ವಿಶ್ವದ ಜನಸಂಖ್ಯೆ 2053ಕ್ಕೆ 1000 ಕೋಟಿ!

0
644

ವಿಶ್ವದ ಜನಸಂಖ್ಯೆ 2053ಕ್ಕೆ 1000 ಕೋಟಿ!

ವಿಶ್ವದ ಜನಸಂಖ್ಯೆ ಈಗ 740 ಕೋಟಿ ಇದ್ದು, 2050ರ ವೇಳೆಗೆ 990 ಕೋಟಿಗೆ ಏರಿಕೆಯಾಗಲಿದೆ. ಇದು ಶೇ. 33ರಷ್ಟು ಏರಿಕೆ ಎಂದು ವಿಶ್ವ ಜನಸಂಖ್ಯಾ ದಾಖಲಾತಿ ಕೇಂದ್ರ (ಪಿಆತ್’ಬಿ) ಅಂದಾಜಿಸಿದೆ. 2053ರ ವೇಳೆಗೆ ಜನಸಂಖ್ಯೆಯೇ 1000 ಕೋಟಿ ತಲುಪಲಿದೆ. ಇದರಲ್ಲಿ ಏಷ್ಯಾದ ಜನಸಂಖ್ಯೆಯೇ 530 ಕೋಟಿ ಆಗಲಿದೆ ಎಂದು ಹೇಳಿದೆ. ವಿಶ್ವದ ಸಂತಾಆಭಿವೃದ್ಧಿ ಪ್ರಮಾಣ ಇಳಿಮುಖವಾದರೂ, ಜನಸಂಖ್ಯೆ ಏರುಮುಖದಲ್ಲಿಯೇ ಇರುತ್ತದೆ ಎಂದು ಪಿಆರ್’ಬಿ ಸಿಇಒ ಮತ್ತು ಅಧ್ಯಕ್ಷ ಜೆಫ್ರಿ ಜೋರ್ಡನ್ ತಿಳಿದ್ದಾರೆ.

ಎಲ್ಲಿ ಏನಾಗುತ್ತದೆ?

*ವಿಶ್ವದ 29 ರಾಷ್ಟ್ರಗಳಲ್ಲಿ (ಹೆಚ್ಚಿನವು ಆಫ್ರಕಾ ಖಂಡದವು) ಜನಸಂಖ್ಯೆ ದುಪ್ಪಟ್ಟಿಗಿಂತ ಹೆಚ್ಚಾಗಲಿದೆ.

*ಆಫ್ರಿಕಾದ ನೈಗರ್ ದೇಶದಲ್ಲಿ ಅತ್ಯಧಿಕ ಜನನ ಪ್ರಮಾಣ ಇದ್ದು. ಅಲ್ಲಿ 2050ರ ವೇಳೆಗೆ ಜನಸಂಖ್ಯೆ ಮೂರು ಪಟ್ಟು ಹೆಚ್ಚಾಗಬಹುದು.

*ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಯುರೋಪ್ ಖಂಡದ 42 ದೇಶಗಳಲ್ಲಿ ಜನಸಂಖ್ಯೆ ಪ್ರಮಾಣ ಇಳಿಕೆಯಾಗಲಿದೆ. *ಯುರೋಪಿನ ರುಮೇನಿಯಾದಲ್ಲಿ ಪ್ರಸ್ತುತ 2 ಕೋಟಿ ಇರುವ ಜನಸಂಖ್ಯೆ 2050ರ ವೇಳೆಗೆ 1.4 ಕೋಟಿಗೆ ಕುಸಿಯಬಹುದು ಎಂಬುದು ಪಿಆರ್’ಬಿ ಸಂಶೋಧಕರ ಲೆಕ್ಕಾಚಾರವಾಗಲಿದೆ.

2050ಕ್ಕೆ ವಿವಿಧ ಖಂಡಗಳ ಜನಸಂಖ್ಯೆ

*120 ಕೋಟಿ ಅಮೆರಿಕ (ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ ಸೇರಿ ಈಗಿನದ್ದಕ್ಕಿಂತ 22.3 ಕೋಟಿ ಹೆಚ್ಚಳ)

*72.8 ಕೋಟಿ ಯುರೋಪ್ (ಈಗಿನದ್ದಕ್ಕಿಂತ 1.2 ಕೋಟಿ ಇಳಿಕೆ)

*530 ಕೋಟಿ ಏಷ್ಯಾ (ಈಗಿನದ್ದಕ್ಕಿಂತ 90 ಕೋಟಿ ಹೆಚ್ಚಳ)

260 ಕೋಟಿ ಆಫ್ರೀಕಾ.