ಬಾಹುಬಲಿ ನಿರ್ಮಾಪಕ ಮನೆಯಲ್ಲಿ 60 ಕೋಟಿ ‘ರದ್ದಿ’ ನೋಟು ವಶ

0
828

ಬಾಕ್ಸ್ ಆಫೀಸ್ ನಲ್ಲಿ ಧೂಳೀಪಟ ಮಾಡಿದ ಬಾಹುಬಲಿ ಚಿತ್ರದ ನಿರ್ಮಾಪಕರ ಮನೆಗೆ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ ಮಾಡಿದ್ದಾರೆ.

ಎರಡು ದಿನಗಳ ಹಿಂದೆ ಕೇಂದ್ರ ಸರಕಾರ ರದ್ದುಪಡಿಸಿದ ೫೦೦ ಮತ್ತು ೧೦೦೦ ಮುಖಬೆಲೆಯ ಸುಮಾರು ೬೦ ಕೋಟಿ ರೂ. ವಶಪಡಿಸಿಕೊಂಡಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ತಮಿಳು- ತೆಲುಗು ಭಾಷೆಯಲ್ಲಿ ಬಿಡುಗಡೆಯಾದ ಬಾಹುಬಲಿ ಚಿತ್ರ ೬೫೦ ಕೋಟಿ ರೂ. ಕೊಳ್ಳೆ ಹೊಡೆದಿತ್ತು. ಇದೀಗ ಅದರ ಎರಡನೇ ಭಾಗದ ಚಿತ್ರಿಕರಣ ಅಂತಿಮ ಹಂತದಲ್ಲಿದೆ.

ಚಿತ್ರದ ನಿರ್ಮಾಪಕರಾದ ಶೋಭು ಯರಲಗಡ ಮತ್ತು ಪ್ರಸಾದ್ ದೇವಿಯಾನಿ ಅವರ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ನಡೆದಿದೆ.

ಮನೆಯಲ್ಲಿ ಮತ್ತು ಕಚೇರಿಯಲ್ಲಿ ದೊರೆತ ೫೦೦ ಮತ್ತು ೧೦೦೦ ಮುಖಬೆಲೆಯ ೬೦ ಕೋಟಿ ಮೌಲ್ಯದ ನೋಟುಗಳನ್ನು ‘ಅಕ್ರಮ’ ಎಂದು ಅಧಿಕಾರಿಗಳು ಘೋಷಿಸಿದ್ದಾರೆ.
ಇವರನ್ನು ನೋಡಿದರೆ ರಾಜನಾಥ್ ಸಿಂಗ್ ಅವರ ಈ ಮಾತು ನೆನಪಿಗೆ ಬರುತ್ತದೆ.