ಜನ್ಮಾಂತರ – ಪುನರ್ಜನ್ಮ ಕಾರ್ಯಕ್ರಮಗಳಿಗೆ ಬೇಕಿದೆ ವೈಜ್ಞಾನಿಕ ವಿಶ್ಲೇಷಣೆಯ ಅಗತ್ಯ !

0
1425

ಆಕೆಯ ಮಗನಿಗೆ ಅದೇನಾಗಿತ್ತೋ ಗೊತ್ತಿಲ್ಲಾ!! ಮನಸಿನಲ್ಲಿ ನಿಲ್ಲದ ಯೊಚನೆಗಳು, ಹತ್ತನೇ ತರಗತಿಯಲ್ಲಿ ರಾಜ್ಯಕ್ಕೆ ಮೊದಲಿಗನಾಗುತ್ತಾನೆ ಏಂದುಕೊಂಡಿದ್ದ ಎಲ್ಲಾರಿಗೂ ನಿರಾಸೆ,1 ವರ್ಷ ಶಾಲೆಗೆ ಹೋಗಲಿಲ್ಲ, ಅದ್ಯಾರೊ, ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಜನ್ಮಾಂತರ – ಪುನರ್ಜನ್ಮ ಕಾರ್ಯಕ್ರಮದ ಬಗ್ಗೆ ಹೇಳಿ, ನಿಮ್ಮ ಮಗನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಏಂಥೆಂಥ ಖಾಯಿಲೆಗಳನ್ನೆಲ್ಲಾ ಅದರಲ್ಲಿ ವಾಸಿಮಾಡಿದ್ದಾರೆ, ಏನೊ ನಿಮ್ಮ ಮಗನಿಗೆ ಹಿಂದಿನ ಜನ್ಮದ ನೆನಪು ಇರಬಹುದು ಎಂದರು, ಸರಿ ಎಂದು ಆಕೆ ಮಗ ಸರಿ ಹೊದರೆ ಸಾಕೆಂಬ ದೂರದ ಆಶಾಕಿರಣ, ಆ ಕಾರ್ಯಕ್ರಮ ಪ್ರಸಾರವಾಗುತ್ತಿದ್ದ ಚಾನೆಲ್‍ಗೆ ಕಾಗದ ಬರೆದಳು!! ಮರುತ್ತರ ಬಂತು ಈಗ ಸದ್ಯ ಕಾರ್ಯಕ್ರಮ ಪೂರ್ತಿಯಾಗೆದೆ, ಗುರೂಜಿಯವರ ಕಚೇರಿಗೆ ಕರೆತನ್ನಿ, ಸ್ವಲ್ಪ ಕರ್ಚಾಗುಬಹುದು ಏಂಬ ಉತ್ತರ!! ಪತಿಯನ್ನು ಕಳೆದುಕೊಂಡು ಹ್ಯೇರಾಣಗಿದ್ದ ಆಕೆ ಸುಮ್ಮನಾದಳು. ಯಾವ ಕಾರ್ಯಕ್ರಮದ ಬಗ್ಗೆ ಹೀಳುತ್ತಿದ್ದಿನಿ ಎಂದು ನಿಮಗೆಲ್ಲಾ ಈಗಾಗಲೇ ತಿಳಿದಿರಬಹುದು.

