ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್ 496 ಮೆಡಿಕಲ್ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ…

0
283

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ) 496 ಮೆಡಿಕಲ್ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಮೇ 1,2019 ರೊಳಗೆ ಅರ್ಜಿ ಸಲ್ಲಿಸಬೇಕು.

Also read: UPSC 106 ಜಿಯೋಲಜಿಸ್ಟ್ & ಜಿಯೋ ಸೈಂಟಿಸ್ಟ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ

ಹುದ್ದೆಯ ಹೆಸರು (Name Of The Posts): ಮೆಡಿಕಲ್ ಅಧಿಕಾರಿ

ಸಂಸ್ಥೆ (Organisation): ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ)

ವಿದ್ಯಾರ್ಹತೆ (Educational Qualification): ಮೆಡಿಸಿನ್‌ ನಲ್ಲಿ ಡಿಪ್ಲೋಮಾ ,ಸ್ನಾತಕೋತ್ತರ ಪದವಿ, ಎಂಬಿಬಿಎಸ್ ಯನ್ನು ಮಾನ್ಯತೆ ಪಡೆದ ಸಂಸ್ಥೆ /
ವಿಶ್ವವಿದ್ಯಾನಿಲಯದಲ್ಲಿ ಹೊಂದಿರುವ ಅಭ್ಯರ್ಥಿಗಳು ಅಧಿಕಾರಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ಉದ್ಯೋಗ ಸ್ಥಳ (Job Location): ಭಾರತದೆಲ್ಲೆಡೆ

ವಯೋಮಿತಿ: ಹುದ್ದೆಗಳ ಅನ್ವಯ ಗರಿಷ್ಟ 30 ವರ್ಷ, 40 ವರ್ಷ ಮತ್ತು 50 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ: ಅರ್ಜಿದಾರರು ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿದ್ದು ಸಾಮಾನ್ಯ ಓಬಿಸಿ ಅಭ್ಯರ್ಥಿಗಳು 400/-ರೂ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬಹುದು. ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ.

ಹೆಚ್ಚಿನ ಮಾಹಿತಿಗಾಗಿ: http://www.davp.nic.in/WriteReadData/ADS/eng_19143_28_1819b.pdf ಕ್ಲಿಕ್ ಮಾಡಿ.