ಔದಾರ್ಯತೆ ಮೆರೆದ ಸಚಿವ, ಮಾಡಿದ್ದಾದರೂ ಏನು…?

0
914

ಸಾರ್ವಜನಿಕರ ಸೇವೆಗಾಗಿ ತಮ್ಮ ಜೀವವನ್ನೇ ಕೊಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ರಾಜಕೀಯ ನಾಯಕರ ಮದ್ಯೆ ಅದಕ್ಕೆ ತದ್ವಿರುದ್ಧವೆಂಬಂತೆ ತಾವು ಜನಗಳಿಗಾಗಿ ಬದುಕುತ್ತಿದ್ದೇವೆ ಎಬುದನ್ನು ಮಾಡಿ ತೋರಿಸಿದ್ದಾರೆ ವಾಯುಯಾನ ಸಚಿವ ಜಯಂತ್ ಸಿನ್ಹಾ.

ಹೌದು, ಅಸ್ವಸ್ಥ ತಾಯಿ – ಮಗಳು ಬೆಂಗಳೂರಿನಿಂದ ರಾಂಚಿಗೆ ಹೋಗಲು ಇಂಡಿಗೋ ವಿಮಾನದ ಮಿತವ್ಯಯದ ದರ್ಜೆಯಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಆದರೆ ಕಾಲಿನ ತೊಂದರೆ ಹೊಂದಿದ್ದ ತಾಯಿಗೆ ಕಾಲು ಚಾಚಿಕೊಂಡು ಕುಳಿತುಕೊಳ್ಳುವುದು ಆ ಸೀಟಿನಲ್ಲಿ ಅಸಾಧ್ಯವಾಗಿತ್ತು. ಅದನ್ನು ಕಂಡ ಕೇಂದ್ರ ಸಹಾಯಕ ನಾಗರಿಕ ವಾಯುಯಾನ ಸಚಿವ ಜಯಂತ್ ಸಿನ್ಹಾ ಅವರು ಕೋಲ್ಕತಾ – ರಾಂಚಿ ಪ್ರಯಾಣದ ಇಂಡಿಗೋ ವಿಮಾನದಲ್ಲಿನ ತನ್ನ ಹಾಗೂ ತನ್ನ ಪತ್ನಿಗಾಗಿ ಕಾದಿರಿಸಲಾಗಿದ್ದ ಮುಂದಿನ ಸಾಲಿನ ವಿಐಪಿ ಸೀಟುಗಳನ್ನು , ಸಹ ಪ್ರಯಾಣಿಕರಾಗಿದ್ದ ಅಸ್ವಸ್ಥ ತಾಯಿ ಹಾಗೂ ಮಗಳಿಗಾಗಿ ಬಿಟ್ಟುಕೊಟ್ಟು ತಾವು ಮಿತವ್ಯಯದ ದರ್ಜೆಯ ಸೀಟುಗಳಲ್ಲಿ ಪ್ರಯಾಣಿಸುವ ಔದಾರ್ಯವನ್ನು ತೋರಿ ಇತರರಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

1478491373-637

ಇದರಿಂದಾಗಿ ಮುಂದಿನ ಸಾಲಿನ ಎಕ್ಸ್ ಎಲ್ (ಮುಂಬಾಗಿಲಿನ ಸಮೀಪವಿರುವ, ಕಾಲು ಚಾಚುವ ಸ್ಥಳಾವಕಾಶವಿರುವ) ಸೀಟು ಖಾಲಿ ಇದ್ದುದರಿಂದ ತಾಯಿ – ಮಗಳು ಆ ಸೀಟುಗಳಲ್ಲಿ ಕುಳಿತುಕೊಂಡರು. ಮಾತ್ರವಲ್ಲದೆ ತಾಯಿ – ಮಗಳು ಅದೇ ಸೀಟಿನಲ್ಲಿ ಕುಳಿತು ಪ್ರಯಾಣ ಮುಂದುವರಿಸುವಂತೆಯೂ, ತಾವು ಮಿತವ್ಯಯದ ದರ್ಜೆಯ ಸೀಟುಗಳಲ್ಲಿ ಕುಳಿತುಕೊಳ್ಳುವುದಾಗಿಯೂ ಹೇಳಿ ತಾಯಿ – ಮಗಳನ್ನು ಸಮಾಧಾನಿಸಿದರು. ವಿಮಾನದಲ್ಲಿ ತನ್ನ ಅಸ್ವಸ್ಥ ತಾಯಿಯೊಂದಿಗೆ ಪ್ರಯಾಣಿಸುತ್ತಿದ್ದ ಮಗಳು ಶ್ರೇಯಾ ಪ್ರದೀಪ್ ಟ್ವಿಟರ್ನಲ್ಲಿ ಸಚಿವ ಜಯಂತ್ ಸಿನ್ಹಾ ತೋರಿರುವ ಔದಾರ್ಯ, ಸಹೃದಯತೆಯನ್ನು ಬಹುವಾಗಿ ಮೆಚ್ಚಿ ಧನ್ಯವಾದ ಹೇಳಿದ್ದಾರೆ. ಸಚಿವ ಜಯಂತ್ ಸಿನ್ಹಾ ಅವರ ಜತೆಗೆ ವಿಮಾನದಲ್ಲಿ ತಾವು ತೆಗೆದುಕೊಂಡಿರುವ ಸೆಲ್ಫಿಯನ್ನು ಕೂಡ ಅಪ್ಲೋಡ್ ಮಾಡಿದ್ದಾರೆ.

ಕೋಲ್ಕತಾದಲ್ಲಿ ವಿಮಾನ ನಿಂತಾಗ, ಈ ವಿಮಾನವನ್ನೇರಿದ ಜಯಂತ್ ಸಿನ್ಹಾ ಮತ್ತು ಅವರ ಪತ್ನಿ, ತಮಗಾಗಿ ಕಾದಿರಿಸಲಾಗಿದ್ದ ಈ ವಿಐಪಿ ಸೀಟುಗಳಲ್ಲಿ ಕುಳಿತುಕೊಳ್ಳುವವರಿದ್ದರು. ಆದರೆ ಅಸ್ವಸ್ಥ ತಾಯಿ – ಮಗಳು ತಮ್ಮ ಸೀಟುಗಳಲ್ಲಿ ಕುಳಿತಿರುವುದನ್ನು ಕಂಡು ನಿಜ ವಿಷಯವನ್ನು ಅರಿತುಕೊಳ್ಳುವ ಸಹನೆ, ತಾಳ್ಮೆ , ಸಹೃದಯತೆಯನ್ನು ಸಿನ್ಹಾ ತೋರಿದರು.