%e0%b2%9c%e0%b2%a8%e0%b3%8d%e0%b2%ae%e0%b2%be%e0%b2%82%e0%b2%a4%e0%b2%b0

ಹೌದು, ಕಾಮಿಡಿ ಟೈಮ್ಸ್, ಕಾಮಿಡಿ ಷೋ, ಕಾಮಿಡಿ ಕಿಲಾಡಿಗಳು, ನಂತರ ಪ್ರಸಾರವಾಗುತ್ತಿರುವ ಹಾಸ್ಯ ಕಾರ್ಯಕ್ರಮಗಳು ಯಾವುವು ಎಂದು ಕೇಳಿದರೆ ಸಿಗುವ ಸಾಮಾನ್ಯ ಉತ್ತರ ಕೆಲವೊಂದು ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವ ಪುನರ್‍ಜನ್ಮ ಹಾಗೂ ಜನ್ಮಾಂತರಕ್ಕೆ ಸಂಬಂದಿಸಿದ ಕಾರ್ಯಕ್ರಮಗಳು., ಎಕೆಂದರೆ, ಅತ್ಯಂತ ಮನೋರಂಜನೆಯನ್ನು ನೀಡುತ್ತಿರುವ ಕಾರ್ಯಕ್ರಮಗಳಲ್ಲಿ ಇವೂ ಕೂಡ ಒಂದು ಇವುಗಳನ್ನು ನಂಬರ್ ಒನ್ ಕಾರ್ಯಕ್ರಮಗಳೆಂದರೆ ತಪ್ಪಾಗಲಾರದು, ನಿಜಹೇಳಬೇಕೆಂದರೆ ಬಹಳ ಸೀರಿಯಸ್ ಆಗಿ ಪ್ರಾರಂಭವಾಗುವ ಕಾರ್ಯಕ್ರಮ ಇತ್ತೀಚೆಗೆ ಕಾಮಿಡಿ ಶೋಗಳನ್ನು ಮೀರಿಸುವಂತೆ ಪ್ರಸಾರವಾಗುತ್ತಿವೆ. ಈ ಕಾರ್ಯಕ್ರಮಗಳಿಂದ ಟಿವಿ ವೀಕ್ಷಕರಿಗೆ ಟಿವಿ ಚಾನೆಲ್‍ಗಳು ರವಾನಿಸುತ್ತಿರುವ ಸಂದೇಶವಾದರೂ ಏನು? ಎಂಬುದು ಆ ಭಗವಂತನೇ ಬಲ್ಲ!

ನಿಜ ಹೇಳಬೇಕೆಂದರೆ ಪುನರ್ ಜನ್ಮಕ್ಕೆ ಇದುವರೆಗೆ ಸಾಬೀತು ಪಡಿಸುವ ವೈಜ್ಞಾನನಿಕ ಕಾರಣವಾಗಲೀ ವಿಶ್ಲೇಷಣೆಯಾಗಲಿ ಲಭ್ಯವಿಲ್ಲ ! ಹಾಗಾಗಿ ಪುನರ್ ಜನ್ಮ ಎಂಬುದು ಒಂದು ನಂಬಿಕೆ ಹಾಗೂ ಕಲ್ಪನೆಯಾಗಿಯೇ ಉಳಿದಿದೆ. ಪುನರ್ ಜನ್ಮವನ್ನು ಸಾಬೀತು ಮಾಡಲು ಇದುವರೆವಿಗೂ ಯಾರಿಗೂ ಸಾಧ್ಯವಾಗಿಲ್ಲ 4, 3, 2, 1 ಪಟ್ ಅಂತಾ ವ್ಯಕ್ತಿಗಳನ್ನು ಸಮ್ಮೋಹನಗೊಳಿಸಿ ಹಿಂದಿನ ಜನ್ಮಕ್ಕೆ ಕರೆದೊಯ್ಯಲು ಸಾಧ್ಯವೇ ! ಇಂದಿನ ಜನ್ಮದಲ್ಲಿ ಬಳಲುತ್ತಿರುವ ಖಾಯಿಲೆಗೆ ಹಿಂದಿನ ಜನ್ಮದ ಯಾವುದೇ ಘಟನೆಯನ್ನು ತುಳುಕು ಹಾಕುವುದು ಎಷ್ಟು ಸರಿ?. ವಿಜ್ಞಾನದಲ್ಲಿ ಕಣ್ಣಿಗೆ ಕಾಣಿಸಿದ್ದನ್ನು ಮಾತ್ರ ನಂಬಲು ಸಾಧ್ಯ ಈ ಕಾರ್ಯಕ್ರಮದಲ್ಲಿ ಸಮ್ಮೋಹನಕ್ಕೊಳಗಾಗಿ ಹಿಂದಿನ ಜನ್ಮದ ರಹಸ್ಯ! ವಸ್ತು ತೆರೆದಿರುವುದನ್ನು ವೆರಿಫೈ ಮೊಡಲು ಯಾವುದಾದರೂ ವೈಜ್ಞಾನಿಕ ಮಾನದಂಡಗಳನ್ನು ಈ ಕಾರ್ಯಕ್ರಮ ನೆಡೆಸುವವರು ತೋರಿಸಬಲ್ಲರೇ?

