“ಜಂತಕಲ್ ಮೈನಿಂಗ್ ಅವ್ಯವಹಾರ” ಹದಿನಾಲ್ಕು ಜನ ಆರೋಪಿಗಳು, ಆದರೆ ಟಾರ್ಗೆಟ್ ಮಾತ್ರ ಹೆಚ್ಡಿ.ಡಿ.ಕುಮಾರಸ್ವಾಮಿ, ಯಾಕೆ?

0
952

150 ಕೋಟಿ ರೂಪಾಯಿ ಕಿಕ್‍ಬ್ಯಾಕ್ ಪಡೆದಿರುವ ಆರೋಪದಲ್ಲಿ ಹದಿನಾಲ್ಕು ಜನ ಆರೋಪಿಗಳು ಇದ್ದರು ಹೆಚ್.ಡಿ.ಕುಮಾರಸ್ವಾಮಿಯವರನ್ನೇ ಟಾರ್ಗೆಟ್ ಮಾಡಿರೋದು ಯಾಕೆ?

ಇಲ್ಲಿದೆ ನೋಡಿ ಹದಿನಾಲ್ಕು ಆರೋಪಿಗಳ ಪಟ್ಟಿ:

1. ಎಸ್.ಎಂ ಕೃಷ್ಣ
2. ಎನ್ ಧರ್ಮಸಿಂಗ್
3. ಹೆಚ್.ಡಿ. ಕುಮಾರಸ್ವಾಮಿ
4. ಡಾ.ಬಸಪ್ಪ ರೆಡ್ಡಿ
5. ಗಂಗಾರಮ್ ಬಡೇರಿಯಾ (ಐಎಎಸ್)
6. ವಿ.ಉಮೇಶ್ (ಐಎಎಸ್)
7. ಐ.ಆರ್. ಪೆರುಮಾಳ್ (ಐಎಎಸ್)
8. ಕೆ.ಎಸ್ ಮಂಜುನಾಥ್ (ಐಎಎಸ್)
9. ಡಿ.ಎಸ್. ಅಶ್ವಥ್ (ಐಎಎಸ್)
10. ಜೀಜಾ ಮಾಧವನ್ ಹರಿಸಿಂಗ್ (ಐಪಿಎಸ್)
11. ಮಹೇಂದ್ರ ಜೈನ್ (ಐಎಎಸ್)
12. ಕೆ. ಶ್ರೀನಿವಾಸ್
13. ಎಂ ರಾಮಪ್ಪ
14. ಶಂಕರ ಲಿಂಗಯ್ಯ

ನೀವು ಗಮನಿಸಿದರೆ ಈ ಆರೋಪ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರೋದು ಎಸ್.ಎಂ.ಕೃಷ್ಣ, ಎರಡನೇ ಸ್ಥಾನದಲ್ಲಿ ಧರ್ಮ ಸಿಂಗ್ ಹಾಗು ಮೂರನೇ ಸ್ಥಾನದಲ್ಲಿರೋದು ಹೆಚ್.ಡಿ.ಕುಮಾರಸ್ವಾಮಿ.

ಆದರೆ ಎಲ್ಲಾ ಮಾಧ್ಯಮದಲ್ಲೂ ಹೆಚ್.ಡಿ.ಕುಮಾರಸ್ವಾಮಿ ಯವರದೇ ಚರ್ಚೆ, ಯಾಕ್ ಸ್ವಾಮಿ ಮೊದಲೆರಡು ಆರೋಪಿಗಳ ಬಗ್ಗೆ ಚರ್ಚೆ ಇಲ್ಲ ಮಾಧ್ಯಮದಲ್ಲಿ? ಅಂತ ನೀವು ಕೇಳಿದ್ರೆ.

ಸಾಮಾನ್ಯಜನ :ಯಾಕ್ ಸ್ವಾಮಿ ಚರ್ಚೆ ಯಾಗಬೇಕು? ಮೊದಲೆರಡು ಆರೋಪಿಗಳು ರಾಷ್ಟ್ರೀಯ ಪಕ್ಷದವರು. ಅದರಲ್ಲೂ ಒಬ್ಬರಂತೂ ಒಂದು ರಾಷ್ಟ್ರೀಯ ಪಕ್ಷದಿಂದ ಇನ್ನೊಂದು(ಅಧಿಕಾರದಲ್ಲಿರುವ ಪಕ್ಷ) ರಾಷ್ಟ್ರೀಯ ಪಕ್ಷಕ್ಕೆ ಹಾರಿಬಂದವರು. ಇನ್ನು ಕುಮಾರಸ್ವಾಮಿಯವರು ಪ್ರಾದೇಶಿಕ ಪಕ್ಷಕ್ಕೆ ಸೇರಿದವರು, ಹಾಗಾಗಿ ಅವರಮೇಲೆ ಚರ್ಚೆ ಮಾಡ್ತಿದಾರೆ.

ಇನ್ನು ಕೆಲವರು : ರಾಷ್ಟ್ರೀಯ ಪಕ್ಷವಾದರೇನಂತೆ ಆರೋಪಿ, ಆರೋಪಿ ತಾನೇ?

