿ ದಾಳಿ ನಡೆಸಲಾಗಿದೆ. ತುಮಕೂರು, ಹಾಸನ, ಬೆಂಗಳೂರು ಗ್ರಾಮಾಂತರ, ಮಂಡ್ಯ ಭಾಗದಲ್ಲಿ ಹಣ ಸಾಗಣೆ ಶಂಕೆ ಹಿನ್ನೆಲೆ ದಾಳಿ ನಡೆದಿದೆ. ಮಂಡ್ಯಕ್ಕೆ ಹಣ ಸಾಗಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಚುನಾವಣಾ ಅಕ್ರಮದ ಬಗ್ಗೆ ವಾರದಿಂದ ಕಣ್ಣಿಟ್ಟಿದ್ದ ಐಟಿ ಅಧಿಕಾರಿಗಳು ಮೈಸೂರು, ಮಂಡ್ಯದಲ್ಲಿ ಅಕ್ರಮವಾಗಿ ಹಣ ಸಾಗಾಟದಲ್ಲಿ ಸಚಿವ ಸಿ.ಎಸ್. ಪುಟ್ಟರಾಜು ಪ್ರಮುಖ ಪಾತ್ರ ವಹಿಸಿರುವ ಅನುಮಾನದಿಂದ ದಾಳಿ ನಡೆಸಿದ್ದಾರೆ.

ಐಟಿ ದಾಳಿ ಮೂಲಕ ಮೋದಿ ಸರ್ಜಿಕಲ್ ಸ್ಟ್ರೈಕ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಐಟಿ ಅಧಿಕಾರಿಗಳ ಮೂಲಕ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದ್ದಾರೆ. ಐಟಿ ಅಧಿಕಾರಿ ಬಾಲಕೃಷ್ಣರಿಗೆ ಸಂವಿಧಾನಾತ್ಮಕ ಹುದ್ದೆಯ ಆಮಿಷವನ್ನು ಒಡ್ಡಿದ್ದು, ಅವರ ಸಹಾಯದಿಂದ ಈ ರೀತಿ ದಾಳಿ ಮಾಡಿಸುತ್ತಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಅವರು ಕೇಂದ್ರ ಸರ್ಕಾರ ಸಂಸ್ಥೆಗಳನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ದಾಳಿ ಮೂಲಕ ವಿಪಕ್ಷಗಳಿಗೆ ಚುನಾವಣೆ ಸಮಯದಲ್ಲಿ ತೊಂದರೆ ಕೊಡುತ್ತಿದ್ದಾರೆ” ಎಂದು ಮೋದಿ ಮತ್ತು ಐಟಿ ಅಧಿಕಾರಿಗಳ ವಿರುದ್ಧವೇ ಸಿಎಂ ನೇರ ವಾಗ್ದಾಳಿ ಮಾಡಿದ್ದಾರೆ.


Also read: ಸುಮಲತಾ ಹೆಸರಲ್ಲಿ 3 ಜನ ನಾಮಪತ್ರ ಸಲ್ಲಿಕೆ; ಜೆಡಿಎಸ್ ಕುತಂತ್ರಕ್ಕೆ ಪಕ್ಷದ ಚಿಹ್ನೆ ಆಯ್ಕೆಯ ಮೂಲಕ ಉತ್ತರ ನೀಡಿದ ಸಮಲತಾ ಅಂಬರೀಶ್..

ನಾವು ಈ ಐಟಿ ದಾಳಿಗೆಲ್ಲ ಹೆದರೋ ಹಾಗಿದ್ರೆ ನಾವು ಯಾವತ್ತೋ ಮನೆಗೆ ಹೋಗಬೇಕಾಗಿತ್ತು. ಈ ದಾಳಿಗೆ ಪ್ರತಿಯಾಗಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮಾಡಿದಂತೆ ನಾವೂ ಪ್ರತಿಭಟನೆ ಮಾಡುತ್ತೇವೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಹೋರಾಟ ಮಾಡುತ್ತೇವೆ. ಐಟಿ ಇಲಾಖೆ ಮುಖ್ಯಸ್ಥ ಬಿಜೆಪಿಯ ಏಜೆಂಟ್​ ಆಗಿದ್ದಾನೆ. ಅವನನ್ನು ಬಿಜೆಪಿಗೆ ಸೇರಿಸಿಕೊಳ್ಳಲಿ. ಅವರಿಗೆ ಬಿಜೆಪಿಯಿಂದ ಟಿಕೆಟ್​ ಕೊಡೋದು ಒಳ್ಳೆಯದು. ಇದಕ್ಕೆಲ್ಲಾ ನಾವು ಹೆದರೋದಿಲ್ಲ ಐಟಿ ಚೀಫನ್ನು ಮೋದಿ ಮತ್ತು ಯಡಿಯೂರಪ್ಪನವರ ಮನೆಗೆ ‘ಇದಕ್ಕೆ’ ಕಳಿಸಬೇಕು. ಅವನ್ಯಾರು ಮೋದಿ? ಇದಕ್ಕೆಲ್ಲ ನಾವು ಹೆದರಲ್ಲ. ಇದು ಬಿಜೆಪಿಗೆ ಅಂತ್ಯ ಕಾಲ ಎಂದು ಸಚಿವ ಎಚ್​.ಡಿ. ರೇವಣ್ಣ ಹೇಳಿದ್ದಾರೆ.