ರಜನಿಕಾಂತ್ ಜೊತೆ ನಟಿಸುವ ಅವಕಾಶ ನಿರಾಕರಿಸಿದ್ದ ಜಯಲಲಿತಾ!

0
1887

ಸೂಪರ್ ಸ್ಟಾರ್ ರಜನಿಕಾಂತ್ ಗೂ ಎರಡು ದಿನಗಳ ಹಿಂದೆಯಷ್ಟೇ ನಿಧನರಾದ ನಟಿ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಡುವೆ ಉತ್ತಮ ಬಾಂಧವ್ಯ ಇರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ರಜನಿಕಾಂತ್ ಜೊತೆ ನಟಿಸುವ ಅವಕಾಶವನ್ನು ಜಯಲಲಿತಾ ನಿರಾಕರಿಸಿ ಬರೆದಿದ್ದ ಸುಮಾರು ೩೬ ವರ್ಷಗಲ ಹಿಂದಿನ ಪತ್ರವೊಂದನ್ನು ಪತ್ರಕರ್ತರೊಬ್ಬರು ಬಿಡುಗಡೆ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

೧೯೮೦ರಲ್ಲಿ ರಜನಿಕಾಂತ್ ಅಗಷ್ಟೇ ತಮಿಳು ಚಿತ್ರರಂಗ ದಲ್ಲಿ ನೆಲೆ ಕಂಡುಕೊಂಡಿದ್ದೂ ಅಲ್ಲದೇ ವೃತ್ತಿಜೀವನದಲ್ಲಿ ಉತ್ತಮ ಸ್ಥಾನ ಗಿಟ್ಟಿಸಿದ್ದರು. ಆಗಿನ್ನು ೩೨ ವರ್ಷದವ ರಾಗಿದ್ದ ಜಯಲಲಿತಾ ಚಿತ್ರಗಳಿಲ್ಲದೇ ಖಾಲಿ ಇದ್ದರು.
ಆಗಿನ ಪಿಯೂಚಿ (ಖಾಸ್ ಬಾತ್) ಗಾಸಿಪ್ ಗಳ ಕುರಿತ ಅಂಕಣ ಬರೆಯುತ್ತಿದ್ದ ಆಸ್ಟ್ರೇಲಿಯಾ ಮೂಲದ ಬ್ರಿಯಾನ್ ಲಾಲ್, ಬಾಲಾಜಿ ನಿರ್ದೇಶನದ ‘ಬಿಲ್ಲಾ’ ಚಿತ್ರದಲ್ಲಿ ರಜನಿಕಾಂತ್ ಜೊತೆ ನಟಿಸಲು ಜಯಲಲಿತಾ ನಿರಾಕರಿಸಿದ್ದಾರೆ ಎಂದು ವರದಿ ಮಾಡಿದ್ದರು.

ಈ ಬಗ್ಗೆ ಜಯಲಲಿತಾ ಅಂದು ತಮಗೆ ಬರೆದಿದ್ದ ಪತ್ರವನ್ನು ತಮ್ಮ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಪತ್ರದಲ್ಲಿ ತಮಗೆ ಬೇಡಿಕೆ ಇಲ್ಲದೇ ಇರಬಹುದು. ಆದರೆ ಚಿತ್ರರಂಗದಲ್ಲಿ ಎರಡನೇ ಇನಿಂಗ್ಸ್ ಆರಂಭಿಸುವ ಅಗತ್ಯವಿಲ್ಲ. ನಟಿಸಲೇಬೇಕಾದ ಹಣಕಾಸಿನ ಅನಿವಾರ್ಯತೆಯೂ ತಮಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.

jayalalithaa-rajinikanth_650x400_41481107247-1

ಜಯಲಲಿತಾಗೆ ಆಗಲೆ ಚಿತ್ರರಂಗದಿಂದ ಆಸಕ್ತಿ ಹೋಗಿತ್ತು. ಅವರು ನಟನೆ ಬಗ್ಗೆ ಗಮನ ಹರಿಸಲೇ ಇಲ್ಲ. ರಜನಿ ಜೊತೆ ನಟಿಸುವ ಉತ್ತಮ ಅವಕಾಶವನ್ನೂ ಕಳೆದು ಕೊಂಡರು ಎಂದು ಲಾಲ್ ಅಭಿಪ್ರಾಯಪಟ್ಟಿದ್ದಾರೆ.

ಪತ್ರಕರ್ತರು ಎಂದ ಮೇಲೆ ಗಾಸಿಪ್ ಇದ್ದಿದ್ದೆ. ಅದರಲ್ಲೂ ಸಿನಿಮಾ ವರದಿ ಅಂದ ಮೇಲೆ ಅದು ಸಹಜವಾದುದು. ಎಲ್ಲರೂ ಅದನ್ನು ಓದಿ ಒಂದು ಕ್ಷಣ ನಕ್ಕು ಕಸದಬುಟ್ಟಿಗೆ ಎಸೆಯುತ್ತಾರೆ. ಆದರೆ ಈ ಘಟನೆ ನನ್ನ ಪಾಲಿಗೆ ವಿಶೇಷ ಅನಿಸಿತು. ಹಾಗಾಗಿ ಈ ಪತ್ರವನ್ನು ಇಷ್ಟು ವರ್ಷಗಳಾದರೂ ಜೋಪಾನವಾಗಿ ಇಟ್ಟಿದ್ದೆ ಎಂದು ಲಾಲ್ ಹೇಳಿದ್ದಾರೆ
ಜಯಲಲಿತಾ ನಿರಾಕರಿಸಿದ ಈ ಪಾತ್ರ ನಂತರ ಶ್ರೀವಿದ್ಯಾ ಪಾಲಾಯಿತು. ಈ ವಿಷಯವನ್ನು ನಿರ್ದೇಶಕ ಬಾಲಾಜಿ ಸಾರ್ವಜನಿಕವಾಗಿಯೇ ಬಹಿರಂಗವಾಗಿ ಒಪ್ಪಿಕೊಂಡಿದ್ದರು.