68 ದಿನ ಉಪವಾಸ ಮಾಡಿದ ೧೩ ವರ್ಷದ ಬಾಲಕಿ ಸಾವು

0
874

68 ದಿನ ಉಪವಾಸ ಮಾಡಿದ ೧೩ ವರ್ಷದ ಬಾಲಕಿ ಸಾವು
jain
ಜೈನ ಸಂಪ್ರದಾಯದಂತೆ ಚಾತುರ್ಮಾಸದಲ್ಲಿ ಉಪವಾಸ ಕುಳಿತಿದ್ದ ಹೈದರಾಬಾದ್ ಮೂಲದ ೧೩ ವರ್ಷದ ಬಾಲಕಿ ಸಾವಿಗೀಡಾದ ದಾರುಣ ಘಟನೆ ನಡೆದಿದೆ.

೮ನೇ ತರಗತಿ ಓದುತ್ತಿದ್ದ ಆರಾಧನಾ ಜೈನ ಸಮು ದಾಯಕ್ಕೆ ಸೇರಿದವಳು. ಚಾರುಮಾಸದಲ್ಲಿ ಉಪವಾಸ ಮಾಡುವುದು ವಾಡಿಕೆ. ಈ ಬಾಲಕಿ ಸಂಪ್ರದಾಯದಂತೆ ೬೮ ದಿನ ಉಪವಾಸ ಪೂರೈಸಿದ್ದಳು. ೨ ದಿನಗಳ ನಂತರ ಅಸ್ವಸ್ತಳಾದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾ ಯಿತಾದರೂ ಹೃದಯಾಘಾತದಿಂದ ಮೃತಪಟ್ಟಿರುವು ದಾಗಿ ವೈದ್ಯರು ತಿಳಿಸಿದ್ದಾರೆ.

ಪುಟ್ಟ ಮಗುವನ್ನು ಇಷ್ಟು ದಿನ ಉಪವಾಸ ಮಾಡಲು ಬಿಟ್ಟ ಹೆತ್ತವರ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಇದೇ ವೇಳೆ ಬಾಲಕಿಯ ಅಂತ್ಯಕ್ರಿಯೆಯಲ್ಲಿ ೬೦೦ ಕ್ಕೂ ಅಧಿಕ ಮಂದಿ ಭಾಗವಹಿಸಿದ್ದು, , ಬಾಲಕಿಯನ್ನು ‘ಬಾಲ ತಪಸ್ವಿ’ ಎಂದು ಹಾಡಿ ಹೊಗಳಿದ್ದಾರೆ. ಅಲ್ಲದೇ ಶೋಭಾ ಯಾತ್ರೆ ಕೂಡ ನಡೆಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬಗ್ಗೆ ಯಾವುದೆ ಮಾಹಿತಿ ಇಲ್ಲ.