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ವಯಂಸೇವಕರುಗಳ ಮಾನಸಿಕ ದೌರ್ಬಲ್ಯವನ್ನು ಈ ಕಾರ್ಯಕರ್ಮದಲ್ಲಿ ದುರುಪಯೋಗ ಪಡಿಸಿಕೊಂಡು ವೀಕ್ಷಕರಿಗೆ ಪುಕ್ಕಟೆ ಮನರಂಜನೆಯನ್ನು ನೀಡಿತ್ತಾ ವೀಕ್ಷಕರ ಜಾಲವನ್ನು ಹೆಚ್ಚಿಸಿಕೊಳ್ಳಲು ಈ ಟಿವಿ ಚೆನಲ್‍ಗಳು ಪೈಪೆÇೀಟಿ ನಡೆಸುತ್ತಿವೆ ಎಂದರೆ ತಪ್ಪಾಗಲಾರದು ! ಈ ಕಾರ್ಯಕ್ರಮದಲ್ಲಿ ಸಮ್ಮೋಹನಕ್ಕೊಳಗಾದ ವ್ಯಕ್ತಿಗಳು ಆಡುವ ಪರಿಯನ್ನು ನೋಡಿದರೆ ಎಂತಹವರಿಗೂ ನಗು ಬರದೆ ಇರದು ! ಒಬ್ಬ ತಾನು ಕರಡಿಯಾಗಿದ್ದೆ ಎಂದು ಹೇಳಿ ಇಡೀ ಸ್ಟುಡಿಯೋದ ತುಂಬ ಕರಡಿಯ ಹಾಗೆ ಓಡಾಡಿದ್ದರೆ, ಇನ್ನೊಂದು ಚಾನಲ್‍ನಲ್ಲಿ ಗೃಹಣಿ ನಾಗಿಣಿಯಾಗಿ ಸ್ಟುಡಿಯೋ ತುಂಬಾ ಹೊರಳಾಡಿ ಕಾರ್ಯಕ್ರಮ ನೆಡೆಸುವವರು ಆಕೆಗೆ ಆರತಿಯನ್ನು ಬೆಳಗಿದ್ದನ್ನು ಎಲ್ಲ ವೀಕ್ಷಕರು ನೋಡಿರಬಹುದು ! ಕರಡಿ ಕುಣಿತ ನಾಗಿಣಿ ನೃತ್ಯದಂತೆ ಇನ್ನೂ ಏನೇನು ಸರ್ಕಸ್‍ಗಳು ಈ ಕಾರ್ಯಕ್ರಮದಲ್ಲಿ ಅಡಗಿ ಕುಳಿತಿದೇಯೋ?

ಈ ಕಾರ್ಯಕ್ರಮ ನಡೆಸುವ ಗುರುಜೀಗಳೇ ಹೇಳಿದಂತೆ ! ಸಮ್ಮೋಹನಗೊಂಡ ವ್ಯಕ್ತಿಯ ಸುಪ್ತ ಮನಸ್ಸು ಜಾಗೃತ ವಾಗುವುದರ ಜೊತೆ ಜಾಗೃತ ಮನಸ್ಸು ಸಹ ಎಚ್ಚರವಾಗಿಯೇ ಇರುತ್ತದಂತೆ ! ಇವರ ಹೇಳಿಕೆ ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೆ ಇದೆ! ಸಮ್ಮೋಹನಕ್ಕೊಳಗಾದ ವ್ಯಕ್ತಿಯ ಜಾಗೃತ ಮನಸ್ಸೆ ಈ ರೀತಿಯ (ಕಟ್ಟು) ಕಥೆಗಳನ್ನು ಹೇಳುತ್ತಿರಬಹುದಲ್ಲವೇ? ಸಮ್ಮೋಹನಕ್ಕೊಳಗಾದ ವ್ಯಕ್ತಿ ಸುಪ್ತ ಮನಸ್ಸಿನಿಂದಲೇ ಮಾತನಾಡುತ್ತಿದ್ದಾನೆ ಎಂದು, ಪ್ರಾಮಾಣಿಕರಿಗೆ ಹೇಳಲು ಗೂರೂಜಿಗಳಿಗೆ ಸಾಧ್ಯವೇ? ಇವರು ಹೇಳುತ್ತಿರುವುದೆಲ್ಲ ನಿಜ ಎಂದು ಹೇಗೆ ನಂಬುವುದು?