ಸಾಮಾನ್ಯಜನ: ಹೌದು ಸ್ವಾಮಿ ನಮ್ಮಂಥ ಸಾಮಾನ್ಯ ಜನರಿಗೆ ಅರೋಪಿಗಳೆಲ್ಲ ಒಂದೇನೆ, ಆದ್ರೆ ರಾಜಕೀಯದವರಿಗೆ ಹಾಗಲ್ಲ, ಅದಿರಲಿ ಮುಂಬರೋ ಚುನಾವಣೆಯಲ್ಲಿ ಪ್ರಭಾವ ಬೀರೋ ಅಂತ ಪಕ್ಷ ಯಾವುದು?

ಕೆಲವರು: ಈಗಿನ ಆಡಳಿತ ಪಕ್ಷದ ಆಡಳಿತ ನೋಡಿ ಸಾಕಾಗಿದೆ, ಮುಂದೆ ಬರೋ ಚುನಾವಣೇಲಿ ಇವರು ಅಧಿಕಾರಕ್ಕೆ ಬರೋ ಲಕ್ಷಣಗಳು ತುಂಬಾ ಕಮ್ಮಿ ಹಾಗಾಗಿ ಬಿ.ಜೆ.ಪಿ ಅಥವಾ ಜೆ.ಡಿ.ಎಸ್ ಪಕ್ಷಕ್ಕೆ ಅವಕಾಶ ಇದೆ.

ಸಾಮಾನ್ಯಜನ: ಹೌದಲ್ವಾ, ಹಾಗಿದ್ದಲ್ಲಿ ನಿಮಗೆ ಇದರಲ್ಲಿ ಗೆಲ್ಲುವ ಸಾಮರ್ಥ್ಯ ಇರುವ ಪಕ್ಷ ಯಾವುದು ಅಂತ ಅನಿಸುತ್ತೆ?

ಕೆಲವರು: ಬಿ.ಜೆ.ಪಿ ಪಕ್ಷ ಯಾರ ಸಾರಥ್ಯದಲ್ಲಿ ಚುನಾವಣೆಗೆ ಇಳಿಯುತಾರೆ ಎಂಬುದರ ಮೇಲೆ ಅವರ ಚುನಾವಣಾ ಫಲಿತಾಂಶ ಅವಲಂಬಿಸಿರುತ್ತೆ ಹಾಗೆ ದೇಶಭಕ್ತಿ ಜೊತೆಗೆ ಸ್ವಲ್ಪ ಪ್ರಾದೇಶಿಕತೆನ(ಇಲ್ಲಿನ ಜನ,ಭಾಷೆ,ಜಲ,ನೆಲದ ಬಗ್ಗೆ) ಬೆಳೆಸ್ಕೊಂಡ್ರೆ ಅವರು ಕೂಡ ಗೆಲುವಿನ ಕುದುರೇನ ಏರೋ ಬಗ್ಗೆ ಕನಸು ಕಾಣಬಹುದು. ಆದರೆ ಜೆ.ಡಿ.ಎಸ್ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಜಾಸ್ತಿ ಅನ್ಸುತ್ತೆ, ಯಾಕಂದ್ರೆ ಅದೊಂದು ಪ್ರಾದೇಶಿಕ ಪಕ್ಷ ಜನ, ನೆಲ, ಜಲ, ಭಾಷೆಯ ಬಗ್ಗೆ ಅದರಲ್ಲೂ ರೈತರ ಬಗ್ಗೆ ಅಪಾರ ಕಾಳಜಿ ಇರೋದ್ರಿಂದ ಜೆ.ಡಿ.ಎಸ್ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಜಾಸ್ತಿ.

ಸಾಮಾನ್ಯಜನ: ಹೌದು ತಾನೆ, ಹಂಗಿದ್ಮೇಲೆ ಗೆಲ್ಲುವ ಕುದುರೆಯ ಕಾಲನ್ನ ಮುರಿದರೆ ಏನಾಗುತ್ತೆ? ಕುದುರೆ ಸೋಲುತ್ತೆ, ಇದೇ ಆಗ್ತೀರೋದು ಈ ವಿಚಾರದಲ್ಲಿ. ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಕಮ್ಮಿ, ಅದೇ ಜೆ.ಡಿ.ಎಸ್ ಪಕ್ಷದ ನಾಯಕನ ಮೇಲಿರುವ ಆರೋಪವನ್ನ ಮಾಧ್ಯಮದ ಮೂಲಕ ಪ್ರಚಾರ ಮಾಡಿ ಅವರನ್ನ ಮೂಲೆಗುಂಪು ಮಾಡಿದರೆ ಚುನಾವಣೆ ಗೆಲ್ಲುವ ಹಾದಿ ಸುಲ್ಲಭ.

ಇಷ್ಟು ದಿನ ಇಲ್ಲದ ಆರೋಪ ಈಗ ಹೆಚ್.ಡಿ.ಕೆ ಮೇಲೆ ಏಕಾಏಕಿ ಹೇಗೆ ಬರಲು ಸಾಧ್ಯ? ಇದಕ್ಕೆಲ ಕಾರಣ ೨೦೧೮ ನೇ ಚುನಾವಣೆ, ಹೇಗಾದ್ರು ಮಾಡಿ ತಮ್ಮ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲೇ ಬೇಕು ಎಂಬ ಕಾರಣಕ್ಕೆ ರಾಷ್ಟ್ರೀಯ ಪಕ್ಷವೊಂದು ಈ ಷಡ್ಯಂತ್ರ ರಚಿಸಿದೆ ಅಂತ ಸಾಮಾನ್ಯಜನ ಅಭಿಪ್ರಾಯವಾಗಿದೆ.