ಜಾಕಿಚಾನ್ ಗೆ ಸಿಕ್ಕಿದೆ ಜೀವಮಾನದ ಶ್ರೇಷ್ಠ ಪ್ರಶಸ್ತಿ…

0
847

ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ನಿರ್ಮಿಸಿ, ತನ್ನ ಸಿನಿಮಾವನ್ನು ಜಗದಗಲ ವಿಸ್ತರಿಸಿದ ಮಾರ್ಷಲ್ ಆರ್ಟ್ಸ್ ಪ್ರವೀಣ ಹಾಗೂ ನಟ ಜಾಕಿ ಚಾನ್ ಗೆ ಜೀವಮಾನದ ಅತ್ಯುತ್ತುಮ ಸಾಧನೆಗಾಗಿ ಆಸ್ಕರ್ ಪ್ರಶಸ್ತಿ. ಸಾಹಸ ಪ್ರಧಾನ ಚಿತ್ರಗಳ ಸ್ಟಾರ್, ವಿಶ್ವ ವಿಖ್ಯಾತ ನಟರಾದ ಜಾಕಿಚಾನ್ ಅವರಿಗೆ ‘ಆಸ್ಕರ್’ ಅವಾರ್ಡ್ ಲಭಿಸಿದೆ. ಸಿನಿಮಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಅವರಿಗೆ ‘ಆಸ್ಕರ್’ ಅವಾರ್ಡ್ ನೀಡಿ ಗೌರವಿಸಲಾಗಿದೆ.

master

ಲಾಸ್ ಏಂಜಲೀಸ್ ನಲ್ಲಿ ನವೆಂಬರ್ ನಲ್ಲಿ ನೆಡೆದ ಸಮಾರಂಭದಲ್ಲಿ ಜಾಕಿ ಚಾನ್ ಗೆ ಈ ಪ್ರಶಸ್ತಿ ಮಾಡಲಾಯಿತು. ಸಾಮಾನ್ಯ ನಟರಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಜಾಕಿಚಾನ್ ಹಂತ ಹಂತವಾಗಿ ನೆಲೆ ಕಂಡುಕೊಂಡು ತಮ್ಮದೇ ಆದ ಮಾರ್ಷಲ್ ಆರ್ಟ್ಸ್ ಶೈಲಿಯ ಚಿತ್ರಗಳ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್ 62 ವರ್ಷದ ಜಾಕಿ ಚಾನ್ ಗೆ ಈ ಪ್ರಶಸ್ತಿ ಘೋಷಿಸಿದೆ. ಹಾಲಿವುಡ್ ಸಿನಿಮಾಗಳಾದ ಕುಂಗ್ ಫು ಪಾಂಡಾ, ದಿ ಕರಾಟೆ ಕಿಡ್ ಮತ್ತು ರಷ್ ಅವರ್ ಸಿನಿಮಾಗಳಲ್ಲಿ ಜಾಕಿ ಜಾನ್ ನಟಿಸಿದ್ದಾರೆ. ಹಾಂಕ್ ಕಾಂಗ್ ನಲ್ಲಿ ಜನಿಸಿದ ಜಾಕಿಚಾನ್ ಗೆ 2016 ರಲ್ಲಿ ಗವರ್ನರ್ಸ್ ಆವಾರ್ಡ್ ಕೂಡ ಲಭಿಸಿದೆ.

ent_jackiechan_1114

ತನ್ನ 8ನೇ ವಯಸ್ಸಿಗೆ ನಟನೆ ಆರಂಭಿಸಿದ ಜಾಕಿ ಹಾಂಗ್ ಕಾಂಗ್ ನ ಸುಮಾರು 30 ಮಾರ್ಷಲ್ ಆರ್ಟ್ಸ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2016ರ ಪ್ರಪಂಚದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಜಾಕಿಚಾನ್ ಎರಡನೇ ಸ್ಥಾನ ಪಡೆದಿದ್ದರು.62 ವರ್ಷದ ಹಿರಿಯ ನಟ 50 ವರ್ಷಗಳಿಂದ ಮನರಂಜನಾ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಶನಿವಾರ ಲಾಸ್ ಏಂಜಲೀಸ್ ನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಜಾಕಿಚಾನ್ ಅವರಿಗೆ ‘ಆಸ್ಕರ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ‘ದಿ ಪ್ರೊಟೆಕ್ಟರ್’, ‘ದಿ ಕರಾಟೆ ಕಿಡ್’ ಮೊದಲಾದ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.

ನಟನೆ ಮಾತ್ರವಲ್ಲದೇ ಸಿನಿಮಾ ಮೇಕಿಂಗ್ ನ ಹಲವು ವಿಭಾಗಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅವರೂ ಒಬ್ಬರಾಗಿದ್ದಾರೆ. ಇದೀಗ ಅವರಿಗೆ ‘ಆಸ್ಕರ್’ ಅವಾರ್ಡ್ ಲಭಿಸಿದೆ.