ಈ ಕಾರ್ಯಕ್ರಮ ಪ್ರಾರಂಭವಾದ ಹೊಸತರಲ್ಲಿ ಅನೇಕ “ಸೆಲಿಬ್ರಿಟಿ” ವ್ಯಕ್ತಿಗಳೇ! ಈ ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದ್ದು ಆಶ್ಚರ್ಯಕರ ಸಂಗತಿ! ಈ ಕಾರ್ಯಕ್ರಮದಲ್ಲಿ ಹಿಂದೊಮ್ಮೆ ಭಾಗವಹಿಸಿದ್ದ ಅಸಾಮಿಯೊಬ್ಬ ತಾನು ಹಿಂದಿನ ಜನ್ಮದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಯೇ ಆಗಿದ್ದೆ ಎಂದು ಬೊಗಳೆ ಬಿಟ್ಟವನ ಬಂಡವಾಳ ಎನು ಅಂತ ಈಗ ಕರ್ನಾಟಕದ ಜನರಿಗೆ ಈಗ ಗೊತ್ತಾಗಿದೆ. ಈತ ಶ್ರೀ ರಾಘವೇಂದ್ರ ಸ್ವಾಮಿಯೇ ಆಗಿದ್ದೆ ಎಂದು ಈ ಕಾರ್ಯಕ್ರಮ ಕಾರ್ಯಕ್ರಮ ನೆಡೆಸುವವರು ಸಾಬೀತು ಪಡಿಸಲು ಸಧ್ಯಾವೇ?? ಇಂಥಹ ಕಾರ್ಯಕ್ರಮಗಳನ್ನು ಕೆಲವರು ದುರುಪಯೋಗ ಮಾಡಿಕೊಳ್ಳುವ ಸಾಕ್ಷಾತ್ ಶ್ರಿಮನ್ನಾರಾಯಣನಗಿದ್ದೆ ಎಂದರೆ ನಂಬಲು ಸಾಧ್ಯವೇ? ಹಾಗೆ ಹೇಳುವ ದಿನ ದೂರವಿಲ್ಲ!

ಕೆಲವರು ಈ ಜನ್ಮದಲ್ಲಿ ವೈದ್ಯಕೀಯ ಕ್ಷೇತ್ರದಿಂದಲೂ ಸಹ ಗುಣಪಡಿಸಲಾಗದೇ ಬಳಲುತ್ತಿರುವ ರೋಗಕ್ಕೆ ಈ ಜನ್ಮದಲ್ಲಿ ನಡೆದ ಒಂದು ಘಟನೆ ನಮ್ಮ ಸುಪ್ತಮನಸ್ಸನ್ನು ಜಾಗೃತಗೊಳಿಸಿ ನಮ್ಮನ್ನು ಹೀಗೆ ಕಾಡಿಸುತ್ತದೆ ಎಂದು ಕಾರ್ಯಕ್ರಮ ನೆಡೆಸುವವರು ಹೇಳುತ್ತಾರೆ. ಇಂಥಹ ಹೇಳಿಕೆಗಳೆಲ್ಲ ಯಾವುದೇ ಹುರುಳಿಲ್ಲವೆಂದು ನನಗನಿಸುತ್ತದೆ. ಈ ಜನ್ಮದಲ್ಲಿ ಜ್ಯೋತಿಷಿಯಾಗಲು ಹಿಂದಿನ ಜನ್ಮದಲ್ಲೂ ಜ್ಯೋತಿಷಿಯಾಗಿದ್ದೆ, ಕಾರಣ ಎಂದು ಖ್ಯಾತ ಜ್ಯೋತಿಷಿಯೊಬ್ಬರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಹೇಳಿದರೆ ಈ ಜನ್ಮದಲ್ಲಿ ಏಕಾಂಗಿಯಾಗಿರಲು ಕಾರಣ ಹಿಂದಿನ ಜನ್ಮದಲ್ಲಿ ಗಂಡನಿಗೆ ಸಂಸಾರ ಸುಖವನ್ನು ಕೊಡದೆ ಶಾಪಕ್ಕೊಳಗಾಗಿದ್ದು, ಜನ್ಮಾಂತರಗಳಲ್ಲಿಯೂ ಏಕಾಂಗಿಯಾಗಿರುವಂತೆ ಶಾಪಕೊಟ್ಟನೆಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟರೊಬ್ಬರು ಹೇಳಿದ್ದರು.

