ಮಳೆಗಾಲದಲ್ಲಿ ಹೆಚ್ಚಾಗಿ ಬರುವ ಕಾಮಾಲೆ ರೋಗವನ್ನು ತಡೆಗಟ್ಟಲು ನಿಮ್ಮ ಮನೆಯಲ್ಲಿರುವ ಮನೆಮದ್ದುಗಳನ್ನು ಬಳಸಿ..!

0
1797

ಈ ಕಾಮಾಲೆ ಅಥವಾ ಜಾಂಡಿಸ್ ಕಾಯಿಲೆ ಹೆಚ್ಚಾಗಿ ಮಳೆಗಾಲದಲ್ಲೇ ಕಾಣಿಸಿಕೊಳ್ಳುತ್ತದೆ ಹಾಗಾಗಿ ಇದು ನಿಮ್ಮ ಆರೋಗ್ಯದಲ್ಲಿ ತುಂಬ ಏರುಪೇರು ತರುವಂತಹ ಖಾಯಿಲೆಯಾಗಿದೆ ಆದುದರಿಂದ ಇದರಿಂದ ನೀವು ತುಂಬ ಜಾಗ್ರತೆವಹಿಸುವುದು ತುಂಬ ಒಳಿತು. ಜಾಂಡಿಸ್ ಅಥವಾ ಈ ಕಾಮಾಲೆ ರೋಗ ಹೇಗೆ ಬರುತ್ತೆ ಮತ್ತು ಇದರ ಲಕ್ಷಣಗಳು ಹಾಗೆ ಇದಕ್ಕೆ ನಮ್ಮ ಮನೆಯಲ್ಲೇ ಇರುವ ಮನೆಮದ್ದುಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ.

source:webgardi.pardad.ir

ಕಾಮಾಲೆ ಅಥವಾ ಜಾಂಡಿಸ್ ಲಕ್ಷಣಗಳು:
ಯೂರಿನ್‌ನ ಬಣ್ಣ ಡಾರ್ಕ್‌ ಹಳದಿ ಬಣ್ಣಕ್ಕೆ ತಿರುಗುತ್ತದೆ, ಜೊತೆಗೆ ಮಲದ ಬಣ್ಣ ಬಿಳಿ ಬಣ್ಣದಿಂದ ಕೂಡಿರುತ್ತದೆ. ಇದಲ್ಲದೆ ಶೀಘ್ರ ತೂಕ ಇಳಿಕೆ, ಹೊಟ್ಟೆ ನೋವು, ತುಂಬಾ ಸಮಯದವರೆಗೂ ಸುಸ್ತಾಗುವುದು, ಸ್ಕಿನ್‌ ಮತ್ತು ಕಣ್ಣು ಹಳದಿಯಾಗುವುದು, ವಾಂತಿಯಾಗುವುದು ಅಥವಾ ತುರಿಕೆ ಕಾಣಿಸಿಕೊಳ್ಳುತ್ತದೆ.

ಕಾಮಾಲೆ ಅಥವಾ ಜಾಂಡೀಸ್‌ ನಿವಾರಣೆಗೆ ಮನೆಮದ್ದು :

೧.ಬೆಳಗ್ಗೆ ಮತ್ತು ಸಂಜೆ ಮೂಲಂಗಿ ಮತ್ತು ಅದರ ಎಲೆಯ ರಸ ಸೇವಿಸಿ. ಅಥವಾ ಅದಕ್ಕೆ ಉಪ್ಪು ಮತ್ತು ಕರಿಮೆಣಸು ಸೇರಿಸಿ ಮೂಲಂಗಿಯನ್ನು ತಿನ್ನಿ.

source:Pinterest

೨.ಈರುಳ್ಳಿಯನ್ನು ಕತ್ತರಿಸಿ ಅದಕ್ಕೆ ನಿಂಬೆ ರಸ, ಕಪ್ಪು ಉಪ್ಪು ಮತ್ತು ಕರಿಮೆಣಸು ಸೇರಿಸಿ ಬೆಳಗ್ಗೆ ಮತ್ತು ಸಂಜೆ ಸೇವಿಸಿ.

source:Find Home Remedy

೩.ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಒಂದು ಕಪ್‌ ನೆಲ್ಲಿಕಾಯಿ ರಸದಲ್ಲಿ ಒಂದು ಚಮಚ ಜೇನು ಮಿಕ್ಸ್‌ ಮಾಡಿ ಸೇವನೆ ಮಾಡಿ.
ಪ್ರತಿದಿನ ಬೆಳಗ್ಗೆ – ಸಂಕೆ 4 -5 ತುಳಸಿ ಎಲೆಗಳನ್ನು ಜಗಿದು ತಿನ್ನಿ.

source:searchhomeremedy.com

೪.ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್‌ ಟೊಮ್ಯಾಟೊ ಜ್ಯೂಸ್‌ನಲ್ಲಿ ಉಪ್ಪು ಮತ್ತು ಕರಿಮೆಣಸು ಪುಡಿ ಸೇರಿಸಿ ಸೇವಿಸಿ.
೫. ಪ್ರತಿದಿನ ಪಪ್ಪಾಯಿ ಸೇವಿಸಿ ಅಲ್ಲದೆ ಪಪ್ಪಾಯಿಯ ಎಲೆಗಳನ್ನು ಸೇವಿಸಿದರೂ ಉತ್ತಮ.

source:essentialoil.in

೬.ದಿನದಲ್ಲಿ 2 ಅಥವಾ 3 ಬಾರಿ ನಿಂಬೆ ಜ್ಯೂಸ್‌ ಸೇವಿಸಿ. ಇದರಿಂದ ಕಾಮಲೆ ರೋಗ ಕಡಿಮೆಯಾಗುತ್ತದೆ.

೭.ಕಬ್ಬಿನ ಹಾಲು ಕಾಮಾಲೆಗೆ ಕಬ್ಬಿನ ಹಾಲು ಸಹಾ ಉತ್ತಮ ಆಹಾರವಾಗಿದೆ. ದಿನಕ್ಕೊಂದು ಲೋಟ ಕಬ್ಬಿನಹಾಲು ಕುಡಿಯುವುದರಿಂದ ಯಕೃತ್ ತನ್ನ ಹಿಂದಿನ ಸ್ಥಿತಿಯನ್ನು ಪಡೆಯಲು ನೆರವಾಗುತ್ತದೆ ಹಾಗೂ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ.

source:Food NDTV

೮.ದಾಳಿಂಬೆ ದಾಳಿಂಬೆ ಹಣ್ಣಿನಲ್ಲಿಯೂ ವಿವಿಧ ಆಂಟಿ ಆಕ್ಸಿಡೆಂಟುಗಳು, ವಿವಿಧ ಪೋಷಕಾಂಶಗಳು ಹಾಗೂ ಉತ್ತಮ ಪ್ರಮಾಣದ ಸೋಡಿಯಂ ಇದ್ದು ಯಕೃತ್ ನ ಶೀಘ್ರ ಚೇತರಿಕೆಗೆ ನೆರವು ನೀಡುತ್ತದೆ.