ಜನಾರ್ದನ ರೆಡ್ಡಿಯ 900 ಕೋಟಿ ರೂ. ಆಸ್ತಿ ವಾಪಸ್ ಹಿಂದಿರುಗಿಸುವಂತೆ ಹೈಕೋರ್ಟ್ ಆದೇಶ

0
509

ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.  ರೆಡ್ಡಿಯ 900 ಕೋಟಿ ರೂ. ಮೊತ್ತದ ಆಸ್ತಿಯನ್ನು ಹಿಂದಿರಿಗಿಸುವಂತೆ ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ.

ಇದೇ ಕಾಯಿದೆಗೆ 2009ರಲ್ಲಿ ತರಲಾಗಿರುವ ತಿದ್ದುಪಡಿಯಂತೆ ರೆಡ್ಡಿಯವರ ಮೇಲೆ 2014ರಲ್ಲಿ ಜಾರಿಗೊಳಿಸುವ ಈ ಪ್ರಕರಣಕ್ಕೆ ಅನ್ವಯಿಸುವ ಹಾಗಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಕ್ರಮ ‌ಗಣಿಗಾರಿಕೆ ಪ್ರಕರಣದಲ್ಲಿ 2011 ರಲ್ಲಿ ಜಾರಿ ನಿರ್ದೇಶನಾಲವು ಜನಾರ್ದನ ರೆಡ್ಡಿ ಮನೆ, ಹೆಲಿಕಾಪ್ಟರ್ ಇತ್ಯಾದಿ ಸೇರಿದಂತೆ 884 ಕೋಟಿ ರೂಪಾಯಿ ಮೊತ್ತದ ಆಸ್ತಿ ಜಪ್ತಿ ಮಾಡಿಕೊಂಡಿತ್ತು. ನ್ಯಾಯಾಲಯವು ರೆಡ್ಡಿ ವಿರುದ್ಧದ ಇಡಿ, ಒಎಂಸಿ, ಬ್ರಹ್ಮಿಣಿ ಸ್ಟೀಲ್, ಲಕ್ಷ್ಮಿ ಅರುಣಾ ವಿರುದ್ಧ ಪ್ರಕರಣಗಳನ್ನು ರದ್ದು ಪಡಿಸಿದೆ.

 

2004 – 2006 ರ ನಡುವೆ ಅಕ್ರಮ‌ ಗಣಿಗಾರಿಕೆ ನಡೆದಿತ್ತು. ಆದರೆ 2009 ರಲ್ಲಿ ಪಿಎಂಎಲ್ ಕಾಯ್ದೆ ತಿದ್ದುಪಡಿಯಾಗಿತ್ತು. ಕಾಯ್ದೆ ಪೂರ್ವಾನ್ವಯ ಸಾಧ್ಯವಿಲ್ಲವೆಂದು ಹೈಕೋರ್ಟ್ ತೀರ್ಪು ನೀಡಿದೆ.

ಆಸ್ತಿ ವಾಪಸ್ ನೀಡುವಂತೆ ಗಾಲಿ ಜನಾರ್ದನ ರೆಡ್ಡಿ ಹೈಕೋರ್ಟ್ ಮೋರೆ ಹೋಗಿದ್ದರು. ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ಕೈಗೊಂಡಿರುವ ಕ್ರಮದ ವಿರುದ್ಧ ರೆಡ್ಡಿಯವರು ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಅದರ ವಿಚಾರಣೆಯ ತೀರ್ಪು ಮಾರ್ಚ್ 13ರಂದು ಬಂದಿದೆ.