ಸಮಾನ್ಯವಾಗಿ ಮನುಷ್ಯ ಯಾವುದಾದರೂ ತೊಂದರೆಯಿಂದ ಬಳಲುತ್ತಿದ್ದರೆ, ಅದರ ಬಗ್ಗೆಯೇ ಸದಾ ಯೋಚಿಸುತ್ತಿರುತ್ತೇವೆ. ಹಾಗಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಜಾಗೃತ (ದುರ್ಬಲ) ಮನಸ್ಸು, ಅದಕ್ಕೆ ಸರಿಹೊಂದುವ ಕಥೆಯೊಂದನ್ನು ಹೆಣೆದು ಹೇಳಿರಬಹುದಲ್ಲವೇ? ಸುಪ್ತಮನಸ್ಸೆ ಈ ಕಥೆಗಳನ್ನು ಘಟನೆಗಳನ್ನು ಹೇಳುತ್ತಿದೆ. ಎಂದು ಸಾಬೀತು ಪಡಿಸಲು ಸಾಧ್ಯವಿಲ್ಲ ! ಈ ಕಾರ್ಯಕ್ರಮ ನಡೆಸುತ್ತಿರುವ ಸ್ವಯಂಘೋಷಿತ ಗುರೂಜಿಗಳು ಸಕ್ಕರೆ ಖಾಯಿಲೆ, ಬಿ.ಪಿ. ಇದ್ದವರು ನನ್ನ ಬಳಿ ಬರಲಿರುವ ಶೇ.90 ರ ಷ್ಟು ಮಂದಿಗೆ ಗುಣಪಡಿಸುತ್ತೇನೆ ಎಂದು ಹೇಳಿದ್ದಾರೆ. ನನ್ನದೊಂದು ಪ್ರಶ್ನೆ, ಈ ಕಾರ್ಯಕ್ರಮದಲ್ಲಿ ಏಡ್ಸ್ ರೋಗಿಗಳನ್ನು ಕರೆದುಕೊಂಡು ಬಂದು ಏಡ್ಸ್‍ನ್ನು ಗುಣಪಡಿಸಲು ಸಾಧ್ಯವೇ? ಈ ಜನ್ಮದಲ್ಲಿ ಏಡ್ಸ್ ಬರಲು, ಹಿಂದಿನ ಜನ್ಮದ ಯಾವುದೋ ಸಂಬಂಧ ಕಾರಣವಿರಬಹುದಲ್ಲವೇ? ಈ ಜನ್ಮದಲ್ಲಿ ನಡೆದ ಘಟನೆಯೊಂದು ಈ ಖಾಯಿಲೆಗಳು ಬರಲು ಕಾರಣವಿರಬಹುದಲ್ಲವೇ? ಇನ್ನೂ ಈ ಕಾರ್ಯಕ್ರಮದಲ್ಲ ಕೊನೆಯಲ್ಲಿ ನಿಮಗಿನ್ನೂ ಈ ಜನ್ಮದಲ್ಲಿ ಯಾವ ಭಯವೂ ಇಲ್ಲ! ಚಿಂತೆಯೂ ಇಲ್ಲ. 4,3,2,1,0 ಅಂತಾ ಹೇಳ್ತಿನಿ ಯೆಸ್ ಅನ್ನಿ! ನಿಮ್ಮ ಮನಸ್ಸು ರಿಲ್ಯಾಕ್ಸ್ ಆಗಿರುತ್ತೆ! ಅಂತಾ ಹೇಳಿ ಖಾಯಿಲೆಯನ್ನು ಗುಣಪಡಿಸುವಂತಿದ್ದರೆ ಇಷ್ಟೊಂದು ಹೈಟೆಕ್ ಆಸ್ಪತ್ರೆಗಳು ದೇಶದಲ್ಲಿ ಎಕೆ ತಲೆ ಎತ್ತುತ್ತಿದ್ದವು ಸ್ವಾಮಿ?

