ಗೌರಿ ಹಬ್ಬ ಇನ್ನೇನು ಬಂದೆ ಬಿಡ್ತು.. ಗೌರಿ ಬಾಗಿನದ ತಯಾರಿ ಹೇಗೆ ಮಾಡೋದು ಅನ್ನೋದು ತಿಳಿದುಕೊಳ್ಳಿ…

0
2051

ಹಬ್ಬದ ಆಚರಣೆಗಳಲ್ಲಿ ಗೌರಿ ಗಣೇಶ ಹಬ್ಬಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನಮಾನವಿದೆ. ಹಿಂದೂ ಹಬ್ಬಗಳಲ್ಲೇ ಅತಿ ಪ್ರಧಾನವಾದ ಹಬ್ಬವೆಂದರೆ ತಪ್ಪಾಗಲಾರದು. ಭಾದ್ರಪದ ಶುಕ್ಲ ತದಿಗೆಯಂದು ಪಾರ್ವತಿ ದೇವಿಯನ್ನು ಸ್ವರ್ಣಗೌರಿ ಸ್ವರೂಪದಲ್ಲಿ ಪೂಜೆ ಮಾಡಲಾಗುತ್ತದೆ.

source:ibtimes

ಸುಮಂಗಲಿಯರು ಪ್ರಾತಃ ಕಾಲದಲ್ಲೆದ್ದು ತಲೆಸ್ನಾನ ಮಾಡಿ ಹೊಸದಾದ ಬಟ್ಟೆಗಳನ್ನು ಧರಿಸಿ ಕಳಶಗೌರಿ/ ಅರಿಶಿನಗೌರಿ ಯನ್ನು ಪೂಜಿಸಬೇಕು. ದೇವರಿಗೆ ಅಕ್ಕಿಕಡಲೆಬೇಳೆ ಪಾಯಸ, ಹೋಳಿಗೆ ಗಳನ್ನೂ ನೈವೇದ್ಯಮಾಡಿ ಮುತ್ತೈದೆಯರಿಗೆ ಬಾಗಿನವನ್ನು ನೀಡಬೇಕು. ಮದುವೆಯಾದವರು ಧೀರ್ಘ ಸೌಮಾಂಗಲ್ಯಕ್ಕಾಗಿ, ಕನ್ಯೆಯರು ಶೀಘ್ರ ವಿವಾಹಕ್ಕಾಗಿ ಈ ವೃತವನ್ನು ಮಾಡುತ್ತಾರೆ.

source:bangalorepress.blogspot

ಈ ಹಬ್ಬದ ವಿಶೇಷವೆಂದರೆ ಗೌರಿ ಬಾಗಿನ. ಗೌರಿ ಬಾಗಿನ ಮಾಡಲು ಬೇಕಾದ ಸಾಮಾನುಗಳು:
ಬಿದಿರಿನಿಂದ ಮಾಡಿದ ಮೊರ-೧ ಜತೆ
ಬಾಳೆಎಲೆ: ೧
ಅಕ್ಕಿ: ೧ ಕಪ್
ತೊಗರಿಬೇಳೆ:೧ ಕಪ್
ಉದ್ಧಿನ ಬೇಳೆ; ೧ ಕಪ್
ಕಡಲೆಬೇಳೆ; ೧ ಕಪ್
ಹೆಸರುಬೇಳೆ: ೧ ಕಪ್
ಗೋಧಿ; ೧ ಕಪ್
ಅಚ್ಚು ಬೆಲ್ಲ; ೧
ಕಲ್ಲುಪ್ಪು: ೧ ಕಪ್
ಹುಣಸೆಹಣ್ಣು: ೧/೨ ಕಪ್
ಅರಿಶಿನ ಕುಂಕುಮದ ಪೊಟ್ಟಣ
ಗಾಜಿನ ಬಳೆಗಳು
ಬಳೆ ಬಿಚ್ಚೋಲೆ ಪೊಟ್ಟಣ: ೧
ಅರಿಶಿನದ ಕೊಂಬು
ರವಿಕೆ ಕಣ:೧
ಕಾಯಿ:೧
ಹಣ್ಣು:೧
ವಿಲ್ಯೆದೆಲೆ:೨
ಅಡಿಕೆ
ದಕ್ಷಿಣೆ: (ಶಕ್ತಾನುಸಾರ)
ಕೆಲವರು ಕರಿಮಣಿ, ಹವಳವನ್ನು ಇಡುತ್ತಾರೆ.

source: Madhwa-Wordpress

ಮೊರದ ಬಾಗಿನವನ್ನು ಒಂದು ರಾತ್ರಿ ನೀರಿನಲ್ಲಿ ನೆನೆಸಿ ೨ ದಿನಗಳ ಕಾಲ ನೆರಳಿನಲ್ಲಿ ಒಣಗಿಸಿ. ಅದು ಒಣಗಿದ ನಂತರ ಅದಕ್ಕೆ ಅರಿಶಿನ ಕುಂಕುಮವನ್ನು ಹಚ್ಚಿ ಒಂದು ಮೊರದ ಮೇಲೆ ಬಾಳೆ ಎಲೆಯನ್ನು ಹಾಸಿ ಮೇಲೆ ಹೇಳಿರುವ ಸಾಮಾನುಗಳನ್ನು ಜೋಡಿಸಿ ಅದರ ಮೇಲೆ ಮತ್ತೊಂದು ಮೊರವನ್ನು ಮುಚ್ಚಿ ಬಾಗಿನವನ್ನು ಸಿದ್ಧಪಡಿಸಿಕೊಳ್ಳಿ.

source: quora