ದುರ್ಬಲ ಮನಸ್ಸಿನವರನ್ನು ಉಪಯೋಗ ಪಡಿಸಿಕೊಂಡು ತಮ್ಮ ಕಾರ್ಯಕ್ರಮ ನೋಡುವ ವೀಕ್ಷಕರ ಜಾಲವನ್ನು ಹೆಚ್ಚಿಸಿಕೊಳ್ಳುವ ಹುನ್ನಾರ ಎಂದರೆ ತಪ್ಪೇನಿಲ್ಲ! ಈ ಕಾರ್ಯಕ್ರಮದ ಸತ್ಯಾಸತ್ಯತೆಯನ್ನು ವೈಜ್ಞಾನಿಕ ವಿಶ್ಲೇಷಣೆ ಗೊಳಿಸಪಡಿಸಬೇಕಾದ ಅವಶ್ಯಕತೆ ಅನಿವಾರ್ಯತೆ ಇದೆ. ಪ್ರಜ್ಞಾವಂತರು ಚಿಂತಕರು ಈ ನಿಟ್ಟಿನಲ್ಲಿ ಯೋಚಿಸಬೇಕಾದ ಅವಶ್ಯಕತೆ ಇದೆ. ಮುಗ್ಧರ ಹಾದಿ ತಪ್ಪಿಸುವ ಇಂತಹ ಕಾರ್ಯಕ್ರಮಗಳಿಗ ಪ್ರಸಾರಕ್ಕೆ ಕಡಿವಾಣ ಅತ್ಯಗತ್ಯ ಇದೆ, ಮಂತ್ರಕ್ಕೆ ಮಾವಿನಕಾಯಿ ಹೇಗೆ ಉದುರುವುದಿಲ್ಲವೋ ಹಾಗೆ ಸಮ್ಮೊಹನಗೊಳಿಸಿ ಖಾಯಿಲೆ ಗುಣಪಡಿಸುವಲು ಸಾಧ್ಯವಿಲ್ಲ! ಇದು ಸಾಧ್ಯವಿದ್ದಿದ್ದರೆ ಇಂದಿನ ಆಸ್ಪತ್ರೆಗಳು ನೋಣ ಹೊಡೆಯಬೇಕಾಗಿತ್ತು! ನಿದ್ರೆಗೆ ಜಾರುವ ಸಮಯದಲ್ಲಿ ಟಿ.ವಿ.ಯ ಮುಂದೆ ಕುಳಿತು ಅದರಲ್ಲಿ ಪ್ರಸಾರವಾಗುವ ಯಾರದೋ ಜನ್ಮಾಂತರದ ಕಟ್ಟು ಕಥೆಯನ್ನು ನೋಡಿ ಮಲಗುವುದು ಮನಸ್ಸಿನಲ್ಲಿ ಅದನ್ನೆ ತುಂಬಿಕೊಂಡು ಮಲಗುವುದು ಸರಿಯಲ್ಲ! ಈ ಕಾರ್ಯಕ್ರಮದಲ್ಲಿ ಉಗ್ರವಾದಿಗಳ ಬಾಯಿ ಬಿಡಿಸಲು ಸಾಧ್ಯವೇ ಖಂಡಿತ ಸಾಧ್ಯವಿಲ್ಲ. ಕಾರಣ ಇವರ ಜಾಗೃತ ಮನಸ್ಸು ಉತ್ತರ ಕೊಡುತ್ತಿರುತ್ತದೆ. ನಾನು ಈ ಕಾರ್ಯಕ್ರಮ ನೋಡುತ್ತಾ ಕುಳಿತರೆ ನನ್ನ ಮಗನದ್ದು ಒಂದೇ ರಗಳೆ, ಏನಪ್ಪ ಹುಚ್ಚುಚ್ಚು ಪ್ರೋಗ್ರಾಂನ್ನೆಲ್ಲ ನೋಡ್ತಿಯಾ? ಪೋಗೋ ಹಕಪ್ಪ ನಾನು ಟಾಮ್ ಎಂಡ್ ಜರ್ರಿ ನೋಡಬೇಕು. ಅಂತಾನೆ ನೋಡಿ 10 ವರ್ಷದ ಹುಡಗನಿಗು ಗೊತ್ತು ಈ ಕಾರ್ಯಕ್ರಮ ಢೊಂಗಿ ಎಂದು!

ಪ್ರಕಾಶ್.ಕೆ.ನಾಡಿಗ್ .